ಮುಂಜಾನೆಯ ವಾಕಿಂಗಿನಲ್ಲಿ ಅನಾಥವಾಗಿ ಬಿದ್ದ ನವಿಲುಗರಿ ಇದಿರಾಯಿತು ದಾರಿಯಲ್ಲಿ ಎತ್ತಿಕೊಳಲೇ? ಅಥವಾ ಬಿಟ್ಟು ನಡೆಯಲೇ? ದ್ವಂದ್ವದಿಂದ ಹೊರಬಂದು ಎತ್ತಿಕೊಂಡೆ ಬಾಗಿ! ದ್ವಾರಕಕ್ಕೆ ಮರಳಿದ ಅದು ನನ್ನ ಮನಸ್ಸಿನ ಬಾಲ್ಯವನ್ನು ತಂದು ಪುಸ್ತಕಗಳಲ್ಲಿ ಅಡಗಿ ಕುಳಿತಿದ್ದ ದಿನಗಳನ್ನು ತೆರೆದುಕೊಂಡಿತು. ಮನೆಗೆ ಮರಳುವಾಗ ಎತ್ತಿ ಬಿಸಾಕಲಿಕ್ಕೆ ಆಗದೇ ಅದನ್ನು ತಂದರೆ ಮನೆಗೆ ಇವಳು ನಕ್ಕು ಲೇವಡಿ ಮಾಡಬಹುದು: ‘ಎಂಬತ್ತೆರಡರಲ್ಲೂ ಮಕ್ಕಳಾಟಿಕೆಯೇ ನಿಮಗೆ?’ ಆದರೆ ಏನೂ ಆಡದ ಇವಳು ನನ್ನ ಕೈಯಿಂದ ನನ್ನನ್ನೇ ತೆಗೆದುಕೊಂಡಂತೆ ಅದನ್ನು ತೆಗೆದುಕೊಂಡು ನನ್ನ ಮೇಜಿನ ಮೇಲಿದ್ದ […]










