
ಇನ್ನೊಬ್ಬರಿಗೆ ತೊಂದರೆ ಕೊಡುವುದೇ ಜೀವನದ ಧ್ಯೇಯವೆಂಬ ಪಾತ್ರಗಳಾಗಲೀ ಅಥವಾ ತನಗಾಗುವ ಎಲ್ಲಾ ಅನ್ಯಾಯಗಳನ್ನೂ ಮೌನವಾಗಿ ಸಹಿಸಬೇಕೆಂಬ ಸಂದೇಶ ಕೊಡುವ ಪಾತ್ರಗಳಾಗಲೀ ಎರಡೂ ಬಗೆಯವು ಮಕ್ಕಳ ಮನಸ್ಸಿಗೆ ಹಾನಿ ಉಂಟುಮಾಡಬಲ್ಲವೇ ವಿನಾ ಒಳಿತನ್ನಲ್ಲ.
Month : April-2015 Episode : Author : ಆರತಿ ಪಟ್ರಮೆ
Month : April-2015 Episode : Author : ಸುಭಾಷಿಣಿ ಹಿರಣ್ಯ
ತರಕಾರಿ ತನ್ನಿ.” ಚೀಲದ ತುಂಬಾ ಕ್ಯಾರೆಟ್ ಬಂತು. “ಇಷ್ಟು ಕ್ಯಾರೆಟ್ ಏನ್ಮಾಡ್ಲೀ… ಬೇರೇನೂ ಸಿಗಲಿಲ್ವೇ?” “ಅಲ್ಲಿ ಇದ್ದಿದ್ದು ಇದೊಂದೇ, ಬೇರೆಲ್ಲಾ ಒಣಗಿದ ಹಾಗಿತ್ತು, ತಂದಿದ್ದನ್ನು ಏನಾದ್ರೂ ಮಾಡು.” “ಸರಿ ಹೋಯ್ತು; ನಾಳೆ ಮುಂಜಾನೆಗೊಂದು ದೋಸೆ ಇದ್ರಿಂದಾನೇ ಮಾಡೋಣ, ಅದಕ್ಕೇನಂತೆ….” ೨ ಕಪ್ ಅಕ್ಕಿ, ಅರ್ಧ ಕಪ್ ಉದ್ದು, ೨ ಚಮಚ ಮೆಂತೆ, ೨ ಕಪ್ ಕ್ಯಾರೆಟ್ ತುರಿ – ಇಷ್ಟು ಬೇಕು ದೋಸೆಗೆ.
Month : April-2015 Episode : Author : ಸು. ಕೃಷ್ಣ ನೆಲ್ಲಿ
ಉತ್ಥಾನ ವಾರ್ಷಿಕ ಕಥಾಸ್ಪರ್ಧೆ ೨೦೧೩ರಲ್ಲಿ ಮೆಚ್ಚುಗೆ ಬಹುಮಾನ ಪಡೆದ ಕಥೆ ‘ಅವನು’ ಆ ಗಳಿಗೆಯಿಂದ ‘ಅವರು’ ಆಗಿದ್ದು ಹೇಗೆ? ಜೀವನದಲ್ಲಿ ಏನೆಲ್ಲವನ್ನೂ ಅನುಭವಿಸಿದ ಮೇಲೆ ಹಣ್ಣೆಲೆಗೆ ಹೇಳಿಕೊಳ್ಳಲು ಏನು ತಾನೇ ಇರುತ್ತದೆ? ಅರ್ಧ ತುಂಬಿದ ಕೊಡವಷ್ಟೇ ನೀರು ತುಂಬುವಾಗ ಶಬ್ದ ಮಾಡುವುದು. ತುಂಬಿದ ಕೊಡ ತುಳುಕುವುದಿಲ್ಲ, ಎಂದರೆ ಶಬ್ದ ಮಾಡದು. ವಿಪರ್ಯಾಸವೆಂದರೆ ಅದು ಖಾಲಿ ಕೊಡದಷ್ಟೇ ಮೌನಿ, ಶಬ್ದರಹಿತ, ಆದರೆ ಸ್ವಯಂಪೂರ್ಣ.
