ನಾನಿರಲಿಲ್ಲವಲ್ಲ
ರಮಾಕಾಂತನ ಕುದುರೆ ಕಳೆದುಹೋಯ್ತು. ಎಷ್ಟು ಹುಡುಕಿದರೂ ಸಿಗಲಿಲ್ಲ. ಅವನು ಮಾತ್ರ ಸಂತೋಷದಿಂದ ದೇವರಿಗೆ ಕೃತಜ್ಞತೆ ಬೇರೆ ಹೇಳಿದ. ಗೆಳೆಯ ಕಾರಣ ಕೇಳಿದ.
ರಮಾಕಾಂತ (ಸಂಭ್ರಮದಿಂದ): ಪುಣ್ಯಕ್ಕೆ ಆ ಕುದುರೆ ನಾನು ಅದರ ಮೇಲೆ ಇಲ್ಲದ ವೇಳೆ ಕಳೆದುಹೋಗಿದೆ. ಇಲ್ಲದಿದ್ದರೆ…….
ಗೆಟ್–ಇನ್ ಗೆಟ್– ಔಟ್
ತಿಂಮ ಎಫ್.ಡಿ.ಎ. ಪರೀಕ್ಷೆಗೆ ಅರ್ಜಿ ಸಲ್ಲಿಸಲೋ ಬೇಡವೋ ಅಂತ ಗೊಂದಲದಲ್ಲಿ ಇದ್ದ.
ತಿಂಮ: ಲೇ ಏನ್ ಮಾಡ್ಲೇ?
ತಿಂಮಿ: ಅದಕ್ಯಾಕ್ರಿ ತಲೆ ಕೆಡಿಸಿಕೊಳ್ತೀರಿ; ಹಾಕೋ ಮನಸ್ಸಿದ್ರೆ ಹಾಕಿಬಿಡಿ. ಅದೃಷ್ಟ ಇದ್ರೆ ಗೆಟ್-ಇನ್ ಆಗ್ತೀರಿ. ಅದೃಷ್ಟ ಇಲ್ದಿದ್ರೆ ಗೆಟ್-ಔಟ್ ಅಗ್ತೀರಿ!
ಅಭ್ಯಾಸಬಲ
ತಿಂಮ: ನಾನು ಆಗಾಗ ರೈಲಿನಿಂದ ಬರುವಾಗ ಯಾರದೋ ಬ್ಯಾಗನ್ನು ಬದಲಿಸಿ ತಂದುಬಿಡುತ್ತೇನೆ.
ಗುಂಡ: ಜ್ಞಾಪಕಶಕ್ತಿ ತುಂಬಾ ಕಡಮೆಯೇ?
ತಿಂಮ: ಹಾಗೇನೂ ಇಲ್ಲ; ಅದು ನನ್ನ ಜೀವನದ ಬಹು ದೊಡ್ಡ ಅಭ್ಯಾಸಬಲ!
ಲಕ್ಷಾಧೀಶ
ಮಗ: ಅಪ್ಪಾ…. ನಾಳೆಯಿಂದ ನಾವು ಲಕ್ಷಾಧೀಶರಾಗಬಹುದು.
ತಂದೆ: ಅದ್ಹೇಗೆ?
ಮಗ: ನಾಳೆ ಸ್ಕೂಲಿನಲ್ಲಿ ನಮ್ಮ ಟೀಚರ್ ರೂಪಾಯಿಗಳನ್ನು ಪೈಸೆಗಳನ್ನಾಗಿ ಮಾಡೋದು ಹೇಗೇಂತ ಹೇಳಿಕೊಡ್ತಾರಂತೆ!
ರವಿವಾರ
ತಂದೆ: ಏನೋ, ಮಾರ್ಕೆಟ್ನಲ್ಲಿ ನಿಮ್ಮ ಮೇಷ್ಟ್ರು ಕಂಡರೂ ಅವರಿಗೆ ಯಾಕೆ ನಮಸ್ಕಾರ ಮಾಡಲಿಲ್ಲ?
ಮಗ: ಅಪ್ಪಾ, ನಿನಗೆ ಒಂದು ಚೂರೂ ನೆನಪಿರೊಲ್ಲ, ಇವತ್ತು ರವಿವಾರ.
ಆಟ ಆಡ್ತಿದ್ದಾನೆ
ರಾಮು: ಪೆಟ್ರೋಲ್ ಇಲ್ಲದೆ ಓಡಿಸೋ ಕಾರು ಕೊಂಡಿದ್ದೀರಂತೆ. ತೋರಿಸಿ ನೋಡೋಣ ಹೇಗಿದೇಂತ.
ಗೋಪಿ: ನನ್ನ ಮಗ ಆಟ ಆಡ್ತಿದ್ದಾನೆ; ಅಲ್ಲೇ ಹೊರಗೆಹೋಗಿ ನೋಡಿ!
ಸಿಸಿಟಿವಿ
ಅಜ್ಜ: ಒಂದು ಕಾಲದಲ್ಲಿ ನಾನು ಜೇಬಲ್ಲಿ ಎರಡು ರೂಪಾಯಿಯ ನೋಟು ಇಟ್ಟುಕೊಂಡು ಹೋದ್ರೆ ಮನೆಗೆ ಬೇಕಾದ ಎಲ್ಲಾ ಕಿರಾಣಿ ಸಾಮಾನು, ಬ್ರೆಡ್, ಬಿಸ್ಕತ್ತು, ತರಕಾರಿ, ಹಾಲು, ಬೆಣ್ಣೆ, ದಿನಪತ್ರಿಕೆ ಎಲ್ಲಾ ತರುತ್ತಿದ್ದೆ.
ಮೊಮ್ಮಗ: ನೀವು ಪುಣ್ಯವಂತರು, ಈಗ ಹಾಗೆಲ್ಲಾ ಮಾಡೋಕಾಗೊಲ್ಲ ತಾತ; ಎಲ್ಲಾ ಕಡೆ ಸಿಸಿಟಿವಿ ಕಣ್ಗಾವಲು ಇರುತ್ತೆ!
ಪ್ರತಿಸ್ಪರ್ಧಿ
ಹೆಂಡತಿ: ಏನ್ರೀ, ಇತ್ತೀಚೆಗೆ ಪ್ರತಿಯೊಂದು ವಿಷಯದಲ್ಲೂ ನನಗೆ ಪ್ರತಿಸ್ಪರ್ಧಿ ಆಗ್ತಾ ಇದ್ದೀರಿ?
ಗಂಡ: ಮೊದಲು ಹೆಂಡತಿಯನ್ನು ಗೆದ್ದರೆ ಆಮೇಲೆ ಜಗತ್ತನ್ನೇ ಗೆಲ್ಲಬಹುದೂಂತ ಯಾರೋ ಮಹಾನುಭಾವ ಹೇಳಿದ್ದನ್ನು ಇತ್ತೀಚೆಗೆ ಓದಿದೆ ಕಣೆ!