ದಿವ್ಯಸ್ಮರಣೆ – 750ನೇ ಜನ್ಮವರ್ಷಾಚರಣೆಯ ಪರ್ವದ ನಮನ ಶ್ರೀವೈಷ್ಣವ ದೇವಾಲಯಗಳಲ್ಲಿ ತಮಿಳು ಪ್ರಬಂಧಗಳನ್ನೂ ಸ್ತೋತ್ರಗಳನ್ನೂ ಹೇಳುವುದಕ್ಕೆ ಮೊದಲು ಕೆಳಗಿನ ಸ್ತುತಿಯನ್ನು ಹೇಳುವ ಸಂಪ್ರದಾಯವಿದೆ: ರಾಮಾನುಜದಯಾಪಾತ್ರಂ ಜ್ಞಾನವೈರಾಗ್ಯಭೂಷಣಮ್ | ಶ್ರೀಮದ್ವೇಂಕಟನಾಥಾಯ ವಂದೇ ವೇದಾಂತದೇಶಿಕಮ್ || ಶ್ರೀ ವೇದಾಂತದೇಶಿಕರನ್ನು ಹೀಗೆ ಸ್ತುತಿಸಿರುವವರು ಶ್ರೀಪರಕಾಲಮಠದ ಬ್ರಹ್ಮತಂತ್ರಸ್ವತಂತ್ರ ಜೀಯರ್ ಮಹಾಸ್ವಾಮಿಗಳು. ಶ್ರೀರಂಗ, ಚೆನ್ನೈ ಮೊದಲಾದೆಡೆ ಶ್ರೀ ವೇದಾಂತದೇಶಿಕರದೇ ದೇವಾಲಯಗಳಿದ್ದು ಯಾತ್ರಾಸ್ಥಳಗಳಾಗಿವೆ. ಭಗವದ್ರಾಮಾನುಜರಿಂದ ಪ್ರತಿಪಾದಿತವಾದ ವಿಶಿಷ್ಟಾದ್ವೈತ ವೇದಾಂತಪ್ರಸ್ಥಾನವನ್ನು ದೃಢಗೊಳಿಸಿ ಹೆಮ್ಮರವಾಗಿ ಬೆಳೆಸಿದವರು ಶ್ರೀ ವೇದಾಂತದೇಶಿಕರು. ಅದರಷ್ಟೆ ಮನನೀಯ ಸಂಗತಿಯೆಂದರೆ ಕವಿಯಾಗಿಯೂ ಅವರು ಉತ್ತುಂಗತೆಗೇರಿದವರು. ಸಂಸ್ಕೃತ […]
ಶ್ರೀ ವೇದಾಂತದೇಶಿಕರು
Month : November-2019 Episode : Author : ಎಸ್.ಆರ್. ರಾಮಸ್ವಾಮಿ