ನಾಲ್ಕು ಕವನಗಳು ೧. ಮತ್ತೆ ಮತ್ತೆ ಮತ್ತೆ ಮತ್ತೆ ಸೋತು ಹರಳುಗಟ್ಟಿದ ಸುಣ್ಣ ನಾನು; ಸುಟ್ಟು ಬಿಡಿ ನನ್ನ ನಿಮ್ಮ ಗೋಡೆಗಳ ಬೆಳಗುತ್ತೇನೆ! ಮತ್ತೆ ಮತ್ತೆ ಎಲೆಗಳುದುರಿ ಬೋಳಾದ ಮರ ನಾನು; ಕಡಿದು ಬಿಡಿ ನನ್ನ ನಿಮ್ಮ ಒಲೆಗೆ ಉರುವಲಾಗುತ್ತೇನೆ! ಮತ್ತೆ ಮತ್ತೆ ಕರಗಿ ಮಂಕಾದ ಬಿದಿಗೆ ಚಂದ್ರ ನಾನು; ನೋಡಿ, ನಕ್ಕುಬಿಡಿ ನನ್ನ ನಿಮ್ಮ ಮನವ ಹುಣ್ಣಿಮೆಯಾಗಿಸುತ್ತೇನೆ! ೨. ಪಾಡು ಕೊರಿಯಾದಲ್ಲಿ ಅಣ್ವಸ್ತ್ರದ ಪರೀಕ್ಷೆ! ಸಿರಿಯಾದಲ್ಲಿ ಅನ್ನ ವಸ್ತ್ರದ ಪ್ರತೀಕ್ಷೆ! ಅವರಿಗೆ ಬೇಕಂತೆ ರಕ್ಷೆ! ಇವರಿಗಿಲ್ಲ […]
ಕವನಗಳು
Month : March-2016 Episode : Author :