ಪ್ರೊ|| ಎಲ್.ಎಸ್. ಶೇಷಗಿರಿರಾಯರನ್ನು ಕುರಿತು ಯಾರೇ ಮಾತನಾಡ ಹೊರಟರೆ ಅಥವಾ ಬರೆಯ ಹೊರಟರೆ ಕೆಲವು ಅಂಶಗಳು ಪದೇಪದೇ ಅನುವೃತ್ತಗೊಳ್ಳುತ್ತಿರುತ್ತವೆ: ಅವರ ಸಜ್ಜನಿಕೆ, ಎಂದೂ ಕುಗ್ಗದ ಸಾಹಿತ್ಯಪರಿಚರ್ಯೋತ್ಸಾಹ, ಕೆಲಸದ ಶಿಸ್ತು ಮತ್ತು ಅಚ್ಚುಕಟ್ಟು, ಪರಿಶ್ರಮದ ನಿರಂತರತೆ, ಗುಣಮಟ್ಟದ ಬಗೆಗೆ ಎಂದೂ ಶಿಥಿಲತೆಗೆ ಆಸ್ಪದ ಕೊಡದಿರುವುದು, ಇತ್ಯಾದಿ. ಕೆಲಸ ಸಣ್ಣದಾಗಲಿ ದೈತ್ಯಗಾತ್ರದ್ದಾಗಲಿ – ಒಮ್ಮೆ ಶೇಷಗಿರಿರಾಯರು ಒಂದು ಕೆಲಸವನ್ನು ವಹಿಸಿಕೊಂಡರೆಂದರೆ ನಿಗದಿಯಾದ ಸಮಯಕ್ಕೆ ಅದನ್ನು ಸರ್ವಾಂಗಸುಂದರವಾಗಿ ಮುಗಿಸಿಯೇ ಮುಗಿಸುವರು. ಈ ವ್ರತನಿಷ್ಠೆಯನ್ನು ಅವರು ಶರೀರ ಜರ್ಜರಿತವಾಗಿ ವಯೋಮಾನ ಶತಾಬ್ದದ ಅಂಚನ್ನು […]
ಎಲ್.ಎಸ್.ಎಸ್. ನಮನ
Month : December-2024 Episode : Author : - ಸಂಪಾದಕ