ಕಾಶ್ಮೀರದ ಶಾರದೆಗೆ ಮಂದಿರ
Month : January-2023 Episode : Author : ಜನಾರ್ದನ ಹೆಗಡೆ
Month : January-2023 Episode : Author : ಜನಾರ್ದನ ಹೆಗಡೆ
Month : December-2022 Episode : Author : ಸಂತ ಜ್ಞಾನೇಶ್ವರ ಮಹಾರಾಜರು
ನನ್ನನ್ನು ಭಜಿಸಿ ತಮ್ಮ ಆತ್ಮಹಿತವನ್ನು ಬೆಳೆಸಿಕೊಂಡಂತಹವರು ನಾಲ್ಕು ಬಗೆಯ ಭಕ್ತರಿರುವರು. ಅವರ ವರ್ಣನೆಯನ್ನು ಕೇಳು. ಅವರೊಳಗಿನ ಮೊದಲಿಗರು ಆರ್ತರು, ಎರಡನೆಯವರು ಜಿಜ್ಞಾಸುಗಳು, ಮೂರನೆಯವರು ಅರ್ಥಾರ್ಥಿಗಳು ಮತ್ತು ನಾಲ್ಕನೆಯವರು ಜ್ಞಾನಿಗಳು. ಅದರೊಳಗಿನ ಆರ್ತನು ಕಷ್ಟಗಳ ನಿವಾರಣೆಗಾಗಿ, ಜಿಜ್ಞಾಸುವು ಜ್ಞಾನಾರ್ಥವಾಗಿ ಮತ್ತು ಮೂರನೆಯವರು ಅರ್ಥಪ್ರಾಪ್ತಿಗಾಗಿ ನನ್ನನ್ನು ಭಜಿಸುವರು. ಬಳಿಕ ನಾಲ್ಕನೆಯವನಾದ ಜ್ಞಾನಿ-ಭಕ್ತನಲ್ಲಿ (ಬಯಕೆಯೇ ಇಲ್ಲದ್ದರಿಂದ) ಅವನಿಗೆ ಏನೂ ಕರ್ತವ್ಯವಿರುವುದಿಲ್ಲ. ಆದ್ದರಿಂದ ಒಬ್ಬ ಜ್ಞಾನಿಯೇ ನಿಜವಾದ ಭಕ್ತನಿರುವನೆಂದು ತಿಳಿ. ಯಾಕೆಂದರೆ ಆತ್ಮಜ್ಞಾನರೂಪಪ್ರಕಾಶದಿಂದ ಅವನಲ್ಲಿ ಹುದುಗಿದ ದ್ವೈತಾದ್ವೈತರೂಪ ಕತ್ತಲೆಯು ಇಲ್ಲದಾಗಿರುವುದು. ಆದ್ದರಿಂದ ಅವನು […]
Month : December-2022 Episode : Author : ಎಸ್. ಎಸ್. ನರೇಂದ್ರಕುಮಾರ್
ಭಾರತೀಯ ಸೇನಾಪಡೆಯ ಸೈನಿಕನಾಗಿ ಸೇರ್ಪಡೆಯಾಗಿದ್ದು 2011ರ ಮಾರ್ಚ್ನಲ್ಲಿ, ಆರ್ಮಿ ಆರ್ಡ್ನೆನ್ಸ್ ಕೋರ್ ದಳಕ್ಕೆ. ಸೈನ್ಯದಲ್ಲಿರುವ ಪದ್ಧತಿಯಂತೆ, ಆಫೀಸರ್ ಆಗಿ ಸೇರ್ಪಡೆಯಾದವರು, ಮೊದಲ ಎರಡು ವರ್ಷ ಯುದ್ಧದಲ್ಲಿ ಪದಾತಿ ದಳದಲ್ಲಿ ಕೆಲಸ ಮಾಡಬೇಕು ಅಥವಾ ಉಗ್ರವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಬೇಕು. ಲೆಫ್ಟಿನೆಂಟ್ ನವದೀಪ್ಸಿಂಗ್ ಅವರನ್ನು ಜಮ್ಮು-ಕಾಶ್ಮೀರದ 15 ಮರಾಠಾ ಲೈಟ್ ಇನ್ಫೆಂಟ್ರಿ ದಳಕ್ಕೆ ಕಮಿಷನ್ಡ್ ಆಫೀಸರ್ ಆಗಿ ನಿಯುಕ್ತಿ ಮಾಡಲಾಯಿತು. ಇದಾದ ಕೇವಲ ಆರು ತಿಂಗಳಲ್ಲಿಯೇ ತನ್ನ ಶೌರ್ಯ ಪ್ರದರ್ಶಿಸುವ ಅವಕಾಶ ನವದೀಪ್ಸಿಂಗ್ಗೆ ಪ್ರಾಪ್ತವಾಯಿತು. ಸೈನ್ಯಕ್ಕೆ ಸೇರಿದ ಆರು ತಿಂಗಳಲ್ಲೇ […]
Month : December-2022 Episode : Author : ಡಾ. ಕೆ. ಜಗದೀಶ್ ಪೈ
ಕಾಡುಪ್ರಾಣಿಗಳು ಮನುಷ್ಯನನ್ನು ಕೊಂದದ್ದಕ್ಕಿಂತ ಅಧಿಕವಾಗಿ ಮನುಷ್ಯ ಮನುಷ್ಯನನ್ನು ಕೊಂದ ಇತಿಹಾಸ ನಮ್ಮ ಕಣ್ಣ ಮುಂದಿದೆ. ಪ್ರಾಣಿಗಳು ಕೇವಲ ತಮ್ಮ ಅಸ್ತಿತ್ವಕ್ಕಾಗಿ ಕೊಂದರೆ ಮನುಷ್ಯ ಹಲವಾರು ಕ್ಷುಲ್ಲಕ ಕಾರಣಗಳಿಗೆ ಹಾಗೂ ಯಾವುದೇ ಕಾರಣವಿಲ್ಲದೆಯೂ ಪ್ರಾಣಿಗಳನ್ನು ಕೊಲ್ಲುತ್ತಾನೆ. ಜಿಂಕೆಯ ಕೊಂಬಿಗಾಗಿ ಜಿಂಕೆಯನ್ನು ಕೊಲ್ಲುತ್ತಾನೆ. ಆನೆಯ ದಂತಕ್ಕಾಗಿ ಆನೆಯನ್ನು, ಉಗುರು-ಚರ್ಮಕ್ಕಾಗಿ ಹುಲಿಯನ್ನು ಕೊಲ್ಲುತ್ತಾನೆ. ಕೊಂಬು, ದಂತ, ಚರ್ಮ ಇವೆಲ್ಲವನ್ನೂ ನಮ್ಮ ಮನೆಯ ಅಲಂಕಾರಕ್ಕಾಗಿ ಬಳಸುತ್ತೇವೆ. ಹೀಗೆ ಮನೆಯ ಅಂದಕ್ಕಾಗಿ ಮುಗ್ಧ ಪ್ರಾಣಿಗಳನ್ನು ಬಲಿಗೊಡುವುದು ಕ್ರೂರತೆಯಲ್ಲವೆ? ಈ ಕ್ರೂರತೆಯೆ ಮನುಷ್ಯನ ಸಹಜ ಸ್ವಭಾವವಾಗಿ […]
Month : December-2022 Episode : Author : ಕೇಶವ ಕುಡ್ಲ
