
ಮೈಸೂರಿನ ಅಭಿನವ ಶಂಕರಾಲಯ: ಸಂಕ್ಷಿಪ್ತ ಪಕ್ಷಿನೋಟ
Month : April-2024 Episode : Author :
Month : April-2024 Episode : Author :
Month : April-2024 Episode : Author :
Month : April-2024 Episode : Author : ಸಂತ ಜ್ಞಾನೇಶ್ವರ ಮಹಾರಾಜರು
ಎಲ್ಲ ಪ್ರಾಣಿಮಾತ್ರರನ್ನು ಮಾಯೆಯೇ ಉತ್ಪನ್ನಗೊಳಿಸುವುದು ಮತ್ತು ಅದೇ ಅವನ್ನು ಲಯಗೊಳಿಸುವುದು. ಈ ಮಾಯೆಗೆ ಪ್ರಕೃತಿಯೆಂಬ ಹೆಸರಿದ್ದು, ಅದು ಎರಡು ವಿಧವಾಗಿದೆ ಎಂಬ ಸಂಗತಿಯನ್ನು ನಿನಗೆ ಈ ಮೊದಲೇ (ಅ.೭. ಶ್ಲೋ.೪-೫) ಹೇಳಿರುವೆನು. ಅವುಗಳಲ್ಲಿ ಒಂದು ಎಂಟು ವಿಧವಾದುದು (ಅಷ್ಟಧಾ ಪ್ರಕೃತಿಯು), ಇನ್ನೊಂದು ಜೀವರೂಪ. ಈ ಎಲ್ಲ ಪ್ರಕೃತಿಯ ವಿಷಯವನ್ನು ನೀನು ಮೊದಲು ಕೇಳಿಯೇ ಇರುವಿ. ಆದ್ದರಿಂದ ಅದಿರಲಿ, ಮೇಲಿಂದ ಮೇಲೆ ಹೇಳುವುದೇಕೆ? ಅದಾಗ್ಯೂ ಇನ್ನೂ ಹೇಳುವುದಾದರೆ, ಮಹಾ ಕಲ್ಪಾಂತ ಸಮಯಕ್ಕೆ ಈ ಎಲ್ಲ ಭೂತಗಳು ನನ್ನ ಅವ್ಯಕ್ತ […]
Month : April-2024 Episode : ಬೇತಾಳ ಕಥೆಗಳು - 7 Author : ಡಾ. ಎಚ್.ಆರ್. ವಿಶ್ವಾಸ
“ರಾಜನ್! ನಾನು ಕುಹಕವಾಡುತ್ತಿಲ್ಲ, ದಯವಿಟ್ಟು ನನ್ನ ಪ್ರಾರ್ಥನೆಯನ್ನು ಮನ್ನಿಸಿ ನಮ್ಮಲ್ಲಿಗೆ ಬರಬೇಕು’’ ಎಂದು ಅವಳು ಬೇಡಿಕೊಂಡಳು. ಚಂಡಸೇನನು ಒಪ್ಪಿಕೊಂಡು ಅವಳ ಹಿಂದೆಯೇ ಹೋದನು. ಅಲ್ಲಿ ಸುಂದರವಾದ ನಗರವಿತ್ತು. ಆಕೆ ಅವನನ್ನು ಕರೆದುಕೊಂಡು ಹೋಗಿ ರತ್ನಸಿಂಹಾಸನದ ಮೇಲೆ ಅವನನ್ನು ಕುಳ್ಳಿರಿಸಿ ಹೇಳಿದಳು – “ರಾಜನ್! ರಾಕ್ಷಸರಾಜನಾದ ಕಾಲನೇಮಿಯ ಮಗಳು ನಾನು. ನನ್ನ ತಂದೆಯನ್ನು ವಿಷ್ಣುವು ಸಂಹರಿಸಿದನು. ವಿಶ್ವಕರ್ಮನು ನಿರ್ಮಿಸಿಕೊಟ್ಟ ಈ ಎರಡು ದಿವ್ಯನಗರಗಳು ತಂದೆಯಿಂದ ನನಗೆ ಬಂದಿವೆ. ಇಲ್ಲಿ ಜರಾ-ಮರಣಗಳ ಭಯವಿಲ್ಲ. ನೀವು ಈಗ ನನ್ನ ತಂದೆಯ ಹಾಗೆ […]
