ಅಂಬೇಡ್ಕರ್ ಕುರಿತ ವಿಶೇಷ ಸಂಚಿಕೆ
Month : May-2024 Episode : Author :
Month : May-2024 Episode : Author :
Month : May-2024 Episode : Author :
Month : May-2024 Episode : Author : ಅನಂತ ರಮೇಶ್
ಕಳೆದ ಕೆಲವು ವರ್ಷಗಳಿಂದ ವಿವಿಧ ಅಂಶಗಳಲ್ಲಿ ಸಾರ್ವಜನಿಕ ವಲಯವು ಸುಧಾರಣೆಯ ಹಾದಿಯಲ್ಲಿ ಸಾಗಿವೆ. ಅನೇಕ ಉದ್ಯಮಗಳು ಹೆಚ್ಚಿದ ಆದಾಯ ಮತ್ತು ಲಾಭಗಳೊಂದಿಗೆ ಸುಧಾರಿತ ಹಣಕಾಸಿನ ಕಾರ್ಯಕ್ಷಮತೆಯನ್ನು ವರದಿ ಮಾಡಿವೆ. ಈ ಸುಧಾರಣೆಗಳು ಉತ್ತಮ ನಿರ್ವಹಣಾ ಅಭ್ಯಾಸಗಳು, ವೆಚ್ಚ ನಿಯಂತ್ರಣ ಮತ್ತು ಹೊಸ ಕಾರ್ಯತಂತ್ರದ ಹೂಡಿಕೆಗಳಿಗೆ ಅನುವುಮಾಡಿದೆ ಎಂದು ಹೇಳಬಹುದು. ತಂತ್ರಜ್ಞಾನದ ಅಳವಡಿಕೆ, ಯಾಂತ್ರೀಕೃತಗೊಂಡ ಮತ್ತು ಪ್ರಕ್ರಿಯೆಗಳ ಸರಳೀಕರಣದ ಮೂಲಕ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವತ್ತ ಗಮನಹರಿಸಲಾಗಿದೆ. ಹೆಚ್ಚಿನ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನಿಯಂತ್ರಣಗಳ ಅಗತ್ಯತೆಗಳು ಸೇರಿದಂತೆ ಉದ್ಯಮಗಳಲ್ಲಿ ಕಾರ್ಪೊರೇಟ್ […]
Month : May-2024 Episode : Author : ಚಿದಂಬರ ಕಾಕತ್ಕರ್
‘ಚಂದಿರನೇತಕೆ ಓಡುವನಮ್ಮಾ’ ಎಂಬ ಪ್ರಸಿದ್ಧ ಶಿಶುಗೀತೆಯ ಸಾಲುಗಳನ್ನು ‘ಚಂದಿರನೇತಕೆ ತಿರುಗುವನಮ್ಮಾ’ ಎಂದು ಬದಲಾಯಿಸಿ ಹಾಡಿಕೊಳ್ಳಬೇಕಾದ ಪ್ರಸಂಗ ಬಂದೊದಗಿತು. ಆಗ ನಾನು ಭಾರತಕ್ಕಿಂತ ಬಹಳಷ್ಟು ಉತ್ತರಕ್ಕಿದ್ದು ಅಲ್ಲಿಂದ ಚಂದ್ರನನ್ನು ನೋಡುವ ಕೋನ ಬೇರೆ ಆದುದ್ದರಿಂದ ಹೀಗಾಗಿರಬಹುದು ಎಂದು ಊಹಿಸಲು ನನಗೆ ಹೆಚ್ಚು ಸಮಯ ತಗಲಲಿಲ್ಲ. ಆದರೆ ಚಂದ್ರ ಭೂಗೋಳದ ಬೇರೆಬೇರೆ ಭಾಗಗಳಿಂದ ನೋಡಿದಾಗ ಬೇರೆಬೇರೆ ರೀತಿ ಕಾಣಿಸುತ್ತಾನೆ ಎಂದು ನಮಗೆ ಶಾಲೆಯಲ್ಲಿ ಕಲಿಸಿರಲಿಲ್ಲ. ನಾನು ಎಲ್ಲೂ ಓದಿರಲೂ ಇಲ್ಲ. ಈ ಬಗ್ಗೆ ಅಂತರ್ಜಾಲದಲ್ಲಿ ಜಾಲಾಡಿದರೂ ಸ್ಪಷ್ಟ ಮಾಹಿತಿ ಎಲ್ಲೂ […]