‘ಅಮೆ ದಿಕ್ಕೆಲ್’ ಎಂಬುದು ತುಳು ಭಾಷೆಯ ಎರಡು ಪದಗಳ ಗೊಂಚಲು. ಕೆಲವರು ಇದು ಕನ್ನಡ ಮತ್ತು ತುಳುವಿನ ಎರಡು ಪದಗಳು ಎಂದು ಭಾವಿಸಿಕೊಂಡು ಇಲ್ಲಿರುವ ಅಮೆ ಎಂಬ ಪದವನ್ನು ‘ಆಮೆ’ ಎಂದು ತಪ್ಪು ತಿಳಿದು ಇದನ್ನು ಆಮೆ ದಿಕ್ಕೆಲ – ಆಮೆಯಂತಹ ಒಲೆ ಎಂದು ಅಪಭ್ರಂಶ ಮಾಡುತ್ತಾರೆ. ಇದು ನಿಜವಾಗಿ ಅಮೆ ಎಂದರೆ ‘ಮೈಲಿಗೆ’ ಎಂದೂ ದಿಕ್ಕೆಲ್ ಎಂದರೆ ‘ಒಲೆ’ ಎಂದೂ ಅರ್ಥ ಹೊಂದಿದೆ. ಇದಕ್ಕೆ ಶಿಖರಾಗ್ರದಲ್ಲಿರುವ ಒಲೆಯಂತೆ ಸಂಯೋಜನೆ ಹೊಂದಿರುವ ಮೂರು ಬೃಹತ್ ಬಂಡೆಗಳು ಕಾರಣವಾಗಿವೆ. […]
Month : December-2022 Episode : Author : ಡಾ. ಎಚ್.ಆರ್. ವಿಶ್ವಾಸ
ಚಾಂಡಾಲನು ಇನ್ನೂ ಗಾಬರಿಯಾಗಿ ಮತ್ತಷ್ಟು ವೇಗವಾಗಿ ಓಡತೊಡಗಿ, ಅಲ್ಲೇ ಒಂದು ಕಲ್ಲನ್ನು ಎಡವಿ ಬಿದ್ದು ಕೂಡಲೇ ಮೂರ್ಛಿತನಾದನು. ವಿಷ್ಣುದಾಸನು ಬೇಗ ಬೇಗ ಅವನ ಬಳಿಗೆ ಬಂದು ತನ್ನ ಬಟ್ಟೆಯ ಸೆರಗಿನಿಂದ ಅವನ ಮುಖಕ್ಕೆ ಗಾಳಿ ಬೀಸಿದನು. ಚಾಂಡಾಲನು ಕಣ್ಣು ತೆರೆದಾಗ ವಿಷ್ಣುದಾಸನಿಗಾದ ಅಚ್ಚರಿಗೆ ಪಾರವೇ ಇರಲಿಲ್ಲ. ಏಕೆಂದರೆ ಅವನು ಸಾಕ್ಷಾತ್ ಶ್ರೀಮನ್ನಾರಾಯಣನೇ ಆಗಿದ್ದನು. ಅವನು ಚತುರ್ಭುಜಗಳಿಂದ ಕೂಡಿದ ನಿಜರೂಪದಿಂದ ಪ್ರತ್ಯಕ್ಷನಾದಾಗ ವಿಷ್ಣುದಾಸನು ಸ್ತುತಿಸಲೂ ತಿಳಿಯದೆ ಸುಮ್ಮನೆ ನಿಂತಿದ್ದನು. ಹಿಂದೆ ಕಾಂಚೀಪಟ್ಟಣದಲ್ಲಿ ಚೋಳನೆಂಬ ರಾಜನಿದ್ದನು. ಒಮ್ಮೆ ಅವನು ಅನಂತಶಯನ […]
Month : December-2022 Episode : Author : ಕೆ.ಎನ್. ಸುಬ್ಬರಾವ್, ವರ್ತೂರು
