ಉತ್ಥಾನ ಫೆಬ್ರುವರಿ 2022
Month : February-2022 Episode : Author :
Month : February-2022 Episode : Author :
Month : February-2022 Episode : Author : ಆರತಿ ಪಟ್ರಮೆ
-ಆರತಿ ಪಟ್ರಮೆ ಹೊಸದಾಗಿ ಕಟ್ಟಿಸಿದಾಗ ಮನೆ ಹೇಗಿದ್ದಿತೋ ಹಾಗೆಯೇ ವರುಷಗಳು ಉರುಳಿದಂತೆ ಇರುವುದಕ್ಕೆ ಸಾಧ್ಯವಿಲ್ಲ, ನಿಜ. ಹಾಗೆಂದು ನಮಗೆ ನಾವೇ ಅಭ್ಯಾಸ ಮಾಡಿಕೊಂಡ ಕೆಲವು ಕ್ರಮಗಳಿಂದ ನಾವೇ ಕಳಚಿಕೊಳ್ಳುವುದೂ ಸಾಧ್ಯವಾಗುವುದಿಲ್ಲ. ಕೆಲವು ಕಡೆ ಅತೀವ ಕಾಳಜಿ, ಇನ್ನು ಕೆಲವೆಡೆ ತೀವ್ರ ನಿರ್ಲಕ್ಷ್ಯ. ಎಲ್ಲರೂ ಎಲ್ಲದರಲ್ಲೂ ಪರಿಪೂರ್ಣವಾಗಿರುವುದು ಸಾಧ್ಯವೇ? ಥೋ… ಅಡುಗೆಮನೆ ಪೂರ್ತಿ ಸ್ವಚ್ಛವಿಲ್ಲದೆ ಹೋದರೆ ಬೆಳಗ್ಗೆ ಅಡುಗೆಮನೆಗೆ ಬರುವುದಕ್ಕೇ ಮನಸ್ಸಾಗುವುದಿಲ್ಲ ಎಂಬುದು ನನ್ನ ಪ್ರತಿನಿತ್ಯದ ಉವಾಚ. ಇದು ಮಕ್ಕಳಿಗೂ ಎಷ್ಟು ಅಭ್ಯಾಸವಾಗಿದೆಯೆಂದರೆ ಮಕ್ಕಳಲ್ಲಿ ತೊಳೆದ ಪಾತ್ರೆಗಳನ್ನು ಒರೆಸಿ […]
Month : February-2022 Episode : Author : ರಾಧಾಕೃಷ್ಣ ಕಲ್ಚಾರ್
-ರಾಧಾಕೃಷ್ಣ ಕಲ್ಚಾರ್ ಇದುವರೆಗಿನ ನನ್ನ ಜೀವನ ಅರ್ಥವನ್ನು ಕಳೆದುಕೊಂಡು ನಿಸ್ಸಾರವಾಗಿ ಗೋಚರಿಸಿತು. ಒಬ್ಬ ಕ್ಷತ್ರಿಯಕುಮಾರನಾಗಿ, ರಾಜಪುತ್ರನಾಗಿ ನನ್ನ ಸಾಧನೆಯೇನು? ಬರೇ ಜಂಭ ಕೊಚ್ಚುತ್ತ ಅದರಲ್ಲಿ ಆತ್ಮತೃಪ್ತಿಯನ್ನು ಹೊಂದುತ್ತಿದ್ದೆನಲ್ಲ, ಇಷ್ಟು ದಿನ! ಮುಂದಿನ ನನ್ನ ಬಾಳಿನಲ್ಲಿ ಏನು ಸ್ವಾರಸ್ಯ? ಅಯ್ಯೋ ಎಂಬ ಮರುಕವು ನನ್ನ ಕುರಿತು ನನ್ನಲ್ಲಿ ಹುಟ್ಟಿತು. ನನ್ನ ಭಂಡಬಾಳುವೆಗೆ ಧಿಕ್ಕಾರವಿರಲಿ ಎಂದುಕೊಂಡೆ. ಎಷ್ಟು ಹೊತ್ತಾದರೂ ನಿದ್ರೆ ಸುಳಿಯಲಿಲ್ಲ. ಎವೆ ಮುಚ್ಚಿದರೆ ರಣರಂಗದ ದೃಶ್ಯ ಕಾಣುತ್ತಿತ್ತು, ಅರ್ಜುನನ ಯುದ್ಧದ ವಿಜೃಂಭಣೆ ಹಾದುಹೋಗುತ್ತಿತ್ತು. ನಾನು ರಣಹೇಡಿಯಾಗಿ ರಥದಿಂದ ಧುಮ್ಮಿಕ್ಕಿ […]
