ಬ್ರಿಟಿಷರ ಆರಂಭಿಕ ಬೆಳವಣಿಗೆ ತುಂಬಾ ನಿಧಾನಗತಿಯಲ್ಲೇ ಇತ್ತು. ಮೊಘಲರ ಪತನದ ಅನಂತರ ಅದು ಸ್ವಲ್ಪ ವೇಗವನ್ನು ಪಡೆದುಕೊಂಡಿತು. ಆ ನಿಟ್ಟಿನಲ್ಲಿ ಬಂಗಾಳದಲ್ಲಿಯ ಅವರ ಬೆಳವಣಿಗೆ ಮತ್ತು ಅಲ್ಲಿ ನಡೆದ (೧೭೫೭) ಪ್ಲಾಸಿಯುದ್ಧವು ಮಹತ್ತ್ವದ್ದೆನಿಸಿದೆ. ಭಾರತದಲ್ಲಿ ಬ್ರಿಟಿಷರ ಸಾಮ್ರಾಜ್ಯದ ಆರಂಭ ಪ್ಲಾಸಿ ಯುದ್ಧದಿಂದಲೇ ಶುರುವಾಯಿತೆಂದು ಭಾವಿಸಲಾಗುತ್ತದೆ. ೧೮ನೇ ಶತಮಾನದಲ್ಲಿ ಬಂಗಾಳವು ನವಾಬರ ಕೈಯಲ್ಲಿತ್ತು. ಜಾನ್ ಕಂಪೆನಿ ಎಂದು ಕರೆಯಲಾಗುವ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯು ೧೮ನೇ ಶತಮಾನದ ಆರಂಭದಲ್ಲಿ ಅಲ್ಲಿಗೆ ಬಂತು. ಫ್ರೆಂಚರು, ಆರ್ಮೇನಿಯನ್ನರು, ಡಚ್ಚರು ಕೂಡ ಅಲ್ಲಿದ್ದರು. […]
ಬ್ರಿಟಿಷ್ ವಸಾಹತು ಸ್ಥಾಪನೆಯಲ್ಲಿ ಪ್ಲಾಸಿ ಯುದ್ಧ: ಕಾರಣಗಳು
Month : August-2023 Episode : ಭಾಗ - 1 Author : ಎಂ.ಬಿ. ಹಾರ್ಯಾಡಿ