Month : April-2024 Episode : Author : ನಾರಾಯಣ ಶೇವಿರೆ
‘ಕರೆದು ಬಂದವ ಅಭ್ಯಾಗತ, ಕರೆಯದೆ ಬಂದವ ಅತಿಥಿ’ ಎಂಬ ಪದವಿವರವೊಂದಿದೆ. ಆಮಂತ್ರಣದ ಮೇರೆಗೆ ಬಂದ ಅಭ್ಯಾಗತರನ್ನು ಎಷ್ಟು ಚೆನ್ನಾಗಿ ಉಪಚರಿಸಿದರೂ ಕಡಮೆಯೇ. ಅಂಥಲ್ಲಿ ಆಗಂತುಕನಾಗಿ ಬಂದ ಅತಿಥಿಯು ಸಾಕ್ಷಾತ್ ದೇವರೇ ಎಂಬುದು ಶ್ರದ್ಧೆ. ಆತಿಥ್ಯದ ಸ್ವರೂಪವನ್ನು ಈ ನೆಲೆಯಿಂದ ನೋಡಬೇಕು. ಶಿರಸಿ ಸಮೀಪದ ಸ್ವರ್ಣವಲ್ಲೀ ಮಠದಲ್ಲಿ ಈಚೆಗೆ ಶಿಷ್ಯಸ್ವೀಕಾರ ಕಾರ್ಯಕ್ರಮ ನಡೆಯಿತಷ್ಟೆ. ಆ ಸಂದರ್ಭದಲ್ಲಿ ಅಲ್ಲಿಯ ಹಿರಿಯ ಗುರುಗಳಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ಮಾತನಾಡುತ್ತ, ‘ಸಕ್ಕರೆ ತುಪ್ಪದ ಕಾಲುವೆ ಹರಿಸಿ ಶುಕ್ರವಾರದ ಪೂಜೆಯ ವೇಳೆಗೆ’ ಎಂದು […]
Month : April-2024 Episode : Author : -ಎಸ್.ಆರ್.ಆರ್.
ಅರಣ್ಯರಕ್ಷಣೋದ್ಯಮದಲ್ಲಿ ಮುಳುಗಿದಂತೆಲ್ಲ ಜನಶಿಕ್ಷಣದ ಆವಶ್ಯಕತೆಯೂ ಇದೆಯೆಂದು ಚಿಣ್ಣಪ್ಪನವರಿಗೆ ಮನವರಿಕೆಯಾಯಿತು. ಹೀಗೆ ಜನರೊಡನೆ ನಿರಂತರ ಸಂವಾದ ಕಾರ್ಯಕ್ರಮಗಳನ್ನು ನಡೆಸತೊಡಗಿದರು. ಚಿಣ್ಣಪ್ಪನವರ ಇಂತಹ ಒಂದೊಂದು ಪ್ರಯಾಸವೂ ಅಭೂತಪೂರ್ವವೇ ಆಗಿತ್ತು. ಅವರು ಜನರಿಗೆ ಪದೇಪದೇ ಹೇಳುತ್ತಿದ್ದ ಮಾತು: “ಮನುಷ್ಯರಿಲ್ಲದಿದ್ದರೂ ಕಾಡು ಉಳಿಯುತ್ತದೆ. ಆದರೆ ಕಾಡು ಇಲ್ಲದಿದ್ದರೆ ಮನುಷ್ಯರ ಬದುಕು ಅಸಾಧ್ಯ.” ವಿಶೇಷವಾಗಿ ಮಕ್ಕಳಿಗೆ ಪರಿಸರ ಕುರಿತು ಅರಿವು ಮೂಡಿಸಲು ಖಾಸಗಿಯಾದ ಸರ್ಕಾರೇತರ ಸಂಸ್ಥೆಯೊಂದನ್ನೂ ಚಿಣ್ಣಪ್ಪ ನಡೆಸುತ್ತಿದ್ದರು. ನಾಗರಹೊಳೆಯ ಸಂರಕ್ಷಕ’ ಎಂಬ ಹೆಸರಿನ ಪ್ರಶಸ್ತಿ ಏನಾದರೂ ಇದ್ದಿದ್ದರೆ ಅದಕ್ಕೆ ಪೂರ್ಣವಾಗಿ ಪಾತ್ರರಾಗುತ್ತಿದ್ದವರು ಕಳೆದ […]
Month : April-2024 Episode : Author : ಆರತಿ ಪಟ್ರಮೆ
