ಮಾಡಿದ ಕೆಲಸ
ಅಪ್ಪ ಆಫೀಸಿನಿಂದ ಮನೆಗೆ ಬಂದವನು ಮಕ್ಕಳನ್ನೆಲ್ಲ ಕರೆದು ಕೇಳಿದ: ನಾನು ಹೇಳಿದ ಕೆಲಸಗಳನ್ನೆಲ್ಲ ಮಾಡಿದ್ದೀರಾ?
ಓಹೋ, ನಾನು ಪಾತ್ರೆಗಳನ್ನೆಲ್ಲ ತೊಳೆದೆ ಅಪ್ಪ – ಎಂದಳು ಮಗಳು.
ನಾನು ಅವುಗಳನ್ನೆಲ್ಲ ಒರಸಿಟ್ಟೆ, ಅಪ್ಪ – ಎಂದ ಮಗ. ಕೊನೆಯವನು ಸುಮ್ಮಗೆ ನಿಂತಿದ್ದ.
ನೀನು ಏನು ಮಾಡಿದೆಯೋ?
ಇವರಿಬ್ಬರೂ ಒಡೆದುಹಾಕಿದ ಪಾತ್ರೆ-ಪಡಗಗಳ ಚೂರನ್ನು ಎತ್ತಿಹಾಕಿದೆ ಕಣಪ್ಪ ಎಂದ ಮುದ್ದು ಮುದ್ದಾಗಿ.
– ಪಾಂಚಜನ್ಯ
ಅಸಂಬದ್ಧ ಲೆಕ್ಕ
ಗುಂಡ : ಈ ಗಣಿತ ಮೇಷ್ಟ್ರುದು ಅತೀ ಆಯಿತು ಕಣೋ.
ತಿಂಮ: ಏಕೆ ಏನಾಯಿತು?
ಗುಂಡ : ನನಗೆ ಇವತ್ತು ಒಂದು ಅಸಂಬದ್ಧ ಲೆಕ್ಕ ಕೇಳಿದರು.
ತಿಂಮ: ಏನದು?
ಗುಂಡ : ಒಬ್ಬ ತಾಯಿ ಒಂದು ಮಗುವನ್ನು ಹೆರಲು ಒಂಭತ್ತು ತಿಂಗಳು ಬೇಕಾದರೆ, ಒಂಭತ್ತು ಅಮ್ಮಂದಿರು ಒಂದು ಮಗುವನ್ನು ಹೆರಲು ಎಷ್ಟು ತಿಂಗಳು ಬೇಕು?
– ನೆಟ್ಟಿಗ
ಸಂಪಾದನೆ
ಭಿಕ್ಷುಕರ ಸಂಪಾದನೆ ಸಾಕಷ್ಟು ಹೆಚ್ಚು ಎಂದು ಪತ್ರಿಕೆಗಳಲ್ಲೆಲ್ಲಾ ಬರ್‍ತಾ ಇರುತ್ತಲ್ಲ; ಆದರೆ ಎಷ್ಟು ಹೆಚ್ಚು?
ಒಬ್ಬ ಭಿಕ್ಷುಕ ತನ್ನ ಮಾಮೂಲಿ ಮನೆಯಮುಂದೆ ನಿಂತು `ಭಿಕ್ಷಾ ನೀಡಿ ತಾಯಿ’ ಎಂದು ಕೂಗಿದ. ಮನೆಯೊಡತಿ, ಎಲ್ಲೋ, ಈ ನಡುವೆ ನೀನು ಕಾಣಿಸ್ತಾ ಇಲ್ಲ. ಎಲ್ಲಿಗೆ ಹೋಗಿದ್ದೆ? ಎಂದು ಕೇಳಿದಳು.
ರಜಾ ಸಿಗಲಿಲ್ಲ, ತಾಯಿ ಅವನು ಉತ್ತರಿಸಿದ.
ಕೆಲಸ ಬೇರೆ ಮಾಡುತ್ತೀಯೇನೊ! ಯಾವ ಕೆಲಸ?
ಸಾಫ್ಟ್‌ವೇರ್ ಇಂಜಿನಿಯರ್, ತಾಯಿ.
– ಪಾಂಚಜನ್ಯ