
ಶಾಸ್ತ್ರೀಯ ಸಂಗೀತದಲ್ಲಿ ಯಾರು ಯಾರ ಗುರು, ಹಾಗೇ ಯಾರು ಯಾರ ಶಿಷ್ಯ ಎಂಬುದಕ್ಕೆ ತುಂಬ ಮಹತ್ತ್ವವಿದೆ. ಪ್ರಸಿದ್ಧರಾದ ದೊಡ್ಡ ಗುರುಗಳಲ್ಲಿ ಕಲಿತ ಶಿಷ್ಯರಿಗೆ ಅದರಿಂದಲೇ ಒಂದು ಗೌರವ ಬರುತ್ತದೆ; ಇನ್ನೊಂದೆಡೆ ಶಿಷ್ಯರು ಸಮರ್ಥರು ಮತ್ತು ಪ್ರಸಿದ್ಧರಾದಾಗ ಗುರುಗಳ ಘನತೆ ಮತ್ತು ಗೌರವ ಕೂಡ ಇಮ್ಮಡಿಯಾಗುತ್ತದೆ. ಇದರಲ್ಲಿ ಎರಡನೇ ಕ್ರಮದಲ್ಲಿ ಎದ್ದು ಕಾಣುವ ಓರ್ವ ಗುರು ಆಂಧ್ರ ಪ್ರದೇಶದ ಕರ್ನೂಲಿನವರಾದ ಡಾ| ಶ್ರೀಪಾದ ಪಿನಾಕಪಾಣಿ ಅವರು. ನೇದುನೂರಿ ಕೃಷ್ಣಮೂರ್ತಿ, ನೂಕುಲ ಚಿನ್ನ ಸತ್ಯನಾರಾಯಣ, ವೋಲೇಟಿ ವೆಂಕಟೇಶ್ವರುಲು, ಶ್ರೀರಂಗಂ ಗೋಪಾಲರತ್ನಂ, […]