
‘ಸೀಕರಣೆ’ ಎಂದಾಕ್ಷಣ ಬಾಯಲ್ಲಿ ನೀರೂರದೇ ಇರುವುದಿಲ್ಲ. ಬಾಳೆಹಣ್ಣಿನ ರಸಾಯನ ಮಾಮೂಲು. ಮಾವಿನಹಣ್ಣಿನ ರಸಾಯನ…. ಸೀಕರಣೆಯ ಸಂಭ್ರಮವೇ ಬೇರೆ. ಮಾವಿನಹಣ್ಣು ಹಣ್ಣುಗಳ ರಾಜನಲ್ಲವೇ? ಮಾವಿನಹಣ್ಣಿನ ಕಾಲದಲ್ಲಿ ಸೀಕರಣೆಯಾಗಿಬಿಟ್ಟು…. ಅದು ಸುಪರ್ಫಾಸ್ಟ ರಾಜಧಾನಿ ಎಕ್ಸಪ್ರೆಸ್ನಂತೆ ಶರವೇಗದಿಂದ ಓಡುತ್ತಿದ್ದರೆ ಉಳಿದ ಪಲ್ಯ, ಚಟ್ನಿ, ಕೋಸಂಬರಿಗಳೆಲ್ಲ ಬದಿಗೆ ಸರಿದು ಜಾಗ ಮಾಡಿಕೊಟ್ಟು ಮೂಲೆ ಸೇರುವುದೇ! ಸ್ವಲ್ಪ ತಾಳಿ! ಸೀಕರಣೆಯನ್ನು ಬಿಟ್ಟು ಉತ್ತರಕರ್ನಾಟಕಕ್ಕೆ ಬಂದು ‘ಶೀಕರ್ಣಿ’ಯನ್ನು ಸವಿಯೋಣ. ಇದು ಉತ್ತರ ಕರ್ನಾಟಕದಲ್ಲೇ ಹೆಚ್ಚು ಪ್ರಸಿದ್ಧ. ಇದರ ಇತಿಹಾಸವೂ ದೊಡ್ಡದೇ. ಯುಗಾದಿ ಹಬ್ಬದಲ್ಲಿ ಮಾವಿನಕಾಯಿ, ಮಾವಿನೆಲೆಗಳನ್ನು […]