Month : April-2015 Episode : Author : ಪ. ರಾಮಕೃಷ್ಣ ಶಾಸ್ತ್ರಿ ತೆಂಕಕಾರಂದೂರು ಬೆಳ್ತಂಗಡಿ
ಒಂದು ಹಳ್ಳಿಗೆ ಹೋಗಿದ್ದೆ. ಹತ್ತಾರು ಎಕರೆಗಳಲ್ಲಿ ಅವರು ವೈವಿಧ್ಯಮಯ ಕೃಷಿ ಮಾಡುತ್ತಿದ್ದರು. ಫಲಭಾರದಿಂದ ತೂಗುತ್ತಿದ್ದ ಅಡಕೆಮರಗಳು, ಗೊನೆ ಹೊತ್ತು ತೊನೆಯುತ್ತಿರುವ ತೆಂಗುಗಳು, ಕೃಷಿಮೇಳದಲ್ಲಿ ಮೊದಲ ಬಹುಮಾನ ತಂದುಕೊಟ್ಟ ಅಷ್ಟೆತ್ತರದ ಬಾಳೆಗೊನೆಗಳು, ಸಾಲಾಗಿ ಬರುತ್ತಿದ್ದ ದನಗಳು ಎಲ್ಲವೂ ಇದ್ದ ಅವರಲ್ಲಿ ಕೈಗೊಬ್ಬ ಕಾಲಿಗೊಬ್ಬ ಕೆಲಸದವನೂ ಇದ್ದ. ಕುತೂಹಲದಿಂದ ಕೇಳಿದ್ದೆ, “ಕೆಲಸಕ್ಕೆ ಬೇಕಾದಷ್ಟು ಜನ ನಿಮಗೆ ಸಿಗುತ್ತಾರಾ?” ಅವರು, “ನನಗೆ ಕೆಲಸದ ಜನಕ್ಕೆ ದರಿದ್ರವೇ ಇಲ್ಲ. ಸಂಬಳ ಮಾತ್ರವಲ್ಲ, ವರ್ಷಕ್ಕೊಮ್ಮೆ ಬೋನಸ್ ಅಂತ ಪಾತ್ರೆಗಳನ್ನು ಕೊಡುತ್ತೇನೆ. ಅವರಲ್ಲಿ ಮದುವೆಯಾಗುವುದಾದರೆ ಹತ್ತು […]
Month : April-2015 Episode : Author : ಸದಾಶಿವ ಎಸ್. ಸಕಲೇಶಪುರ
ಅವತ್ತು ಕಪ್ಪುಬಣ್ಣಕ್ಕೆ ಭಯಂಕರ ಕೋಪ ಬಂದಿತ್ತು. ಭಯಂಕರ ಅಂದ್ರೆ ನಖಶಿಖಾಂತ ಅಂತಾರಲ್ಲ ಅಂಥದ್ದೊಂದು ಕೋಪ ಬಂದಿತ್ತು. ಆ ಊರಿನ ಜನರಿಗೆ ಕಪ್ಪುಬಣ್ಣವೆಂದರೆ ಆಗಿಬರುತ್ತಿರಲಿಲ್ಲ. ಅವರು ಆಗಾಗ ಕಪ್ಪುಬಣ್ಣವನ್ನು ಲೇವಡಿ ಮಾಡುತ್ತಿದ್ದರು.
