“ಇದು ನೋಡಿ, ನನ್ನ ಸ್ಟಾಂಪ್ ಕಲೆಕ್ಷನ್” ಎಂದು ಲಕ್ಷ್ಮಿನಾರಾಯಣ ಭಟ್ ಅವರು ತಮ್ಮ ಅಂಚೆಚೀಟಿ ಸಂಗ್ರಹವಿರುವ ಆಲ್ಬಂ ಅನ್ನು ಹೆಮ್ಮೆಯಿಂದ ಸವರುತ್ತ ತೆರೆ ತೋರಿಸತೊಡಗಿದಾಗ ಅಂಚೆಚೀಟಿ ಸಂಗ್ರಹದ ಬಗ್ಗೆ ಕೇಳಿಯಷ್ಟೆ ಗೊತ್ತಿದ್ದ ನಾನು ಕೂಡ ಅವರೊಡನೆ ಅಂಚೆಚೀಟಿ ಲೋಕಕ್ಕೆ ಹೋದೆ. “ಇವೆಲ್ಲ ನೋಡಿ, ಅಂಚೆಮುದ್ರೆ ಒತ್ತಿರದ ಸ್ಟಾಂಪ್‍ಗಳು; ನಾನೇ ಅಂಚೆಕಚೇರಿಗೆ ಹೋಗಿ ತಾಸುಗಟ್ಟಲೆ ಸಾಲಿನಲ್ಲಿ ನಿಂತು ಖರೀದಿಸಿ ತಂದದ್ದು. ಇವು ಮುದ್ರೆ ಇರುವಂತಹ ಸ್ಟಾಂಪ್‍ಗಳು; ಪತ್ರಗಳು ಬಂದಾಗ ಜೋಪಾನವಾಗಿ ಎತ್ತಿಟ್ಟುಕೊಂಡವು. ಇವಲ್ಲದೆ ನನಗೆ ಗಣಪತಿಯ ಮೂರ್ತಿಗಳನ್ನೂ, ನಾಣ್ಯಗಳನ್ನೂ […]