ಕರುಣಾಕರನ ಮಾತುಗಳಿಗೆ ತಲೆದೂಗಿದ ಯಮಧರ್ಮರಾಯರು “ನೀನು ಹೇಳುವುದು ಯಥೋಚಿತವಾಗಿದೆ. ಆದರೆ ಮಾನ್ಯ ಮಾಡತಕ್ಕದ್ದಲ್ಲ. ಭೂಮಿಯಲ್ಲಿ ಕರ್ಮಾನುಸಾರ ಶಿಕ್ಷೆಯನ್ನು ಅನುಭವಿಸಿದರೂ ಅಲ್ಲಿ ಅದು ಅಪೂರ್ಣವಾದರೆ ಇಲ್ಲಿ ಕೊಡಲ್ಪಡುವ ಶಿಕ್ಷೆಯನ್ನು ಯಾರೊಬ್ಬರದೂ ಯಾವುದೇ ನೆರವಿಲ್ಲದೆ ಅನುಭವಿಸಿ ಪೂರೈಸಿಕೊಳ್ಳಬೇಕು. ಆದರೆ ನಿನ್ನ ನಡವಳಿಕೆ ಮತ್ತು ಮಾನಸಿಕ ಪ್ರೌಢಿಮೆಯಿಂದ ನಾನು ಪ್ರಸನ್ನನಾಗಿದ್ದೇನೆ. ಮಾಯಾನಗರಿಯ ಜನಪ್ರಿಯ ಸಂತ ಪ್ರಜ್ಞಾನಂದರಿಗೂ ಮಧ್ಯಮ ವರ್ಗದ ಕುಟುಂಬಸ್ಥ ಕರುಣಾಪರನಿಗೂ ಒಂದೇ ದಿನದ ಒಂದೇ ಗಳಿಗೆಯಲ್ಲಿ ಮರಣಯೋಗ ಪ್ರಾಪ್ತವಾಯಿತು. ಯಮಧರ್ಮ ತನ್ನ ದೂತರನ್ನು ಕರೆದು ಈ ಇಬ್ಬರನ್ನೂ ಸಶರೀರವಾಗಿಯಾಗಲಿ ಇಲ್ಲವೇ […]
Month : December-2022 Episode : Author : ಹರ್ಷ ಪೆರ್ಲ
ಈಗ ಬಳಸುವ ಲಿಥಿಯಂ ಅಯೋನ್ ಬ್ಯಾಟರಿಗಳ ಬದಲು ಹೈಡ್ರೋಜನ್ ಬಳಸಿದರೆ ವಾಹನಗಳು ಹತ್ತುಪಟ್ಟು ಹೆಚ್ಚಿನ ದೂರವನ್ನು ಕ್ರಮಿಸಬಲ್ಲವು. ಹಾಗೂ ಚಾರ್ಜ್ ಮಾಡುವ ಸಮಯವೂ ಈಗಿರುವ ಬ್ಯಾಟರಿ-ಆಧಾರಿತ ವಾಹನಗಳ ಎರಡರಿಂದ ನಾಲ್ಕು ಗಂಟೆಗಳಿಗೆ ಬದಲಾಗಿ ಎಂಟು ನಿಮಿಷ ಸಾಕು. ಇದರ ಭಾರವೂ ಕಡಮೆ. ವಾಹನದ ಭಾರವು ಇಳಿಕೆಯಾದುದರ ಪರಿಣಾಮವಾಗಿ ಹೆಚ್ಚಿನ ಪ್ರಮಾಣದ ಸಾಗಾಣಿಕೆ ಸಾಧ್ಯ ಹಾಗೂ ಇಂಧನವ್ಯಯವೂ ಕಡಮೆಯಾಗುತ್ತದೆ. ವಾಯುಮಾಲಿನ್ಯದ ಸಮಸ್ಯೆಗೂ ಪರಿಹಾರ ಕಂಡುಕೊಂಡಂತೆ ಆಗುತ್ತದೆ. ಪೆಟ್ರೋಲ್ಗಾಗಿ ಅರಬ್ ದೇಶಗಳು, ರಷ್ಯಾವನ್ನು ಅವಲಂಬಿತವಾಗಿರುವ ನಾವು ನಮ್ಮ ವಿದೇಶಿ ವಿನಿಮಯದ […]
Month : December-2022 Episode : Author : ಡಾ|| ಜಿ.ಬಿ. ಹರೀಶ್