ಆಧುನಿಕ ಬದುಕಿನ ಒತ್ತಡದಲ್ಲಿ, ಹಣ ಮಾಡುವ ಹಪಹಪಿಯಲ್ಲಿ ಹೆಣ್ಣುಮಕ್ಕಳೊಳಗೆ ಸಹಜವಾಗಿ ಅರಳಿಕೊಳ್ಳುವ ‘ಅಮ್ಮ’ ಇಲ್ಲವಾಗುತ್ತಿದ್ದಾಳೆಯೇ? ಅಮ್ಮನಾಗುವುದೆಂದರೆ ಕೇವಲ ಹೊತ್ತು, ಹೆತ್ತು, ಬೇಕುಬೇಕಾದುದನ್ನೆಲ್ಲ ಕೊಡಿಸುವುದಷ್ಟೇ ಅಲ್ಲವಲ್ಲ! ಯೋಚನೆ ಮಾಡಬೇಕಿದೆ. ಹೆಣ್ಣುಮಕ್ಕಳಿಗೆ ಆರ್ಥಿಕ ಸ್ವಾತಂತ್ರ್ಯ ಬೇಕೆಂಬುದೇನೋ ನಿಜ. ಯಾರ ಹಂಗೂ ಇಲ್ಲದೆ ಸ್ವಾಭಿಮಾನದಿಂದ ಬದುಕಬೇಕೆಂಬುದೂ ಸತ್ಯ. ಹಾಗೆಂದು ಸುಸ್ಥಿರ, ಸುದೃಢ ಸಮಾಜಕ್ಕೆ ಪ್ರಜ್ಞಾವಂತ ಮಕ್ಕಳನ್ನು ಕೊಡುವುದೂ ಬದುಕಿನ ಮಹತ್ತ್ವದ ಹೊಣೆಗಾರಿಕೆಯೇ ಹೌದಷ್ಟೇ! ತಾಯಿಯ ಕುರಿತು, ತಾಯ್ತನದ ಕುರಿತು ಮಾತನಾಡುವಾಗಲೆಲ್ಲ ಆ ಸ್ಥಾನದ ಶ್ರೇಷ್ಠತೆಯ ಬಗ್ಗೆ ಹೇಳುತ್ತೇವೆ. ಅಮ್ಮನ ತ್ಯಾಗ, ಮಗುವಿಗಾಗಿ […]
Month : April-2024 Episode : ಭಾಗ - 1 Author : ರಾಧಾಕೃಷ್ಣ ಕಲ್ಚಾರ್
ದ್ರವ್ಯವಿಲ್ಲದ ಬಡವನಾದರೂ ಚಿತ್ರಕನಿಗೆ ಕಲೆಯ ಬಡತನವಿರಲಿಲ್ಲ. ನೋಡಿದವರು, ‘ಆಹಾ, ಎಷ್ಟು ಸೊಗಸಾಗಿದೆ’ ಎಂದು ಮೆಚ್ಚಿಕೊಳ್ಳುವಂತೆ ಚಿತ್ರಗಳನ್ನು ಬರೆಯುತ್ತಿದ್ದ. ಅವರು ಕೊಟ್ಟ ಧಾನ್ಯವೋ, ಬಟ್ಟೆಯೋ, ಒಂದೆರಡು ನಾಣ್ಯಗಳೋ ಸಂಸಾರದ ಹೊಟ್ಟೆಗೆ ಸಾಕಾಗುತ್ತಿತ್ತು. ಅವನಿಗೆ ಚಿತ್ರ ಬರೆಯುವುದು ಬಿಟ್ಟು ಬೇರೆ ಏನೂ ಗೊತ್ತಿರಲಿಲ್ಲ. ಚಿತ್ರಗಾರನಾಗಿ ತನ್ನ ಯೋಗ್ಯತೆಯ ಕಲ್ಪನೆಯೂ ಅವನಿಗಿರಲಿಲ್ಲ. ಪ್ರತಿಭಾವಂತರಿಗೆ ತಮ್ಮ ಪ್ರತಿಭೆಯ ತಿಳಿವು ಇಲ್ಲದಿದ್ದರೆ ಅಹಂಕಾರ ಇರುವುದಿಲ್ಲ. ಅಂತೆಯೇ ಅದಕ್ಕೆ ಬೆಲೆಯೂ ಬರುವುದಿಲ್ಲ. ತಾನು ಪ್ರತಿಭಾಶಾಲಿ ಎಂದು ತಿಳಿದುಕೊಂಡವನು ಅದಕ್ಕೆ ಲೋಕದ ಜನರಿಂದ ಮನ್ನಣೆಯನ್ನು ಅಪೇಕ್ಷಿಸುತ್ತಾನೆ. ತನ್ನ […]
Month : April-2024 Episode : Author : ಎಸ್. ಕಾರ್ತಿಕ್
