ಅದೇನು ಮಹಾ
ರಾಮು: ನಮ್ಮ ತಂದೆಗೆ ಒಂದು ಸಣ್ಣ ವಿಷಯ ಸಿಕ್ಕಿದರೂ ಸಾಕು, ಗಂಟೆಗಟ್ಟಲೆ ಮಾತನಾಡುತ್ತಾರೆ.
ವೆಂಕಿ: ಅದೇನು ಮಹಾ? ನಮ್ಮ ತಾಯಿ ವಿಷಯವಿಲ್ಲದಿದ್ದರೂ ದಿನವೆಲ್ಲಾ ಮಾತನಾಡುತ್ತಾರೆ.
ಕತ್ತೆಗೆ ಕ್ಷೌರ
ಗುಂಡ: ಏನಯ್ಯಾ, ನೀನು ಎಂದಾದರೂ ಕತ್ತೆಗೆ ಕ್ಷೌರ ಮಾಡಿದ್ದೀಯಾ?
ಕ್ಷೌರಿಕ: ಇಲ್ಲಾ ಸ್ವಾಮಿ. ಕುಳಿತುಕೊಳ್ಳಿ, ಮಾಡುತ್ತೇನೆ.
ಯಾವುದಕ್ಕೂ ಮೊದಲು
ಉಪಾಧ್ಯಾಯರು: ವಿದ್ಯಾರ್ಥಿಗಳೇ, ನಮ್ಮ ಶಾಲೆಯಲ್ಲಿ ಈಗ ಸಿ.ಸಿ. ಕ್ಯಾಮರಾ ಅಳವಡಿಸಿದ್ದಾರೆ. ನಿಮಗೆ ಗೊತ್ತಾ?
ಗುಂಡ: ಯಾವುದಕ್ಕು ಮೊದಲು ನೀವು ಹುಷಾರಾಗಿರಿ ಸಾರ್.
ಕತ್ತೆಗೆ ಕೇಳಿದರೆ
ಟೀಚರ್: ಕತ್ತೆಗಳೇಕೆ ಕಾಡಿನಲ್ಲಿ ವಾಸಿಸುವುದಿಲ್ಲ?
ಗುಂಡ: ಈ ಪ್ರಶ್ನೇನ ಯಾವುದಾದರೂ ಕತ್ತೆಗೆ ಕೇಳಿದರೆ ಒಳ್ಳೆಯದು.
ಟೀಚರ್: ಅದಕ್ಕೆ ನಿನಗೆ ಕೇಳಿದ್ದು.
ಪೇಪರಿನಲ್ಲಿ
ಹೆಂಡತಿ: ಆ ಸಿನೆಮಾ ನಟಿಗೆ ಗಂಡು ಮಗು ಆಯ್ತುಂತೆ. ಇಲ್ಲಿ ನೋಡಿ ಪೇಪರ್ನಲ್ಲಿ ಹಾಕಿದ್ದಾರೆ.
ಗುಂಡ: ಈಡಿಯೆಟ್ಸ್! ಮಗುವನ್ನು ತೊಟ್ಟಿಲಲ್ಲಿ ಹಾಕುವುದನ್ನು ಬಿಟ್ಟು ಪೇಪರ್ನಲ್ಲಿ ಯಾಕೆ ಹಾಕಿದ್ದಾರೆ?
ಪುಣ್ಯಾತ್ಮ
ಮಹಿಳೆ: ನನ್ನ ಗಂಡ ನನ್ನನ್ನು ಮದುವೆಯಾದ ಒಂದು ವರ್ಷದೊಳಗೆ ತೀರಿಹೋದರು.
ವೈದ್ಯ: ಪುಣ್ಯಾತ್ಮ! ಹೆಚ್ಚು ಕಾಲ ನರಳಲಿಲ್ಲ.
ನಿಮ್ಮ ನೆರಳಲ್ಲೇ
ಪ್ರಿಯತಮೆ: ರೀ… ನಾನು ಜೀವಮಾನವೆಲ್ಲಾ ನಿಮ್ಮ ನೆರಳಲ್ಲೇ ಬದುಕಬೇಕೆಂದುಕೊಂಡಿದ್ದೇನೆ.
ಪ್ರಿಯತಮ: ಏನೇ ಹಾಗೆಂದರೆ? ನನ್ನನ್ನು ಬಿಸಿಲಲ್ಲೇ ಸಾಯಿಸಬೇಕೆಂದುಕೊಂಡಿರುವೆಯಾ?.
ಸುಟ್ಟಿದ್ದು ಹೇಗೆ?
ಗುಂಡನಿಗೆ ವಿಪರೀತ ಮರೆವು. ಅವನ ಎರಡು ಕಿವಿಗಳೂ ಸುಟ್ಟು ಕರಕಲಾಗಿ ಹೋಗಿದ್ದವು. ಅವನು ಕೂಡಲೇ ವೈದ್ಯರ ಬಳಿಗೆ ಓಡಿದ.
ವೈದ್ಯರು: ಇದೆಲ್ಲ ಹೇಗಾಯಿತು?
ಗುಂಡ: ನನ್ನ ಬಟ್ಟೆಗಳನ್ನು ಐರನ್ ಮಾಡ್ತಾ ಇದ್ದೆ ಡಾಕ್ಟ್ರೇ! ಆಗ ಫೋನ್ ಬಂತು. ರಿಸೀವರ್ ಕಿವಿಗೆ ಇಟ್ಟುಕೊಳ್ಳುವ ಬದಲು ಐರನ್ ಬಾಕ್ಸ್ ಇಟ್ಟುಕೊಂಡು ಬಿಟ್ಟೆ.
ವೈದ್ಯರು: (ಅನುಕಂಪದಿಂದ) ಛೇ! ಎಂಥ ಕೆಲಸ ಮಾಡಿಕೊಂಡಿದ್ದೀರಾ. ಅದೇನೋ ಸರಿ, ಆದರೆ ಇನ್ನೊಂದು ಕಿವಿ ಸುಟ್ಟಿದ್ದಾದರು ಹೇಗೆ?
ಗುಂಡ: ಅಯ್ಯೋ, ಆ ಅಯೋಗ್ಯ ಮತ್ತೊಮ್ಮೆ ಫೋನ್ ಮಾಡಿದ ಡಾಕ್ಟ್ರೇ.
ಮುಂದೆ ನಿಲ್ಲಿಸಲು ಹೇಳಿ
ಕಂಡಕ್ಟರ್: ಮಾವಿನಕೆರೆ ಬಂದಿದೆ. ಇಳಿಯುವವರು ಬೇಗ ಇಳಿಯಿರಿ.
ಪ್ರಯಾಣಿಕ: ಕಂಡಕ್ಟ್ರೇ, ಬಸ್ಸನ್ನು ಸ್ವಲ್ಪ ಮುಂದೆ ನಿಲ್ಲಿಸಲು ಹೇಳಿ. ನನಗೆ ಈಜು ಬರುವುದಿಲ್ಲ.