ರಾಮಾಯಣ ಮಹಾಭಾರತಗಳಂತಹ ಪ್ರಾಚೀನ ಕಾವ್ಯಗಳು ಕೇವಲ ಪುರಾಣಗಳೋ ಅಥವಾ ಐತಿಹ್ಯವೋ ಎನ್ನುವ ವಾದವಿವಾದಗಳೇನೇ ಇದ್ದರೂ, ಜನಪದಕ್ಕೆ ಈ ವಾದ-ವಿವಾದಗಳಿಗಿಂತ, ಅವು ಜೀವನದ ಆದರ್ಶ ಕಥಾನಕಗಳು ಎನ್ನುವುದೇ ಮುಖ್ಯವಾಗುತ್ತದೆ. ರಾಮನಂಥ ಪಿತೃವಾಕ್ಯ ಪರಿಪಾಲಕನಿದ್ದ, ಭರತನಂಥ ಭ್ರಾತೃಪ್ರೇಮಿಯಿದ್ದ, ಅವರ ಬದುಕಿನ ಆದರ್ಶಗಳು ಹೀಗಿದ್ದವು, ನಾವೂ ಹಾಗಿರಬೇಕು ಎನ್ನುವ ನೀತಿಯೇ ಪ್ರಧಾನವಾಗಿ, ಅವನ್ನು ದೇವರ ಕಲ್ಪನೆಯ ಜೊತೆಗೂ ಸೇರಿಸಲಾಯಿತು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ದೇವರ ವಿಷಯ ಬಂದಾಗ ಎಲ್ಲಾ ಧರ್ಮಗಳ ಕಥಾನಕದಂತೆ, ನಮ್ಮಲ್ಲಿಯೂ ಸಂಬಂಧಿತ ಕಥನಕಾವ್ಯಗಳಲ್ಲಿ ಪವಾಡಗಳ ಸೇರ್ಪಡೆಯಾಗಿರಬೇಕು. ಇದರ ಪರಿಣಾಮವೆಂದರೆ, ಸಹಜ […]
ರಾಮಾಯಣದ ಒಂದು ಮರುಓದು `ಉತ್ತರಕಾಂಡ’
Month : April-2017 Episode : Author : ಟಿ.ಎಂ. ರಮೇಶ