
ಉತ್ಥಾನ ನವೆಂಬರ್ 2020
Month : November-2020 Episode : Author :
Month : November-2020 Episode : Author :
Month : November-2020 Episode : Author :
Month : October-2020 Episode : Author :
Month : October-2020 Episode : Author :
ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಅವರು ಟ್ವೀಟ್ ಮೂಲಕ “Congratulations to Team TAPAS & @Rashtrotthana_P for their efforts in nurturing Karnataka’s tremendous rural talent and giving them an opportunity to get into the country’s premier institutions” ಎಂದು ಶುಭ ಹಾರೈಸಿದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದರು. ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪನವರ […]
Month : October-2020 Episode : Author :
ರಾಷ್ಟ್ರೋತ್ಥಾನ ಪರಿಷತ್ ಸಂಚಾಲಿತ ತಪಸ್ನ 14 ವಿದ್ಯಾರ್ಥಿಗಳು ಇತ್ತೀಚೆಗೆ ಪ್ರಕಟಗೊಂಡ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಐಐಟಿಗೆ ಪ್ರವೇಶಾವಕಾಶ ಪಡೆದಿದ್ದಾರೆ. ಆರ್ಥಿಕವಾಗಿ ಅತಿ ಹಿಂದುಳಿದ ಪರಿವಾರಗಳಿಂದ, ಸೆಕ್ಯುರಿಟಿ, ಹೌಸ್ ಕೀಪಿಂಗ್, ಗಾರ್ಮೆಂಟ್ಸ್, ರೈತ ಕೂಲಿಕಾರರು, ಸಂಚಾರಿ ವ್ಯಾಪಾರಿಗಳು ಇಂತಹ ಕುಟುಂಬಗಳಿಂದ ಬಂದಂತಹ ಮಕ್ಕಳ ಸಾಧನೆ ಪ್ರೇರಣೆ ನೀಡುವಂತಹುದು. ಅವಕಾಶ ವಂಚಿತ ಇಂತಹ ಮಕ್ಕಳಿಗಾಗಿ ರಾಷ್ಟ್ರೋತ್ಥಾನ ಪರಿಷತ್ ಹಾಗೂ ಬೇಸ್ ಸಂಸ್ಥೆಗಳು ಉಚಿತವಾಗಿ ಶಿಕ್ಷಣ, ವಸತಿ, ಇತ್ಯಾದಿ ವ್ಯವಸ್ಥೆಗಳನ್ನು ಕಲ್ಪಿಸಿ, ಐಐಟಿ-ಎನ್ಐಟಿಗಳಂತಹ ಪ್ರತಿಷ್ಠಿತ ಸಂಸ್ಥೆಗಳಿಗೆ ಪ್ರವೇಶ ಪಡೆಯಲು […]
Month : September-2020 Episode : Author : ಶತಾವಧಾನಿ ಡಾ|| ರಾ. ಗಣೇಶ್
