ಬೆಂಗಳೂರು: ಉತ್ಥಾನ ಮಾಸಪತ್ರಿಕೆಯ ಕಾಲೇಜು ವಿದ್ಯಾರ್ಥಿಗಳಿಗಾಗಿ ವಾರ್ಷಿಕ ಪ್ರಬಂಧ ಸ್ಪರ್ಧೆಯ ಪೋಸ್ಟರ್ ಅನ್ನು ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ಬಿಡುಗಡೆಗೊಳಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್, ವಿಶ್ವ ಸಂವಾದ ಕೇಂದ್ರ ಕರ್ನಾಟಕ ಟ್ರಸ್ಟಿ ರಾಧಾಕೃಷ್ಣ ಹೊಳ್ಳ, ಟಿವಿ ವಿಕ್ರಮದ ಮುಖ್ಯಸ್ಥ ಮಹೇಶ್ ವಿಕ್ರಂ ಹೆಗಡೆ, ಖ್ಯಾತ ಲೇಖಕ ಹಾಗೂ ಪತ್ರಕರ್ತ ಸಂತೋಷ ತಮ್ಮಯ್ಯ, ಉತ್ಥಾನ ಮಾಸಪತ್ರಿಕೆಯ ಸಂಪಾದಕ ಅನಿಲ್ ಕುಮಾರ್ ಮೊಳಹಳ್ಳಿ ಉಪಸ್ಥಿತರಿದ್ದರು.
ಉತ್ಥಾನ ಮಾಸಪತ್ರಿಕೆಯು ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.
ವಿಷಯ: ಕ್ರೀಡೆಯೆಂದರೆ ಕ್ರಿಕೆಟ್ ಮಾತ್ರವೇ? ಉಳಿದ ಕ್ರೀಡೆಗಳ ಬಗೆಗೆ ಭಾರತೀಯರಿಗೇಕೆ ನಿರಾಸಕ್ತಿ?
ಈ ವಿಷಯದ ಕುರಿತಾದ ನಿಮ್ಮ ವಿಚಾರಸರಣಿಯನ್ನು ಪ್ರಬಂಧ ರೂಪದಲ್ಲಿ ಬರೆಯಿರಿ.
ಪ್ರಬಂಧವು 1500 ಪದಗಳು ಮೀರದಂತೆ ಇರಲಿ.
ಮೊದಲ ಬಹುಮಾನ: ರೂ. 10,000 /-
ಎರಡನೆಯ ಬಹುಮಾನ: ರೂ. 7,000 /-
ಮೂರನೆಯ ಬಹುಮಾನ: ರೂ. 5,000 /-
ಹತ್ತು ಮೆಚ್ಚುಗೆಯ ಬಹುಮಾನಗಳು: ತಲಾ ರೂ. 2,000 /-
ಹೆಚ್ಚಿನ ಮಾಹಿತಿಗಾಗಿ: https://utthana.in/?p=12387