ತೆಲುಗಿನಲ್ಲಿ: ಪುಟ್ಟಗಂಟಿ ಗೋಪೀಕೃಷ್ಣ ಕನ್ನಡಕ್ಕೆ: ಎಸ್.ಆರ್. ರಾಮಸ್ವಾಮಿ ಇಲ್ಲಿಯವರೆಗೆ… ಉದ್ಯಮಪತಿ ಮಹೇಶ್ ಮಿಸ್ತ್ರಿ ಭವಿಷ್ಯದಲ್ಲಿ ಇಡೀ ಜಗತ್ತನ್ನೇ ತನ್ನ ಕೈಗೊಂಬೆಯಾಗಿಸಬಲ್ಲ ಪ್ರೌಢ ಪ್ರಯೋಗಗಳಿಗಾಗಿ ನಾಗಪುರದ ಸಮೀಪದಲ್ಲಿ ಸಯನ್ಸ್ ಸಿಟಿ ನಿರ್ಮಿಸಿದ್ದ. ಅಲ್ಲಿ ಪ್ರಯೋಗನಿರತರಾಗಿದ್ದ ಮೇಧಾವಿ ಅವಧೂತ್ ಕೊನೆಯ ಹಂತದಲ್ಲಿ ಅದೇಕೊ ಜಿಹಾಸೆ ತಳೆದು ತಾನು ಶೋಧವನ್ನು ಮುಂದುವರಿಸಲಾರೆನೆಂದು ಹೇಳಿ ಆತ್ಮಹತ್ಯೆ ಮಾಡಿಕೊಂಡರು. ಪ್ರಯೋಗವನ್ನು ಮುಂದುವರಿಸಲು ದೆಹಲಿಯ ಐ.ಐ.ಟಿ.ಯ ಪ್ರತಿಭಾವಂತ ವಿದ್ಯಾರ್ಥಿ ಮಯಾಂಕ್‌ನನ್ನು ಮಿಸ್ತ್ರಿ ನೇಮಿಸಿಕೊಂಡ. ಏತನ್ಮಧ್ಯೆ ಮಯಾಂಕ್ ವಿವಾಹವಾಯಿತು; ಪತ್ನಿ ದೇವಯಾನಿಯೊಡನೆ ಸಯನ್ಸ್ ಸಿಟಿಗೆ ಸೇರಿ ಕಾರ್ಯಾರಂಭ […]











