
ದ್ರಷ್ಟಾರ ಸಾವರಕರ್-9 -ಎಸ್.ಆರ್. ರಾಮಸ್ವಾಮಿ ಸಾವರಕರರ ಬಗೆಗೆ ಇಂದಿರಾಗಾಂಧಿಯವರಿಗಿದ್ದ ಗೌರವ ಉಲ್ಲೇಖನೀಯ. ಸಾವರಕರರ ನಿಧನವಾದಾಗ (16-2-1966) ಅದು ದೇಶಕ್ಕೆ ಭರಿಸಲಾಗದ ನಷ್ಟ ಎಂದು ಶೋಕ ವ್ಯಕ್ತ ಮಾಡಿದ್ದರು. ಅವರು ಪ್ರಧಾನಿಯಾಗಿದ್ದ ಅವಧಿಯಲ್ಲೇ ಸಾವರಕರರ ಸ್ಮರಣೆಯ ಅಂಚೆಚೀಟಿ ಬಿಡುಗಡೆಯಾಗಿತ್ತು. ಸಾವರಕರ್ ನ್ಯಾಸಕ್ಕೆ ಇಂದಿರಾಗಾಂಧಿ ತಮ್ಮ ಸ್ವಂತ ಖಾತೆಯಿಂದ ರೂ. 11,000 ದೇಣಿಗೆ ಕೊಟ್ಟರು. ಸಾವರಕರರ ಬಗೆಗೆ ಒಂದು ಒಳ್ಳೆಯ ಸಾಕ್ಷ್ಯಚಿತ್ರವನ್ನು (ಡಾಕ್ಯುಮೆಂಟರಿ) ಮಾಡಿಸುವಂತೆ 1983ರಲ್ಲಿ ಫಿಲ್ಮ್ ಡಿವಿಜನ್ನಿಗೆ ಆದೇಶ ನೀಡಿದ್ದರು. ಈ ಸಂಗತಿಗಳನ್ನು ಸ್ಮರಿಸುವಾಗ ಸಾವರಕರರ ಬಗೆಗೆ ಇಂದಿರಾಗಾಂಧಿಯವರ […]