ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಆಗಸ್ಟ್ 2015 > ಗ್ರಂಥಾಂತರಂಗ

ಗ್ರಂಥಾಂತರಂಗ

ಗಂಭೀರ ವಾಚಕರಿಗೆ ಉಪಯುಕ್ತ ಗ್ರಂಥ

Untitled-1(1)

ಪ್ರಕಾಶಕರು: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ – ೫೮೦ ೦೨೦ ಪುಟಗಳು: ೫೨೮ ಬೆಲೆ: ರೂ. ೪೫೦

ಕನ್ನಡದ ಹಿರಿಯ ಲೇಖಕರಲ್ಲೊಬ್ಬರಾದ ಜಿ.ಎಸ್. ಆಮೂರ ಅವರು ಅರ್ಧ ಶತಮಾನಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿ ಕನ್ನಡ ಸಾಹಿತ್ಯಕ್ಕೆ, ವಿಶೇಷವಾಗಿ ವಿಮರ್ಶೆಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸಾಂಕೇತಿಕವಾಗಿ ಗುರುತಿಸುವ ಹಾಗೂ ಗೌರವಿಸುವ ಪ್ರಯತ್ನದ ಫಲವಾಗಿ ಹೊರಬಂದ ಬೃಹತ್ ಗ್ರಂಥ ‘ಸ್ವೀಕೃತಿ’. ಅವರಿಗೆ ತೊಂಬತ್ತು ವರ್ಷ ತುಂಬಿದ ಸಂದರ್ಭದಲ್ಲಿ ಪ್ರಕಟವಾದ ಈ ಗ್ರಂಥದಲ್ಲಿ ನಾಲ್ಕು ಭಾಗಗಳಿದ್ದು, ಆಮೂರರ ಕೃತಿಗಳಿಗೆ ಅವರ ಹಿರಿ-ಕಿರಿಯ ಸಮಕಾಲೀನರು ಬರೆದ ಮುನ್ನುಡಿ ಬೆನ್ನುಡಿಗಳು, ಬೇರೆ ಬೇರೆ ಸಂದರ್ಭಗಳಲ್ಲಿ ಅವರ ಸಾಧನೆಯನ್ನು ಕುರಿತು ಬರೆದ ವಿಶೇಷ ಲೇಖನಗಳು, ಅವರ ಕೃತಿಗಳ ಬಗ್ಗೆ ಬಂದ ವಿಮರ್ಶಾತ್ಮಕ ಲೇಖನಗಳು ಇದರಲ್ಲಿವೆ. ಪ್ರಜ್ಞಾವಂತ ಕನ್ನಡ ಸಹೃದಯರು ಆಮೂರರ ಕೃತಿಗಳನ್ನು ಸ್ವೀಕರಿಸಿದ ಪರಿಯನ್ನು ಒಳಗೊಂಡಿರುವ ಈ ಗ್ರಂಥಕ್ಕೆ ‘ಸ್ವೀಕೃತಿ’ ಎಂಬ ಅರ್ಥಪೂರ್ಣ ಶೀರ್ಷಿಕೆಯನ್ನು ಆಮೂರರೇ ಸೂಚಿಸಿದ್ದು. ಅಭಿನಂದನ ಗ್ರಂಥಗಳಿಗಿಂತ ವಿಭಿನ್ನರೀತಿಯಲ್ಲಿ ರೂಪುಗೊಂಡ ಈ ಗ್ರಂಥ ಕನ್ನಡ ಸಾಹಿತ್ಯ ಸಂಸ್ಕೃತಿಗಳಲ್ಲಿ ಆಸ್ಥೆಯುಳ್ಳ ಎಲ್ಲ ಗಂಭೀರ ವಾಚಕರಿಗೆ ಉಪಯುಕ್ತವಾಗಲಿದೆ ಎಂಬುದು ಪ್ರಕಾಶಕರ ಅಭಿಮತ.

