
ರೇಖಾಚಿತ್ರಗಳು ರಾಯರ ಹೆಚ್ಚಿನ ಬರೆಹಗಳ ಅವಿಭಾಜ್ಯ ಅಂಗಗಳು, ಅಂದದ ಅಲಂಕೃತಿಗಳು. ಅವರ ‘ಚಿತ್ರಕ’ ಶೈಲಿಗೆ ಇವುಗಳ ಕೊಡುಗೆಯೂ ಇಲ್ಲದಿಲ್ಲ. ಇವನ್ನು ರಾಯರೇ ರಚಿಸುತ್ತಿದ್ದುದು ವಿಶೇಷ. ಈ ಮೂಲಕ ಒಂದು ಮಾಧ್ಯಮದಲ್ಲಿ ಮೂಡಿದ ವಿವರ ಮತ್ತೊಂದು ಮಾಧ್ಯಮದಲ್ಲಿ ಹೇಗೆ ತೋರುತ್ತದೆ ಎಂದು ತಾಳೆ ನೋಡಿ ತಿಳಿಯುವ ಅನನ್ಯ ಅವಕಾಶ ಓದುಗರಿಗೆ ದಕ್ಕುತ್ತದೆ. ಎರಡೂ ಭೂಮಿಕೆಗಳಲ್ಲಿ ರಾಯರ ಅಭಿವ್ಯಕ್ತಿ ಏಕಪ್ರಕಾರವಾದ ಸೌಂದರ್ಯ–ಸೌಷ್ಠವಗಳನ್ನು ಬಿಂಬಿಸಿರುವುದು ಒಡಕಿಲ್ಲದ ಅವರ ಅಂತರAಗಕ್ಕೂ ಮೇರೆಯರಿಯದ ಅವರ ಕೌಶಲಕ್ಕೂ ದಿಕ್ಸೂಚಿ ಎನ್ನಬಹುದು. ಅಳಿಯದೆ ಉಳಿಯಬೇಕೆಂಬ ಬಯಕೆ ಒಂದಲ್ಲ […]