Month : April-2015 Episode : Author :
ಮಹತಿ ಹೆತ್ತ ಕುಡಿಗಳನೂ ಕಣ್ಣೆತ್ತಿ ನೋಡದ ಕೋಗಿಲೆ ಮಹಾ ನಿರ್ದಯಿ; ಪರರ ಕುಡಿಗಳನು ತನದೆಂದು ಸಲಹುವ ಕಾಗೆ ಕರುಣಾಮಯಿ! _ ಗಣಪತಿ ಹೆಗಡೆ ಬಗೆ ಈರ್ಷ್ಯೆಯ ಮೃಷ್ಟಾನ್ನವನುಂಡ ನಿನಗೆ ಪ್ರೀತಿತುತ್ತಿನ ರುಚಿ ಹೇಗೆ ಹತ್ತೀತು? – ಗಿರಿಜ ಕೆ.ಎಂ. ತುಳಿತ ಇದೋ … ಬೆಳಕಾಗಿದೆ, ಜನ ಚಪ್ಪಾಳೆ ತಟ್ಟುತ್ತಿದ್ದಾರೆ ಕರಗುವ ಮೇಣದ ಬತ್ತಿಗೆ ಹಿಗ್ಗು, ಸುಟ್ಟು ಕರಕಲಾದ ಬೆಂಕಿಕಡ್ಡಿ ಕಾಲಡಿ ನರಳುತಿದೆ! – ಪುಷ್ಪರಾಜ್ ಚೌಟ ವ್ಯತ್ಯಾಸ ಇರುಳ […]
Month : April-2015 Episode : Author : ಪಿ. ಪರಮೇಶ್ವರನ್
ಭಾರತದ ಇತಿಹಾಸದ ಅನುಸ್ಯೂತವಾದ ನಿರಂತರತೆಯ ಶೋಧ ನಡೆಸುತ್ತಿರುವವರಿಗೆ ಭಗವದ್ಗೀತೆ ಅತ್ಯಂತ ಮುಖ್ಯವಾದ ಒಂದು ಸುಳುಹನ್ನು ನೀಡುತ್ತದೆ. ಹತ್ತಾರು ನಿದರ್ಶನಗಳ ನಡುವೆ ಅದು ಏಕಮೇವಾದ್ವಿತೀಯ ಎಂಬುದು ನಿಸ್ಸಂಶಯ. ಅನುಸ್ಯೂತವಾದ ನಿರಂತರತೆ ಎನ್ನುವಾಗ ರಾಜಕೀಯ ಅಥವಾ ಆರ್ಥಿಕ ವ್ಯವಸ್ಥೆಗಳು ನಮ್ಮ ಉದ್ದೇಶಿತ ವಿಷಯವಲ್ಲ; ಸಾಮಾಜಿಕ ಜೀವನಪದ್ಧತಿ ಕೂಡ ಅಲ್ಲ. ಭಾರತದ ಆಧ್ಯಾತ್ಮಿಕ ಮತ್ತು ಸಾಂಸತಿಕ ಜೀವನಪ್ರವಾಹವೇ ಈ ನಿರಂತರತೆಯ ಹಿಂದಿನ ಸತ್ಯವಾಗಿದೆ. ಅನಾದಿಕಾಲದಿಂದ ಇವತ್ತಿನ ತನಕ ಭಾರತ ತಡೆಯಿಲ್ಲದೆ ಯಾವೊಂದು ಪ್ರವಾಹವನ್ನು ಯಶಸ್ವಿಯಾಗಿ ಉಳಿಸಿಕೊಂಡಿದೆಯೋ ಇದರಲ್ಲಿ ಬೇರಾವುದೇ ರಾಷ್ಟ್ರ ಯಶಸ್ವಿಯಾಗಿಲ್ಲ.
Month : April-2015 Episode : Author :
Month : April-2015 Episode : Author : ಡಾ|| ಕೆ. ಜಗದೀಶ ಪೈ
ಸಮರಸದಿಂದ ಸಂಸಾರ ಸಾಗಿಸಬೇಕಾದರೆ ನಾವು ಹಾಸ್ಯಪ್ರಜ್ಞೆ ಉಳ್ಳವರಾಗಿರಬೇಕು. ನಮ್ಮನ್ನೇ ನಾವು ಹಾಸ್ಯ ಮಾಡಿಕೊಳ್ಳುವಷ್ಟು ನಮ್ಮ ಮನಸ್ಸನ್ನು ವಿಶಾಲಗೊಳಿಸಬೇಕು. ಹಾಸ್ಯಪ್ರಜ್ಞೆಯನ್ನು ಜಾಗೃತಗೊಳಿಸಿ ಜೀವನದಲ್ಲಿ ಅಳವಡಿಸಿಕೊಂಡರೆ ಸಂಸಾರ ದುಃಖದ ಸಾಗರವಾಗದೆ ಆನಂದಸಾಗರವಾಗುತ್ತದೆ.
Month : April-2015 Episode : Author :