
(ಕಳೆದ ಸಂಚಿಕೆಯಿಂದ) 1857ರ ಮೇ ಹತ್ತರಂದು ಮೀರಠ್ನ ಅಶ್ವದಳ ಹಚ್ಚಿದ ಬಂಡಾಯದ ಕಿಡಿ ಅತಿ ಶೀಘ್ರದಲ್ಲಿ ದೆಹಲಿ, ಪಂಜಾಬ್, ರಾಜಪುತಾನಾ, ಆಗ್ರಾ, ಅವಧ, ಕಾನ್ಪುರ, ಝಾನ್ಸಿ, ಜಗದೀಶಪುರ ಮೊದಲಾದೆಡೆ ಹಬ್ಬಿ ಕ್ರಾಂತಿಯ ದಾವಾನಲವಾಗಿ ಪರಿಣಮಿಸುತ್ತದೆ. ಎಲ್ಲೆಡೆ ಪುರುಷರು-ಸ್ತ್ರೀಯರು, ವೃದ್ಧರು-ಹಸುಳೆಗಳು ಎಂಬ ತರತಮವಿಲ್ಲದೆ ಬ್ರಿಟಿಷರ ಮಾರಣಹೋಮ ನಡೆಯುತ್ತದೆ. ಬ್ರಿಟಿಷರೂ ಕೈಕಟ್ಟಿ ಕೂಡುವವರಾಗಿರಲಿಲ್ಲ. ತಮ್ಮ ಕೈ ಮೇಲಾದೆಡೆಯಲ್ಲೆಲ್ಲ ಹಳ್ಳಿಹಳ್ಳಿಗಳನ್ನು ಸುತ್ತುವರಿದು ಅವುಗಳನ್ನು ಬೆಂಕಿಯ ಜ್ವಾಲೆಗೆ ಆಹುತಿ ನೀಡಿದರು. ಸೆರೆಸಿಕ್ಕವರನ್ನು ಬೀದಿಬದಿಯ ಸಾಲುಮರಗಳಿಗೆ ನೇಣುಹಾಕಿಯೋ ಅಥವಾ ಫಿರಂಗಿಗಳಿಗೆ ಕಟ್ಟಿ ಉಡಾಯಿಸಿಯೋ ತಮ್ಮ […]