ಕಿರಿಯ ಕುಣಿಗಲ ರಾಮಶಾಸ್ತ್ರಿಗಳು ತಮ್ಮ ಮನೆಯನ್ನು ಯಾವುದಾದರೂ ಧರ್ಮಕಾರ್ಯಕ್ಕೆ ವಿನಿಯೋಗಿಸಬೇಕೆಂದು ಯೋಚಿಸಿದ್ದರು. ಇದಕ್ಕೆ ಅವಕಾಶ ತಾನಾಗಿಯೇ ಒದಗಿಬಂದಿತು. ಶೃಂಗೇರಿಯ ಶ್ರೀಶಾರದಾಪೀಠದ ಪೀಠಾಧಿಪತಿಗಳಾಗಿದ್ದ ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಸ್ವಾಮಿಗಳು {ಕ್ರಿ.ಶ. ೭-೪-೧೯೧೨ ರಿಂದ ೨೬-೯-೧೯೫೪} ತಮ್ಮ ಗುರುಗಳಾಗಿದ್ದ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಸ್ವಾಮಿಗಳು {ಪೀಠಾಧಿಪತ್ಯದ ಕಾಲ: ಕ್ರಿ.ಶ. ೨೭-೬-೧೮೭೯ ರಿಂದ ೨೦-೩-೧೯೧೨} ಜನ್ಮತಳೆದ ಸ್ಥಳದಲ್ಲಿ ಸ್ಮಾರಕವೊಂದನ್ನು ನಿರ್ಮಿಸಬೇಕೆಂಬ ಅಪೇಕ್ಷೆಯನ್ನು ಹೊಂದಿದ್ದರು. ಇದಕ್ಕಾಗಿ ಆಗ ಶ್ರೀಮಠದ ಆಡಳಿತಾಧಿಕಾರಿಗಳಾಗಿದ್ದ ಶ್ರೀಕಂಠಶಾಸ್ತ್ರಿಗಳೇ ಈ ಕೆಲಸವನ್ನು ಸಾಧಿಸಲು ಸಮರ್ಥರು ಎಂದು ಅರಿತು ಅವರಿಗೆ […]
Month : April-2024 Episode : Author : ಅನಂತ ರಮೇಶ್
ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ೧೯೬೨ರಲ್ಲಿ ಪ್ರಾರಂಭವಾದಾಗಿನಿಂದ ಗಮನಾರ್ಹವಾಗಿ ವಿಕಸನಗೊಂಡಿದೆ. ಇದರ ನೇತೃತ್ವ ವಹಿಸಿರುವ ‘ಇಸ್ರೋ’ ಸಂಸ್ಥೆಯು ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಪರಿಶೋಧನೆ ಕ್ಷೇತ್ರದಲ್ಲಿ ವಿಶೇಷ ಸಾಧನೆಗಳನ್ನು ಮಾಡಿದೆ. ಸಂಸ್ಥೆಯ ತಾಂತ್ರಿಕ ಕಾರ್ಯಕ್ರಮಗಳಾದ ಉಪಗ್ರಹಗಳ ಉಡಾವಣೆ ಮತ್ತು ಇತರ ಗ್ರಹಗಳ ಅನ್ವೇಷಣೆಯಲ್ಲಿ ಭಾರತವನ್ನು ಜಾಗತಿಕ ಬಾಹ್ಯಾಕಾಶ ತಂತ್ರಜ್ಞಾನದ ಪಥದಲ್ಲಿ ಮುಖ್ಯ ಸ್ಥಾನದಲ್ಲಿರಿಸಿದೆ. ಭಾರತದ ಬಾಹ್ಯಾಕಾಶ ಯೋಜನೆ ಮತ್ತು ಕಾರ್ಯಕ್ರಮವು ನಿಸ್ಸಂದೇಹವಾಗಿ ಪ್ರಗತಿಯತ್ತ ಸಾಗಿದ್ದು ಅದರ ಸಾಧನೆಗಳು ದೇಶದ ಆರ್ಥಿಕ, ತಾಂತ್ರಿಕ ಮತ್ತು ವೈಜ್ಞಾನಿಕ ಬೆಳವಣಿಗೆಗೆ ಮಹತ್ತರ ಕೊಡುಗೆ ಸಲ್ಲಿಸುತ್ತಿವೆ. […]