ಸ್ವಾತಂತ್ರ್ಯದ ಅಮೃತೋತ್ಸವ ಆಚರಣೆಯ ಸಂಭ್ರಮದ ಪರ್ವದಲ್ಲಿದೆ ನಾಡು. ಸಾಮಾನ್ಯವಾಗಿ ಇಂತಹ ಉತ್ಸವಾಚರಣೆಗಳು ಹಲವು ವಿಶೇಷ ಯೋಜಿತ ಕಾರ್ಯಕ್ರಮಗಳ ಮೂಲಕ ನಡೆಯುತ್ತವೆ. ಇಂಡಿಯಾಗೇಟ್‍ನಲ್ಲಿ ನೇತಾಜಿಯವರ ಹಾಲೋಗ್ರಾಂ ಸ್ಥಾಪನೆ ಮೊದಲಾದ ಕ್ರಮಗಳಂತೂ ಇತಿಹಾಸಾರ್ಹವಾಗಿವೆ. ಆದರೆ ಅಂತಹ ಸಾಂಕೇತಿಕ ಕಾರ್ಯಕ್ರಮಗಳ ಆವಶ್ಯಕತೆಯೇ ಇಲ್ಲವೆನಿಸುವ ಮಟ್ಟದಲ್ಲಿ ವಿವಿಧ ಕ್ಷೇತ್ರಗಳ ಉನ್ನತ ಸಾಧನೆಗಳು ಗಮನ ಸೆಳೆಯುತ್ತಿವೆ. ತಾತ್ತ್ವಿಕವಾಗಿ ಯೋಚಿಸುವಾಗ ಈ ಸಾಧನೆಗಳೇ ಸ್ವಾತಂತ್ರ್ಯ ಅಮೃತೋತ್ಸವವನ್ನು ಅರ್ಥಪೂರ್ಣಗೊಳಿಸುವವಾಗಿವೆ ಎನಿಸುತ್ತದೆ. ಕೋವಿಡ್ ಸವಾಲಿಗೆ ಉತ್ತರವಾಗಿ 200 ಕೋಟಿ ಲಸಿಕೆ ಡೋಸ್‍ಗಳ ನೀಡಿಕೆಯ ಕಲ್ಪನೆಗೆ ಮೀರಿದ ಗುರಿಯನ್ನು ಸಾಧಿಸಿರುವುದಲ್ಲದೆ ಅನ್ಯ ದೇಶಗಳಿಗೂ 24 ಕೋಟಿ ಲಸಿಕೆಗಳನ್ನು ಒದಗಿಸಿರುವುದು, ತಂತ್ರಜ್ಞಾನ ‘ಸ್ಟಾರ್ಟ್ ಅಪ್’ಗಳಿಂದ 23 ಲಕ್ಷ ಉದ್ಯೋಗಗಳ ಸೃಷ್ಟಿ, ಆಯುಷ್ಮಾನ್ ಮಿಶನ್ ಮೂಲಕ ಎಲ್ಲ ದೇಶವಾಸಿಗಳ ಆರೋಗ್ಯಸಂಬಂಧಿತ ಮಾಹಿತಿಯ ಡಿಜಿಟಲೀಕರಣವಲ್ಲದೆ 22 ಕೋಟಿ ಜನರ ಆರೋಗ್ಯ ಖಾತೆಗಳನ್ನು ತೆರೆದಿರುವುದು, ಟೋಕಿಯೊ ಒಲಿಂಪಿಕ್ಸ್‍ನಲ್ಲಿ 7 ಪದಕಗಳೂ, ಪ್ಯಾರಾಲಿಂಪಿಕ್ಸ್‍ನಲ್ಲಿ 19 ಪದಕಗಳೂ ಸೇರಿ ಇದುವರೆಗಿನ ಇತಿಹಾಸದಲ್ಲಿಯೆ ಅತ್ಯುತ್ತಮ ಗಳಿಕೆ – ಇಂತಹ ಹತ್ತಾರು ಕ್ಷೇತ್ರಗಳ ಸ್ಮರಣೀಯ ಸಾಧನೆಗಳು ಸ್ವಾತಂತ್ರ್ಯ ಅಮೃತೋತ್ಸವ ಆಚರಣೆಯನ್ನು ಜಾಜ್ವಲ್ಯಮಾನಗೊಳಿಸಿವೆ. ಇದಕ್ಕಿಂತ ಸಂಭ್ರಮಾರ್ಹವಾದ್ದು ಬೇರೆ ಏನಿದ್ದೀತು?
ಸಾಧನೆಗಳೇ ಉತ್ಸವಾಚರಣೆ
Month : December-2022 Episode : Author :