ನದಿಯಾಗಿ ಹರಿದೆ ನೀನುಅಂಚೆಯೇರಿ ಬಳಿಗೆ ಬಂದೆತಾಯಿಯಾಗಿ ಹಾಲು ನೀಡಿಪೊರೆ ನೀನು ಈ ಶಿಶುವಗಂಟೆಯಾಗಿ ಮಂತ್ರವಾಗಿನಾದವಾಗಿ ವೇದವಾದೆದೇವಿ ಜ್ಞಾನ ಜ್ಯೋತಿಯೆಶ್ವೇತ ಶುಭ್ರ ರೂಪಿಣಿ ಕವಿ-ಕಾಣಿಕೆ ನಿನ್ನ ವರನೀ ತಾರಾ ನೀ ವರದಾಕಶ್ಮೀರದ ವಂದ್ಯೆ ನೀ, ಶೃಂಗೇರಿಯ ಶಾರದೆಬಲ್ಲವರ ಪ್ರವರ ನೀನೆಕ್ಷರಾಕ್ಷರದಲ್ಲಿ ಕೂತುಮಾತಿನ ಜೇನ್ನೋಂಪಿ ನೂತುಕಿವಿಚಿತ್ತದ ಸಿಂಪಿಯಲ್ಲಿಬೀಜಮಂತ್ರವಾಗಿ ಕೂತು‘ಅ’ ಮಾತಿಗೆ ‘ಉ’ ಮಾತಿಗೆ‘ಮ’ ಮಾತಿಗೆ ನಿತ್ಯ ಹೂತುಋಷಿವಾಣಿಯ ಪ್ರಣವವಾದೆಲೋಕಗಾಯತ್ರಿ ರೂಪವಾದೆಓಂಕಾರದ ಝೇಂಕಾರವೆಯಮನ ಕದವ ಬಡಿದನಚಿಕೇತನ ಮಾತೆಯೆಅರವಿಂದವು ಮರಳಿ ಅರಳಿಸಾವಿತ್ರಿಯ ರೂಪ ತಾಳಿದಿವ್ಯಜೀವಗಾಥೆಯೆಘನಮೌನಕು ಜಾತೆಯೆ ನವಿಲ ಚಿತ್ತದಲ್ಲಿ ಕವಲುಅಂಡವೊಡೆದು ಬಂದು ಮರಿಮೂಡಿತದಕೆ […]
Month : December-2022 Episode : Author : ಶಾಂತಾ ನಾಗಮಂಗಲ
ಮುಸ್ಸಂಜೆಯ ಹೊತ್ತು. ನಮ್ಮ ಮುಂದೆ ಒಬ್ಬಳು ಗೌಳಿಗಿತ್ತಿ ಹೋಗ್ತಾ ಇದ್ದಾಳೆ. ಯಾರದ್ದೋ ವರ್ತನೆಯೋರ ಮನೆಗೆ ಹಾಲು ಹಾಕೋಕೆ ಇರಬೇಕು. ಅವಳು ವಿಶಿಷ್ಟವಾದ ಒಂದು ಭಂಗಿಯಲ್ಲಿ, ಭುಜದವರೆಗೆ ಎತ್ತಿದ ಕೈಯಲ್ಲಿ ಚೊಂಬನ್ನು ಹಿಡಿದು ವೈಯಾರದಿಂದ ಕೃಷ್ಣಕರ್ಣಾಮೃತದಲ್ಲಿ ಲೀಲಾಶುಕ ಹೇಳುವಂತೆ “ವಿಕ್ರೇತು ಕಾಮಾ ಖಿಲ ಗೋಪಕನ್ಯಾ” ಎನ್ನುವಂತೆ ಹೆಜ್ಜೆ ಹಾಕ್ತಾ ಹೋಗ್ತಾ ಇದ್ದಾಳೆ. ಆ ನಿತಂಬಗುರ್ವಿಯನ್ನು ಕಂಡ ಈ ನಿಂಗನಿಗೇನಾಯಿತೋ ಗೊತ್ತಿಲ್ಲ. ಎಲ್ಲಿ ಯಾವ ಸ್ಕ್ರೂ ಕಳಚಿ ಸಡಿಲಾಯ್ತೋ, ಎಲ್ಲಿ ಸೈಕಲ್ನ ಡೈನಮೋದ ವಿದ್ಯುತ್ತಿನ ಝಟ್ಕಾ ತಗುಲಿತೋ ಗೊತ್ತಿಲ್ಲ. ಒಂದು […]