Month : February-2022 Episode : Author : ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ
-ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಕಜೆಯವರು ತಮ್ಮ ವೃತ್ತಿಯಲ್ಲಿ ಛಾಲೆಂಜ್ ಹಾಕುವುದು ಬೇರೆಯವರೊಂದಿಗಲ್ಲ, ತನ್ನೊಂದಿಗೇ. ಯಾವುದೇ ಸಂಕ್ಲಿಷ್ಟವಾದ ಕೇಸ್ ಬಂದರೂ ಸವಾಲಾಗಿ ಸ್ವೀಕರಿಸುತ್ತಾರೆ. ಯಶೋಭಾಜನರೂ ಆಗುತ್ತಾರೆ. ಅವರೇ ಹೇಳುವಂತೆ ಆಯುರ್ವೇದ ವೈದ್ಯನಿಗೆ ಚಿಕಿತ್ಸೆಗೆ ರೋಗಸೀಮೆ ಇಲ್ಲ. ಆತ ಸೀಮಾತೀತ. ಎಲ್ಲ ಬಗೆಯ ಎಲ್ಲ ಅವತಾರದ ವ್ಯಾಧಿಗಳಿಗೂ ಆತ ಧನ್ವಂತರಿಯಾಗಬೇಕು. ಕಳೆದ ೨೩ ವರ್ಷಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ರೋಗಿಗಳು ಇವರಿಂದ ಚಿಕಿತ್ಸೆ ಪಡೆದು ಸಾಂತ್ವನವನ್ನು ಕಂಡುಕೊಂಡಿದ್ದಾರೆ. ಡಾ. ಗಿರಿಧರ ಕಜೆಯವರ ಅವಿರತಕರ್ಮಶೀಲತೆಯ ಪ್ರಧಾನಕಾರಣವೆಂದರೆ ಅವರ ಮುಖದಲ್ಲಿರುವ ನಿತಾಂತ ಪ್ರಸನ್ನತೆ. […]
Month : February-2022 Episode : Author : ಎಚ್ ಮಂಜುನಾಥ ಭಟ್
ಕಾಶಿಯನ್ನು ತಮ್ಮ ಲೋಕಸಭಾ ಸ್ಥಾನವಾಗಿ ಆರಿಸಿಕೊಂಡ ಪ್ರಧಾನಿ ನರೇಂದ್ರಮೋದಿ ಅವರು ಈ ಪವಿತ್ರಕ್ಷೇತ್ರಕ್ಕೆ ಸಂಬಂಧಿಸಿ ಅಭೂತಪೂರ್ವವಾದ ಕಾರ್ಯವನ್ನೇ ಮಾಡಿದ್ದಾರೆ. ಇದು ಅಕ್ಷರಶಃ ಐತಿಹಾಸಿಕವೇ ಸರಿ. ಈ ಪ್ರಾಚೀನ ನಗರ, ಅದರಲ್ಲೂ ವಿಶ್ವನಾಥ ದೇವಾಲಯದ ಪರಿಸರ ಅವ್ಯವಸ್ಥೆಯ ಗೂಡಾಗಿದ್ದು, ನೈರ್ಮಲ್ಯದ ಅಭಾವ, ಗಿಜಿಗುಟ್ಟುವ ಮುರುಕಲು ಕಟ್ಟಡಗಳು ಮುಂತಾದವು ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರನ್ನು ಬಾಧಿಸುತ್ತಿದ್ದವು. ಏಕಕಾಲದಲ್ಲಿ ಹಲವು ಸಮಸ್ಯೆಗಳನ್ನು ಪರಿಹರಿಸುವ ಸಾಧನೆಯನ್ನು ಮೋದಿ ಮಾಡಿದ್ದಾರೆ. ಅಹಿಲ್ಯಾಬಾಯಿ ಹೋಳ್ಕರ್, ಮಹಾರಾಜಾ ರಣಜಿತ್ಸಿಂಗ್ ಮುಂತಾದವರು ಅಲ್ಲಿ ಮಾಡಿದ ಕಾರ್ಯದೊಂದಿಗೆ ಮೋದಿ ಅವರ […]
