ಯಸ್ಯ ವಾಙ್ಮನಸೀ ಶುದ್ಧೇ ಸಮ್ಯಗ್ಗುಪ್ತೇ ಚ ಸರ್ವದಾ | ಸ ವೈ ಸರ್ವಮವಾಪ್ನೋತಿ ವೇದಾಂತೋಪಗತಂ ಫಲಮ್ || – ಮನುಸ್ಮೃತಿ “ಯಾರ ಮಾತೂ ಮನಸ್ಸೂ ಪರಿಶುದ್ಧವಾಗಿವೆಯೋ ಮತ್ತು ಸಂಪೂರ್ಣ ನಿಯಂತ್ರಣದಲ್ಲಿವೆಯೋ ಅಂಥವನು ವೇದಾಂತಶಾಸ್ತ್ರದಲ್ಲಿ ನಿರೂಪಿತವಾಗಿರುವ ಎಲ್ಲ ಫಲವನ್ನೂ ಪಡೆಯುತ್ತಾನೆ.” ಯಾವುದೊ ಕಾರ್ಯದಿಂದ ಕ್ಲೇಶದ ಅನುಭವ ಉಂಟಾಗುವುದು ಆ ಕಾರ್ಯದ ಹಿಂದಿರುವ ಮನಸ್ಸು ಶಬಲಿತವಾಗಿದ್ದಾಗ. ಗುರು ಗೋವಿಂದಸಿಂಹರ ಮನಸ್ಸು ವಿರಕ್ತಿಗೊಳಗಾಗಿತ್ತು. ಮಕ್ಕಳೂ ಸೇರಿದಂತೆ ತನ್ನವರೆಲ್ಲರನ್ನೂ ಕಳೆದುಕೊಂಡಿದ್ದರು. ಇನ್ನೂ ಬದುಕಿರುವುದರಲ್ಲಿ ಅರ್ಥವಿಲ್ಲವೆನಿಸತೊಡಗಿತ್ತು. ತಮ್ಮ ಉಯಿಲನ್ನು ಬರೆದರು. ಅದರಲ್ಲಿ ಒಕ್ಕಣಿಸಿದರು: “ನನ್ನವರೆಲ್ಲರ […]
ದೀಪ್ತಿ
Month : December-2023 Episode : Author :