ಕತ್ತಲಭಾಗ್ಯ!
ಕಾರಣ
ಮನು: ಯಾಕೋ ಪುಟ್ಟ ಅಳ್ತಿದ್ದೀಯಾ!
ಪುಟ್ಟ: ರಜೆಯಲ್ಲಾದರೂ ಟಿ.ವಿ. ನೋಡೋಣಾಂದ್ರೆ ಈ ಹಾಳಾದ ಕತ್ತಲಭಾಗ್ಯ ಮತ್ತೆ ಮುಂದುವರಿದಿದೆ.
ಇಲ್ಲೇ ವಾಸಿ!
ಗಂಡ: ರಜೆಯಲ್ಲಿ ಬೆಂಗಳೂರಿಗೆ ಹೋಗೋಣ್ವಾ?
ಹೆಂಡತಿ: ಅಲ್ಲಿಯಾದರೂ ಕರೆಂಟ್ ಇರುತ್ತಾ; ನಿಮ್ಮಣ್ಣನ ಕೇಳಿ ನೋಡಿ. ಇಲ್ದಿದ್ರೆ ಪಕ್ಕದಮನೆ ಕಮಲಮ್ಮನ ಜೊತೆ ಹರಟೆ ಹೊಡೆದು ಟೈಂಪಾಸ್ ಮಾಡೋದು ಮೇಲು.
ನೆಮ್ಮದಿ
ಹೆಂಡತಿ: ಮಕ್ಕಳು ನಿಮ್ಮ ಮೊಬೈಲ್ ಬಳಸಿ ಆಟ ಆಡ್ತಾ ಇದ್ರೆ ಸುಮ್ನೇ ಇದ್ದೀರಲ್ಲ, ಚಾರ್ಜ್ ಖಾಲಿಯಾಗಿ ನನಗೆ ಬೈದ್ರೆ ನಾ ಸುಮ್ನೇ ಇರೋಲ್ಲ ನೋಡಿ ಮತ್ತೆ…
ಗಂಡ: ಇನ್ನೊಂದು ಐದು ಪರ್ಸೆಂಟ್ ಚಾರ್ಜ್ ಇದೆ ಕಣೆ ಪೂರ್ತಿ ಡೆಡ್ ಆದ್ರೆ ಇವತ್ತೊಂದು ದಿನಾನಾರೂ ಆಫೀಸ್ನಲ್ಲಿ ನಿನ್ನ ಕರೆಯ ಕಾಟ ಇಲ್ಲದೆ ಹಾಯಾಗಿರಬಹುದು!
ಬದಲಾವಣೆ
ಟೀಚರ್: ಇತ್ತೀಚಿಗೆ ರಾಜ್ಯದಲ್ಲಿ ಆಗಿರುವ ಪ್ರಮುಖ ಬದಲಾವಣೆಗಳಾವುವು?
ರವಿ: ಪುಣ್ಯಕ್ಕೆ ಈರುಳ್ಳಿ ಬೆಲೆ ಕಡಮೆಯಾಗಿದೆ;
ಆದರೆ ಕತ್ತಲಭಾಗ್ಯ ಬಗೆಹರಿಯದ ಸಮಸ್ಯೆಯಾಗಿದೆ ಟೀಚರ್!
ಅಭ್ಯಾಸಬಲ
ರಾಜಕಾರಣಿ: ರಾಜ್ಯದಲ್ಲಿ ಮಳೆಯಾಗಿದೆ, ವಿದ್ಯುತ್ ಉತ್ಪಾದನೆಗೆ ಸಾಕಷ್ಟು ನೀರು ಇದ್ರೂ ಮತ್ತೆ ಏಕೆ ಕರೆಂಟ್ ತೆಗೆದಿದ್ದೀರಾ?
ಬೆಸ್ಕಾಂ ಇನ್ ಚಾರ್ಜ್: ಇಲ್ಲ ಸಾರ್, ಅದೇನಾಯ್ತೂಂದ್ರೆ…. ಸಾರಿ ಸರ್, ಅಭ್ಯಾಸ ಬಲ ನೋಡಿ ಕರೆಂಟ್ ತೆಗೆದ್ವಿ; ಈಗ ಕನೆಕ್ಟ್ ಮಾಡ್ತೀವಿ.
ಇಲ್ಲದ ಗ್ಯಾರಂಟಿ
ಭಾಗ್ಯ: ರಜೆಯಲ್ಲಿ ಹೋಂವರ್ಕ್ ಕೊಡಲ್ವಾ ಟೀಚರ್?!
ಟೀಚರ್: ಕೊಟ್ಟಿರೋದೇ ಹದಿನೆಂಟು ದಿನ ರಜೆ; ಅದರಲ್ಲಿ ಕರೆಂಟ್ ಇಲ್ಲದೆ ನೀವು ಕಳೆಯುವ ಸಮಯವೆಷ್ಟೋ, ಈ ಸಾರಿ ನಾವು ಹೋಂವರ್ಕ್ ಕೊಟ್ರೂ ನೀವು ಮಾಡ್ತೀರಿ ಅನ್ನೋ ಗ್ಯಾರೆಂಟಿ ಇಲ್ಲ!
ಕಾರಣ
ಫಂಕ್ಷನ್ ಒಂದರಲ್ಲಿ –
ಅರವಿಂದ: ನೀವೇನ್ರೀ ಇಷ್ಟು ಖುಷಿಯಾಗಿದ್ದೀರಾ?
ರವಿ: ಕರೆಂಟ್ ಇಲ್ದೆ ಧಾರಾವಾಹಿ ನೋಡೋಕಾಗ್ದೆ ನನ್ ಹೆಂಡತಿ ಈ ಫಂಕ್ಷನ್ಗಾದ್ರೂ ತಾನೂ ಬಂದಿದ್ರೆ ಚೆನ್ನಾಗಿರುತಿತ್ತು ಅಂತ ಕರೆ ಮಾಡಿ ಪೇಚಾಡಿದಳು… ಇದಕ್ಕಿಂತ ಖುಷಿಗೆ ಕಾರಣಬೇಕೇ!
ಬಂಡವಾಳ
ರಾಜು: ಏನಯ್ಯಾ, ಆಫೀಸ್ನಲ್ಲಿ ಈ ನಡುವೆ ವರ್ಕ್ಲೋಡ್ ಕಡಮೆ ಅನಿಸುತ್ತೆ…
ರವಿ: ಕರೆಂಟ್ ಮತ್ತೆಮತ್ತೆ ತೆಗೀತಾ ಇದ್ದಾರಲ್ಲ, ಈ ಸಮಸ್ಯೆನೇ ನಮಗೆ ಬಂಡವಾಳ. ಯಾರೇ ಬಂದ್ರೂ ಕರೆಂಟ್ ಸಮಸ್ಯೆ ಅಂತ ಹೇಳಿ ಕಳಿಸ್ತೀವಿ ಅಷ್ಟೇ!
ಬಿ. ರಾಮಪ್ರಸಾದ್ ಭಟ್
Comments are closed.