Month : February-2022 Episode : Author : ಅನಂತ ರಮೇಶ್
ಕಂಪ್ಯೂಟರ್ಗಳಲ್ಲಿ ಮನುಷ್ಯನು ತನ್ನ ಜ್ಞಾನ, ಶ್ರಮ ಮತ್ತು ಸಮಯ ವ್ಯಯಗಳಿಂದ ಉತ್ಪಾದಿಸುವ ಡಿಜಿಟಲ್ ನಾಣ್ಯವನ್ನು ಕ್ರಿಪ್ಟೋಕರೆನ್ಸಿ ಎಂದು ಸರಳವಾಗಿ ಕರೆಯಬಹುದಾಗಿದೆ. ಕ್ರಿಪ್ಟೋಕರೆನ್ಸಿಯ ಮೌಲ್ಯೀಕರಣ, ವಿನಿಮಯ ಮತ್ತು ಅದರಿಂದ ತೆರಬೇಕಾದ ಸಂಭಾವನೆ ಇತ್ಯಾದಿ ಚಟುವಟಿಕೆಗಳ ಸಂಸ್ಕರಣೆಗೆ ಮೈನಿಂಗ್ (ಗಣಿಗಾರಿಕೆ) ಎಂದು ಹೆಸರಿಸಲಾಗಿದೆ. ಅಂತರ್ಜಾಲದ ಬೃಹದ್ರೂಪ ಅನಾವರಣಗೊಳ್ಳುತ್ತ, ಅದರ ಉಪಯೋಗದ ಆಯಾಮಗಳೂ ವಿಶ್ವವ್ಯಾಪಿ ವಿಸ್ತಾರಗೊಳ್ಳುತ್ತ, ಅದೀಗ ಕ್ರಿಯಾಶೀಲ ಚಟುವಟಿಕೆಗಳ ಒಂದು ಅಂಗವೆನಿಸಿರುವುದು ವಾಸ್ತವ. ಪ್ರಸ್ತುತ ಸಾಮಾಜಿಕ ಜೀವನದಲ್ಲಿ ಅದು ತನ್ನ ಅವಿನಾಭಾವ ಸಂಬಂಧವನ್ನು ಸ್ಥಾಪಿಸಿರುವುದೂ ಸತ್ಯ. ಇಂಟರ್ನೆಟ್ ತನ್ನ ಜಾಲದಿಂದ […]
Month : February-2022 Episode : Author : ಎಸ್.ಆರ್.ಆರ್.
ನಮ್ಮ ದೇಶದ ಆಂದೋಲನಗಳಲ್ಲಿ ಒಂದು ಕುತ್ಸಿತತೆ ಇದೆ. ಆಂದೋಲನಗಳ ವೈಚಾರಿಕ ತಳಹದಿ ದುರ್ಬಲವೆನಿಸಿದಾಗ ಅವನ್ನು ರಾಜಕೀಯಗೊಳಿಸಿ ಅದು ಪ್ರಾದೇಶಿಕ ಅಸ್ಮಿತೆಯ ವಿಷಯವೆಂದು ಮಂಡಿಸಲಾಗುತ್ತದೆ. ಜಾನಪದ ಕಥೆಯಲ್ಲಿ ನೀನಾದರೇನು ಯಾರಾದರೇನು! ನನಗೆ ಬೇಕಾದ್ದೇನೆಂದಷ್ಟೆ ನನಗೆ ಗೊತ್ತು ಎಂದು ತೋಳ ಹೇಳಿದಂತೆ ಇದು. ೧೯೮೦ರ ದಶಕದಲ್ಲಿ ಇಂಥದೇ ಕಪಟತೆ ನಡೆದು ಅದಕ್ಕೆ ತುಂಬಾ ಬೆಲೆಯನ್ನು ತೆರಬೇಕಾಗಿಬಂದಿತ್ತು. ಪಂಜಾಬ್ ಈಗಲೂ ಅದೇ ಪ್ರಮಾದವನ್ನು ಪುನರಾವರ್ತಿಸುತ್ತಿದೆಯೆ? ಈಚಿನ ಕೃಷಿ ಸಂಬಂಧಿತವಾದ ಮೂರು ಸುಧಾರಣಾ ಶಾಸನಗಳನ್ನು ಕಳೆದ (೨೦೨೧) ನವೆಂಬರ್ ತಿಂಗಳಲ್ಲಿ ರದ್ದುಗೊಳಿಸಲಾಯಿತಷ್ಟೆ. ವಾಸ್ತವದೃಷ್ಟಿಯಿಂದ […]