Month : May-2024 Episode : Author : ವಿಕ್ರಮ ಜೋಶಿ
ಮೋದಿಯವರು ಹೇಳುವಂತೆ ನಮ್ಮ ಈಶಾನ್ಯ ರಾಜ್ಯಗಳು ಭಾರತದ ಅಷ್ಟಲಕ್ಷ್ಮಿಗಳು. ಹೀಗಾಗಿ ೨೦೧೪ರ ನಂತರ ದೇಶದ ಪ್ರಧಾನಿಗಳು ಅಲ್ಲಿಗೆ ೭೦ ಬಾರಿ ಭೇಟಿ ಕೊಟ್ಟಿದ್ದರೆ ಅವರ ಮಂತ್ರಿಮಂಡಲದ ಸಚಿವರು ೬೮೦ ಬಾರಿ ಭೇಟಿ ಕೊಟ್ಟಿದ್ದಾರೆ. ದೆಹಲಿಯ ಮಂತ್ರಿಮಂಡಲವನ್ನು ಈಶಾನ್ಯ ರಾಜ್ಯದ ಆಗುಹೋಗುಗಳ ಜೊತೆ ಒಂದುಗೂಡಿಸಲು ಮೋದಿಯವರು ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನದ ಸಹಾಯ ಪಡೆದಿದ್ದಾರೆ. ಕಳೆದ ಒಂದು ದಶಕದ ಮೋದಿಯವರ ಆಡಳಿತಾವಧಿಯಲ್ಲಿ ಸಂಪೂರ್ಣವಾಗಿ ರೂಪಾಂತರಗೊಂಡ ಭಾರತದ ಪ್ರದೇಶಗಳೆಂದರೆ ಈಶಾನ್ಯ ರಾಜ್ಯಗಳು. ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, […]
Month : May-2024 Episode : Author : ಎಚ್ ಮಂಜುನಾಥ ಭಟ್
ಭಾರತದ ವಿಷಯದಲ್ಲಿ ಚರ್ಚಿಲ್ರದ್ದು ಅತಿರೇಕದ ಹಾದಿ. ಭಾರತದ ಸಾಂವಿಧಾನಿಕ ಬದಲಾವಣೆ ಬಗ್ಗೆ ಅಸಹನೆ, ಗಾಂಧಿ ಬಗೆಗಿನ ದ್ವೇಷ, ದೇಶದ ರಾಷ್ಟ್ರೀಯ (ಸ್ವಾತಂತ್ರ್ಯ) ಚಳವಳಿಯ ಬಗ್ಗೆ ಸಿಟ್ಟು ‘ಹಿಂದು’ ಎಂದು ಗುರುತಿಸಲ್ಪಟ್ಟ ಎಲ್ಲದರ ಬಗೆಗೆ ದ್ವೇಷ – ಇವು ಚರ್ಚಿಲ್ ಸಾರ್ವಜನಿಕ ವ್ಯಕ್ತಿತ್ವದ ಪ್ರಮುಖ ದೌರ್ಬಲ್ಯಗಳಾಗಿದ್ದವು. ಆತನ ಜೀವನಚರಿತ್ರಕಾರರು ಆತನನ್ನು ‘ವಿಕ್ಟೋರಿಯಾ ಅಚ್ಚಿನ ಸಾಮ್ರಾಜ್ಯಶಾಹಿ’ ಎಂದು ಬಣ್ಣಿಸಿದ್ದಾರೆ; ಅದೇ ರೀತಿ ಬ್ರಿಟಿಷ್ ಸಾಮ್ರಾಜ್ಯದ ಪ್ರಧಾನ ಸಮರ್ಥಕ ಎಂದು ಕೂಡ ವಿಶ್ಲೇಷಿಸಿದ್ದಾರೆ. ಚರ್ಚಿಲ್ ಜನಾಂಗೀಯವಾದಿ (racist) ಅಲ್ಲವೆಂದು ಕೆಲವರು ವಾದಿಸಿ, […]
Month : May-2024 Episode : Author : ಎಸ್.ಆರ್.ಆರ್.
