
೧೯೩೦ರ ಬಳಿಕ ಸ್ವಾತಂತ್ರ್ಯ ಹೋರಾಟದಲ್ಲಿ ಸ್ತ್ರೀಯರ ಹೋರಾಟ ಗ್ರಾಮೀಣ ಪ್ರದೇಶವನ್ನೂ ಸೇರಿದಂತೆ ವ್ಯಾಪಕ ರೂಪ ಪಡೆಯುತ್ತದೆ. ‘ಕ್ರಾಂತಿಕಾರಿ ಭಯೋತ್ಪಾದನೆ’ ಎಂಬ ಹೆಸರಿನಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆಯಲ್ಲಿ ಮೇಡಮ್ ಭಿಕಾಜೀ ಕಾಮಾ, ಸರಳಾದೇವಿ ಘೋಷಾಲ್ನಂತಹ ಮಹಿಳೆಯರು ನೇಪಥ್ಯದಲ್ಲಿದ್ದರೇ ವಿನಾ ಎಂದೂ ನೇರ ಕಾರ್ಯಾಚರಣೆಯಲ್ಲಿ ಭಾಗಿಗಳಾಗಿರಲಿಲ್ಲ. ಆದರೆ ಮೂವತ್ತರ ದಶಕ, ಶಾಂತಿ ಘೋಷ್, ಸುನೀತಿ ಚೌಧರಿ, ಬೀನಾ ದಾಸ್, ಆಕೆಯ ಅಕ್ಕ ಕಲ್ಯಾಣಿ ದಾಸ್, ಪ್ರೀತಿಲತಾ ವಡ್ಡೆದಾರ್, ಕಲ್ಪನಾ ದತ್ತ ಮೊದಲಾದವರು ಈ ಸೀಮಿತ ಪರಿಧಿಯಿಂದ ಹೊರಬಂದು ಪುರುಷ ಸಂಗಾತಿ ಕ್ರಾಂತಿಕಾರಿಗಳೊಂದಿಗೆ […]