ಗೋದ್ರಾ ಗಲಭೆಯ ಸಮಗ್ರ ಮಾಹಿತಿಕೋಶ

book೨೦೦೨ರಲ್ಲಿ ಗುಜರಾತಿನ ಗೋದ್ರಾ ಗಲಭೆ ನಡೆಯಿತು, ಮತ್ತು ತದನಂತರ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಅದರ ವರದಿಗಳೂ ಪ್ರಕಟವಾದವು. ಗಲಭೆಯ ಸ್ವರೂಪ, ಅದರಲ್ಲಿ ರಾಜ್ಯ ಸರ್ಕಾರದ ಮತ್ತು ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಪಾತ್ರ ಮುಂತಾಗಿ ದೊಡ್ಡ ಪ್ರಮಾಣದಲ್ಲಿ ಚರ್ಚೆಗಳೂ ವಿಶ್ಲೇಷಣೆಗಳೂ ನಡೆದವು. ಗಲಭೆಯ ಕುರಿತು ಹಲವು ರೀತಿಯಲ್ಲಿ ವೈರುಧ್ಯದ ಅಭಿಪ್ರಾಯಗಳೂ ಕೂಡ ಜಾಗತಿಕವಾಗಿ ವ್ಯಕ್ತವಾದವು.

ಇದೀಗ ಎಂ.ಡಿ. ದೇಶಪಾಂಡೆ ಎಂಬವರು ತಮ್ಮ – ‘GUJARAT RIOTS: THE TRUE STORY’ ಕೃತಿಯಲ್ಲಿ ಗೋದ್ರಾದಲ್ಲಿ ನಿಜವಾಗಿಯೂ ಏನು ನಡೆಯಿತು ಎಂಬುದನ್ನು ವಿವರವಾಗಿ ಬಯಲುಗೊಳಿಸಿದ್ದಾರೆ. ಹೆಚ್ಚಿನ ಶ್ರದ್ಧೆಯಿಂದ ನಡೆಸಿದ ಮಾಧ್ಯಮ ಸಂಶೋಧನೆಯಿಂದಾಗಿ ಈ ಪುಸ್ತಕದಲ್ಲಿ ಸಮಕಾಲೀನ ಪತ್ರಿಕಾವರದಿಗಳನ್ನು, ಅಧಿಕೃತ ಅಂಕಿ-ಅಂಶಗಳನ್ನು ಮತ್ತು ೨೦೦೨ರ ಈ ಗಲಭೆಯ ಕುರಿತಾಗಿ ಇರುವ ಸತ್ಯವನ್ನು ಬಯಲುಗೊಳಿಸಬಲ್ಲ ನಂಬಲರ್ಹವಾದ ವಿಶ್ಲೇಷಣೆಯನ್ನು ಒದಗಿಸಲು ಸಾಧ್ಯವಾಗಿದೆ;   ಹಾಗೆಯೇ,  ಗಲಭೆಯ ಕುರಿತಾದ ತಪ್ಪು ಕಲ್ಪನೆಗಳನ್ನು

ನಿವಾರಿಸಲು ಸಮರ್ಥವಾಗಿದೆ. ಪುಸ್ತಕದಲ್ಲಿ ಇನ್ನೊಂದು ಗಮನಾರ್ಹ ಅಂಶವೆಂದರೆ, ಗಲಭೆಯ ಕುರಿತು ಸುಪ್ರೀಂಕೋರ್ಟ್ ನೇಮಿಸಿದ್ದ ತನಿಖಾತಂಡದ ವರದಿಗಾಗಿ ಒಂದು ಇಡೀ ಅಧ್ಯಾಯವನ್ನು ಮೀಸಲಾಗಿಟ್ಟಿರುವುದು. ದೇಶಪಾಂಡೆಯವರ ಈ ಹೊತ್ತಗೆ ನಂಬಲರ್ಹವಾದ ದಾಖಲೆಗಳ ಸಹಿತವಾಗಿ ವಿಷಯವನ್ನು ಮಂಡಿಸುವುದರಿಂದಾಗಿ, ೨೦೦೨ರ ಗುಜರಾತ್ ಗಲಭೆಯ ಕುರಿತಾದ ಒಂದು ಸಮಗ್ರ ಮಾಹಿತಿಕೋಶದಂತೆ ತಿಳಿದುಕೊಳ್ಳಲೇ ಬೇಕಾದ ಹಲವು ಸಂಗತಿಗಳನ್ನು ಅನಾವರಣಗೊಳಿಸುತ್ತದೆ.

ಪುಸ್ತಕ: GUJARAT RIOTS: THE TRUE STORY

ಲೇಖಕರು: ಎಂ.ಡಿ. ದೇಶಪಾಂಡೆ

ಪ್ರಕಾಶಕರು: ಪಾರ್ಟ್‌ರಿಡ್ಜ್ ಇಂಡಿಯಾ ಪಬ್ಲಿಷರ್‍ಸ್

ಪುಟಗಳು: ೩೯೭

ಬೆಲೆ: ರೂ. ೫೯೯

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat