ದೇಶದ ಜನತೆಯ ಸ್ವಾಸ್ಥ್ಯದ ಬಗೆಗೆ ಎಲ್ಲರೂ ಚಿಂತಿತರಾಗಬೇಕಾದಂತಹ ಹಲವಾರು ಮಾಹಿತಿಗಳು ಈಚಿನ ವರ್ಷಗಳಲ್ಲಿ ಬರುತ್ತಿವೆ. ತುಂಬಾ ಕಿರಿಯ ಪ್ರಾಯದವರು ಹೃದಯಬೇನೆಗಳಿಗೊಳಗಾಗುತ್ತಿರುವ ಪ್ರಮಾಣ ಹೆಚ್ಚುತ್ತಿದೆಯೆಂದು ಹೃದಯರೋಗತಜ್ಞರು ಹೇಳುತ್ತಿದ್ದಾರೆ. ಭಾರತೀಯ ಹೃದಯರೋಗಗಳ ಅಧ್ಯಯನ ಸಂಸ್ಥೆ (ಇಂಡಿಯನ್ ಹಾರ್ಟ್ ಅಸೋಸಿಯೇಷನ್) ಇತ್ತೀಚೆಗೆ ಹೊರಹಾಕಿರುವ ಈ ಮಾಹಿತಿ ತಳಮಳ ತರಿಸಬೇಕಾದದ್ದು: ಇಡೀ ಜಗತ್ತಿನಲ್ಲಿ ಹೃದಯಬೇನೆಗಳಿಗೊಳಗಾಗಿರುವವರಲ್ಲಿ ಭಾರತೀಯರ ಪ್ರಮಾಣ ಶೇ. 60ರಷ್ಟಿದೆ. ಹೃದಯಾಘಾತಕ್ಕೆ ಒಳಗಾಗುತ್ತಿರುವವರಲ್ಲಿ ಅರ್ಧದಷ್ಟು ಜನರ ವಯಸ್ಸು 50ಕ್ಕಿಂತ ಕಡಮೆ; ಶೇ. 25ರಷ್ಟು ಜನ 40 ವರ್ಷಕ್ಕಿಂತ ಕಡಮೆಯವರು. ಈ ದುಃಸ್ಥಿತಿಗೆ ಪ್ರಮುಖ […]
ಸ್ವಾಸ್ಥ್ಯಜಾಗೃತಿ
Month : April-2021 Episode : Author :