ನಮ್ಮದು ‘ಯುವಭಾರತ’ವೆಂದು ಹೆಮ್ಮೆಪಡುವುದು ತಪ್ಪಲ್ಲ. ಆದರೆ ಈ ಘೋಷಣೆಗೆ ಅಸ್ಥಿಭಾರ ಗಟ್ಟಿಯಾಗಿರಬೇಕಷ್ಟೆ. ೧೯೮೦ಕ್ಕೆ ಹೋಲಿಸಿದರೆ ನಮ್ಮ ಹಲವಾರು ರಾಜ್ಯಗಳಲ್ಲಿ ಟಿ.ಎಫ್.ಆರ್. (ಟೋಟಲ್ ಫರ್ಟಿಲಿಟಿ ರೇಟ್) ಈಗ ಇಳಿಮುಖವಾಗಿದೆ. ಆಗ ಇದ್ದ ಉತ್ಪಾದಕತೆಯ ಪ್ರಮಾಣ ಈಗ ಅರ್ಧದಷ್ಟು ಅಥವಾ ಅದಕ್ಕಿಂತ ಕಡಮೆಯಾಗಿದೆ. ಈ ಕಾರಣದಿಂದ ಈಗ ಇರುವ ಯುವಜನಪ್ರಮಾಣಾಧಿಕ್ಯ ೨೦೪೦ರಿಂದಾಚೆಗೆ ಉಳಿಯಲಾರದು – ಎಂಬುದು ಕಹಿಯೆನಿಸಿದರೂ ವಾಸ್ತವ. ಈಗಿನದೇ ಜಾಡು ಮುಂದುವರಿದಲ್ಲಿ ಈ (ಇಪ್ಪತ್ತೊಂದನೇ) ಶತಮಾನದ ಅಂತ್ಯದ ವೇಳೆಗೆ ನಮ್ಮ ದೇಶದಲ್ಲಿ ವಯಸ್ಸು ೮೦ ದಾಟಿದವರ ಪ್ರಮಾಣ ಒಟ್ಟು […]
Month : May-2024 Episode : Author :
Month : April-2024 Episode : Author : ನಾರಾಯಣ ಶೇವಿರೆ
‘ಕರೆದು ಬಂದವ ಅಭ್ಯಾಗತ, ಕರೆಯದೆ ಬಂದವ ಅತಿಥಿ’ ಎಂಬ ಪದವಿವರವೊಂದಿದೆ. ಆಮಂತ್ರಣದ ಮೇರೆಗೆ ಬಂದ ಅಭ್ಯಾಗತರನ್ನು ಎಷ್ಟು ಚೆನ್ನಾಗಿ ಉಪಚರಿಸಿದರೂ ಕಡಮೆಯೇ. ಅಂಥಲ್ಲಿ ಆಗಂತುಕನಾಗಿ ಬಂದ ಅತಿಥಿಯು ಸಾಕ್ಷಾತ್ ದೇವರೇ ಎಂಬುದು ಶ್ರದ್ಧೆ. ಆತಿಥ್ಯದ ಸ್ವರೂಪವನ್ನು ಈ ನೆಲೆಯಿಂದ ನೋಡಬೇಕು. ಶಿರಸಿ ಸಮೀಪದ ಸ್ವರ್ಣವಲ್ಲೀ ಮಠದಲ್ಲಿ ಈಚೆಗೆ ಶಿಷ್ಯಸ್ವೀಕಾರ ಕಾರ್ಯಕ್ರಮ ನಡೆಯಿತಷ್ಟೆ. ಆ ಸಂದರ್ಭದಲ್ಲಿ ಅಲ್ಲಿಯ ಹಿರಿಯ ಗುರುಗಳಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ಮಾತನಾಡುತ್ತ, ‘ಸಕ್ಕರೆ ತುಪ್ಪದ ಕಾಲುವೆ ಹರಿಸಿ ಶುಕ್ರವಾರದ ಪೂಜೆಯ ವೇಳೆಗೆ’ ಎಂದು […]
Month : April-2024 Episode : Author : ಎಸ್.ಆರ್.ಆರ್.
ಅರಣ್ಯರಕ್ಷಣೋದ್ಯಮದಲ್ಲಿ ಮುಳುಗಿದಂತೆಲ್ಲ ಜನಶಿಕ್ಷಣದ ಆವಶ್ಯಕತೆಯೂ ಇದೆಯೆಂದು ಚಿಣ್ಣಪ್ಪನವರಿಗೆ ಮನವರಿಕೆಯಾಯಿತು. ಹೀಗೆ ಜನರೊಡನೆ ನಿರಂತರ ಸಂವಾದ ಕಾರ್ಯಕ್ರಮಗಳನ್ನು ನಡೆಸತೊಡಗಿದರು. ಚಿಣ್ಣಪ್ಪನವರ ಇಂತಹ ಒಂದೊಂದು ಪ್ರಯಾಸವೂ ಅಭೂತಪೂರ್ವವೇ ಆಗಿತ್ತು. ಅವರು ಜನರಿಗೆ ಪದೇಪದೇ ಹೇಳುತ್ತಿದ್ದ ಮಾತು: “ಮನುಷ್ಯರಿಲ್ಲದಿದ್ದರೂ ಕಾಡು ಉಳಿಯುತ್ತದೆ. ಆದರೆ ಕಾಡು ಇಲ್ಲದಿದ್ದರೆ ಮನುಷ್ಯರ ಬದುಕು ಅಸಾಧ್ಯ.” ವಿಶೇಷವಾಗಿ ಮಕ್ಕಳಿಗೆ ಪರಿಸರ ಕುರಿತು ಅರಿವು ಮೂಡಿಸಲು ಖಾಸಗಿಯಾದ ಸರ್ಕಾರೇತರ ಸಂಸ್ಥೆಯೊಂದನ್ನೂ ಚಿಣ್ಣಪ್ಪ ನಡೆಸುತ್ತಿದ್ದರು. ನಾಗರಹೊಳೆಯ ಸಂರಕ್ಷಕ’ ಎಂಬ ಹೆಸರಿನ ಪ್ರಶಸ್ತಿ ಏನಾದರೂ ಇದ್ದಿದ್ದರೆ ಅದಕ್ಕೆ ಪೂರ್ಣವಾಗಿ ಪಾತ್ರರಾಗುತ್ತಿದ್ದವರು ಕಳೆದ […]