ಅಭಿನವಗುಪ್ತರು ರಚಿಸಿದರೆಂದು ಪ್ರತೀತಿಯಿರುವ ನಲವತ್ತೈದು ಕೃತಿಗಳ ಪೈಕಿ ೩೧ರಷ್ಟು ಅಧಿಕ ಕೃತಿಗಳು ಶೈವದರ್ಶನವನ್ನು ಕುರಿತೇ ಇವೆ. ಅಭಿನವಪರಮೇಶ್ವರಪ್ರಸಾದಾತ್ ಸ್ವಹೃದಯಸನ್ನಿಹಿತಾತ್ಮದೇವತಾನಾಮ್ || “ಅಭಿನವಗುಪ್ತರೆಂಬ ಪರಶಿವನ ಅನುಗ್ರಹದಿಂದ, ನಮ್ಮ ಒಡಲೊಳಗೇ ಇರುವ ಆತ್ಮವೇ ಶಿವನೆಂದು ಮನವರಿಕೆಯಾಯಿತು” – ಎಂದಿದ್ದಾನೆ ಅಭಿನವಗುಪ್ತರ ಶಿಷ್ಯ ಮಧುರಾಜ. ಕಾಶ್ಮೀರ-ಶೈವ ದರ್ಶನದ ಆನುಪೂರ್ವಿಯನ್ನು ಗುರುತಿಸುವುದಾದರೆ: ಕಲಿಯುಗದಲ್ಲಿ ಆಗಮತಜ್ಞರ ಕೊರತೆಯಿಂದಾಗಿ ಶೈವದರ್ಶನವು ಲುಪ್ತವಾಗುವ ಸ್ಥಿತಿಯಲ್ಲಿದ್ದುದನ್ನು ಗಮನಿಸಿ ಅಧಿಕೃತ ಶೈವದರ್ಶನವನ್ನು ಪ್ರಸಾರ ಮಾಡಲು ಪರಶಿವನು ದುರ್ವಾಸ ಋಷಿಗಳನ್ನು ನಿಯೋಜಿಸಿದನಂತೆ. ಅವರು ಯೋಗಬಲದಿಂದ ಮೂವರು ಮಾನಸಪುತ್ರರನ್ನು ಪಡೆದು ಅವರಲ್ಲಿ ತ್ರ್ಯಂಬಕರಿಗೆ […]
ಮಹಾಮಾಹೇಶ್ವರ (ಅಭಿನವಗುಪ್ತ ಸಹಸ್ರಾಬ್ದ ಲೇಖನ-3)
Month : July-2017 Episode : ಸಹಸ್ರಾಬ್ದ ಲೇಖನ -3 Author : ಡಾ|| ಎಸ್.ಆರ್. ರಾಮಸ್ವಾಮಿ