ಸುಮಾರು ಇಪ್ಪತ್ತೈದು ವರ್ಷಗಳ ಮುನ್ನ ನನ್ನ ಸಂಗೀತಗುರುಗಳ ಗಾನದ ಧ್ವನಿಮುದ್ರಣಕ್ಕಾಗಿ ಅರವಿಂದ್ ಸ್ಟುಡಿಯೋಗೆ ಹೋಗಿದ್ದಾಗ ಸ್ವಲ್ಪ ಹೊತ್ತಿಗೇ ಅಲ್ಲಿಯ ಸಿಬ್ಬಂದಿಯ ನಡುವೆ ಸಂಭ್ರಮೋತ್ಸಾಹಗಳು ಪುಟಿದೆದ್ದವು. ಏಕೆಂದರೆ ಕೆಲವೇ ನಿಮಿಷಗಳಲ್ಲಿ ಪ್ರಖ್ಯಾತ ನೇಪಥ್ಯಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರು ತಮ್ಮ ಹಾಡೊಂದರ ಧ್ವನಿಮುದ್ರಣಕ್ಕೆ ಅಲ್ಲಿ ಬರಲಿದ್ದರು. ಮೊದಲಿನಿಂದಲೂ ಘಂಟಸಾಲ ವೇಂಕಟೇಶ್ವರರಾಯರ ಹಾಗೂ ಪಿ. ಬಿ. ಶ್ರೀನಿವಾಸರ ಗಾನಮಾಧುರ್ಯಕ್ಕೆ ಮಾರುಹೋಗಿದ್ದ ನಾನು ಬಾಲು ಅವರ (ಇದು ಅವರ ಅಶೇಷ ಅಭಿಮಾನಿಗಳು ಆತ್ಮೀಯತೆಯಿಂದ ಕರೆಯುವ ಪರಿ) ಪ್ರತಿಭೆಯನ್ನು ಮೆಚ್ಚಿಕೊಂಡಿದ್ದರೂ ಅದಕ್ಕೆ ಮನಸೋತಿರಲಿಲ್ಲ. […]
Month : September-2020 Episode : Author : ಎಚ್ ಮಂಜುನಾಥ ಭಟ್
ನಮ್ಮ ಶಾಲೆ-ಕಾಲೇಜುಗಳ ಪಠ್ಯಪುಸ್ತಕಗಳು ಈಗಲೂ ಕೂಡ ಪಾಶ್ಚಾತ್ಯ ದೇಶಗಳೊಂದಿಗೆ ನಮ್ಮನ್ನು ಹೋಲಿಸಿಕೊಂಡು ನಮ್ಮಲ್ಲಿ ಕೀಳರಿಮೆಯನ್ನು ಬೆಳೆಸುವಂತಹ ಕೆಲಸವನ್ನು ಮಾಡುತ್ತಿವೆ ಎನಿಸುತ್ತದೆ. ಅಮೆರಿಕದ ಪ್ರಜೆಗಳ ತಲಾ ಆದಾಯ ಇಷ್ಟು; ಭಾರತೀಯರದ್ದು ಇಷ್ಟು ಮಾತ್ರ. ಆಹಾರ, ಬಟ್ಟೆ ಮುಂತಾದವುಗಳ ಬಳಕೆಯ ವಿಚಾರದಲ್ಲೂ ಅಷ್ಟೆ. ಅಲ್ಲಿ ತಲಾ ಅಷ್ಟು ಬಳಸುತ್ತಾರೆ; ನಮ್ಮಲ್ಲಿ ಇಷ್ಟೇ. ಇದನ್ನೆಲ್ಲ ನಾವು ಇನ್ನೂ ಎಷ್ಟು ಕಾಲ ಮುಂದುವರಿಸುತ್ತೇವೋ! ಆದರೆ ವಾಸ್ತವದ ಪರಿಸ್ಥಿತಿ ಬಹಳ ಮುಂದೆ ಹೋಗಿದೆ. ಪಾಶ್ಚಾತ್ಯ ದೇಶಗಳು ಯಾವುದನ್ನು ತಮ್ಮ ಆದರ್ಶಗಳೆಂದು ಹೆಮ್ಮೆಪಟ್ಟುಕೊಳ್ಳುತ್ತಾ ಬಂದರೋ, ಅಂತಹ […]
Month : September-2020 Episode : Author :
“ನೀನು ಅದೇನು ಮಾಡಿದರೂ ರುಚಿಯೇ” ನನ್ನವರ ಮೆಚ್ಚುಗೆಯ ಮಾತು. ಮಕ್ಕಳು ನಾನು ಮಾಡಿದ ತಿಂಡಿ, ಸ್ವೀಟು ಚಪ್ಪರಿಸಿ ತಿನ್ನುತ್ತಾ, “ಅಮ್ಮಾ ಇನ್ನೂ ಸ್ವಲ್ಪ ಬೇಕಮ್ಮಾ…” ಎನ್ನುವಾಗ ಸಿಗುವ ಆನಂದ ವರ್ಣಿಸಲು ಅಸಾಧ್ಯ. ಹೌದು, ಅಡುಗೆ ಮಾಡುವಾಗ ಮನಸ್ಸು ತುಂಬ ಪ್ರೀತಿಯನ್ನು ತುಂಬಿ ಸಂತಸದಿಂದ ಮಾಡಿ; ಆಗಲೇ ಅಡುಗೆಯು ಸ್ವಾದಿಷ್ಟವಾಗುವುದು. ಮಾಡಿದ ಅಡುಗೆಯು ಎಲ್ಲರೂ ಇಷ್ಟಪಟ್ಟು ತಿನ್ನಬೇಕು ಎಂದು ಪ್ರೀತಿಯಿಂದ ಮಾಡಿದಾಗ ಗಂಜಿ-ಚಟ್ನಿ ಮಾಡಿದರೂ ಅದು ಪರಮಾನ್ನವಾಗಿ ರುಚಿಸುವುದು. ಇದು ನನಗೆ ಎಷ್ಟೋ ಬಾರಿ ಅನುಭವಕ್ಕೆ ಬಂದಿದೆ. “ಅಮ್ಮಾ […]
Month : September-2020 Episode : Author : ಹೊಳೆಹೊನ್ನೂರು ಪ್ರಶಾಂತ್
‘ಒಂದು ದೇಶವನ್ನು ನಾಶಮಾಡಲು ಯಾವುದೇ ಅಣುಬಾಂಬನ್ನು ಪ್ರಯೋಗಿಸುವ ಆವಶ್ಯಕತೆ ಇಲ್ಲ, ಆ ದೇಶದ ಶಿಕ್ಷಣವ್ಯವಸ್ಥೆಯನ್ನು ಅಸ್ತವ್ಯಸ್ತ ಮಾಡಿದರೆ ಸಾಕು, ಆ ದೇಶ ಅಧಃಪತನಗೊಳ್ಳುತ್ತದೆ’ ಎಂದು ಪ್ರಾಚೀನರೊಬ್ಬರು ಹೇಳಿದ ಮಾತು ಶಿಕ್ಷಣಕ್ಕೆ ಇರುವ ಪ್ರಾಮುಖ್ಯ ಏನು ಎಂಬುದನ್ನು ತಿಳಿಸುತ್ತದೆ. ಈಚೆಗೆ ಪ್ರಚಲಿತವಾಗಿರುವ ಮತ್ತು ಚರ್ಚೆಯಲ್ಲಿರುವ ವಿಷಯಗಳಲ್ಲಿ ಶಿಕ್ಷಣವೂ ಒಂದು. ತಾವು ಅವಿದ್ಯಾವಂತರಾಗಿದ್ದರೂ ತಮ್ಮ ಮಕ್ಕಳು ವಿದ್ಯಾವಂತರಾಗಲಿ ಎಂದು ಆಶಿಸುವ ಪಾಲಕರಿಗೇನೂ ಕೊರತೆಯಿಲ್ಲ. ಕೊರೋನಾದಂತಹ ಕಠಿಣ ಪರಿಸ್ಥಿತಿಯಲ್ಲಿಯೂ ತಮ್ಮ ಮಕ್ಕಳಿಗೆ ಶಾಲೆಯ ಬೆಂಚುಗಳ ಸಾಲಿನಲ್ಲಿ ಕುಳ್ಳಿರಿಸಿ ಶಿಕ್ಷಣ ನೀಡುವುದೇ ಅಥವಾ […]
Month : September-2020 Episode : Author : ಸಂಗೀತಕಲಾರತ್ನ ಎಸ್. ಶಂಕರ್
–ಸಂಗೀತಕಲಾರತ್ನ ಎಸ್. ಶಂಕರ್ ‘ಮೈಸೂರು’ ಎಂದೊಡನೆ ಪ್ರತಿಯೊಬ್ಬರಿಗೂ ಅವರವರ ವಿಶೇಷ ಅಭಿರುಚಿಗೆ ತಕ್ಕಂತೆ ನೆನಪುಗಳು ಬಂದಾವು: ಪ್ರವಾಸಿಗರಿಗೆ ಅರಮನೆ, ಮಕ್ಕಳಿಗೆ ಪ್ರಾಣಿಸಂಗ್ರಹಾಲಯ, ಯಾತ್ರಿಕರಿಗೆ ಚಾಮುಂಡಿಬೆಟ್ಟ, ಹೆಂಗಳೆಯರಿಗೆ ಮಲ್ಲಿಗೆ, ಭೋಜನಪ್ರಿಯರಿಗೆ ಮೈಸೂರ್ಪಾಕ್ ಮತ್ತು ಅಗಿಯಲು ಚಿಗುರೆಲೆ – ಸಂಗೀತ ರಸಿಕರಿಗೆ ಮೈಸೂರುಶೈಲಿಯ ವೀಣಾ ವಾದನ. ‘ವೀಣೆಯೆಂದರೆ ಶೇಷಣ್ಣ, ಶೇಷಣ್ಣ ಎಂದರೆ ವೀಣೆ’ ಎಂಬುದು ಪ್ರಸಿದ್ಧ ಉಕ್ತಿ. ಇಂತಹ ಶ್ರೇಷ್ಠ ವಂಶದಲ್ಲಿ ಜನಿಸಿದವರು ಮೈಸೂರು ವಿ. ಸುಬ್ರಹ್ಮಣ್ಯ ಅವರು. ಮೈಸೂರು ವಿ. ಸುಬ್ರಹ್ಮಣ್ಯ ಅವರ ತಂದೆ ವೆಂಕಟನಾರಾಯಣರಾಯರು ಶೇಷಣ್ಣನವರ ಮೊಮ್ಮಕ್ಕಳಾಗಿದ್ದು, […]