Month : February-2022 Episode : Author :
ಕರ್ಮಣಾ ಜಾಯತೇ ಸರ್ವಂ ಕರ್ಮೈವ ಗತಿಸಾಧನಂ | ತಸ್ಮಾತ್ ಸರ್ವಪ್ರಯತ್ನೇನ ಸಾಧು ಕರ್ಮ ಸಮಾಚರೇತ್ || – ವಿಷ್ಣುಪುರಾಣ “ಜಗತ್ತಿನಲ್ಲಿ ಎಲ್ಲವೂ ಆಗುವುದು ಕರ್ಮಾಚರಣೆಯ ಮೂಲಕವೇ. ಉನ್ನತಿಗೋ ಅಧೋಗತಿಗೋ ಎಲ್ಲಕ್ಕೂ ಕಾರಣವಾಗುವುದು ಕರ್ಮಾಚರಣೆಯೇ. ಆದುದರಿಂದ ಇಷ್ಟಾನಿಷ್ಟಗಳಿಗೆ ಬಲಿಬೀಳದೆ ಆಲಸ್ಯ-ಅಲಕ್ಷ್ಯಗಳಿಗೆಡೆಗೊಡದೆ ವಿವೇಚನಪೂರ್ವಕವಾಗಿ ಲಬ್ಧ ಕರ್ಮಗಳನ್ನು ಪಾಲುಮಾರದೆ ನಡೆಸಬೇಕು.” ನಮ್ಮ ಇಡೀ ಜೀವನವಷ್ಟೂ ಕರ್ಮಾವಲಂಬಿಯಾದದ್ದು. ಇದರಿಂದ ಯಾರಿಗೂ ವಿನಾಯತಿ ಇಲ್ಲವೆಂಬುದು ಪ್ರಕೃತಿನಿಯಮ. ಆದರೆ ನಮ್ಮ ಪಾಲಿಗೆ ಬಂದ ಕೆಲಸವನ್ನು ಮನಃಪೂರ್ವಕವಾಗಿಯೂ ಉತ್ಸಾಹಪೂರ್ಣವಾಗಿಯೂ ಮಾಡುವುದರಿಂದ ಧನ್ಯತಾಭಾವವೂ ಪ್ರಸನ್ನತೆಯೂ ಉಂಟಾಗುತ್ತವೆ. ಒದಗಿದ ಕರ್ತವ್ಯದ […]
Month : February-2022 Episode : Author :
ಸೀತಾರಾಮ ಗೋಯಲ್ ಅವರ ಜನ್ಮಶತಾಬ್ದ ಪ್ರಯುಕ್ತ ಉತ್ಥಾನ ವಿಶೇಷ ಅಂತರ್ಜಾಲ ಉಪನ್ಯಾಸವನ್ನು ಆಯೋಜಿಸಿದೆ. ವಿಯೆಟ್ನಾಂನ ವಿವೇಕಾನಂದ ಕೇಂದ್ರದ ನಿರ್ದೇಶಕರಾಗಿದ್ದ ಖ್ಯಾತ ಲೇಖಕರು, ಚಿಂತಕರು ಆಗಿರುವ ಶ್ರೀ ಜಿ.ಬಿ ಹರೀಶ್ ಉಪನ್ಯಾಸ ನೀಡಲಿದ್ದಾರೆ. ದಿನಾಂಕ: ಫೆಬ್ರುವರಿ 12, 2022 ಶನಿವಾರ ಸಂಜೆ 6ಕ್ಕೆ ನೇರಪ್ರಸಾರ: www.facebook.com/utthana.magazine ಉತ್ಥಾನ ಅಂತರ್ಜಾಲ ಉಪನ್ಯಾಸಗಳ ಸರಣಿಯ ಎಲ್ಲ ಉಪನ್ಯಾಸಗಳನ್ನು ಇಲ್ಲಿ ವೀಕ್ಷಿಸಬಹುದು: www.facebook.com/utthana.magazine
Month : February-2022 Episode : Author :