
ಅನಂತಸಿಂಗ್ ಮತ್ತು ಸಂಗಡಿಗರು ಸೂರ್ಯಸೇನ್ ಗುಂಪಿನಂತೆ ಅನಂತಸಿಂಗ್ ಗುಂಪೂ ಚಿಂತಾಕ್ರಾಂತವಾಗಿತ್ತು. ಏಪ್ರಿಲ್ 18-19ರ ಮುಂಜಾನೆ ಸಮುದ್ರತೀರವನ್ನು ಸೇರಿದ ಅವರು ತಮ್ಮ ಕಾರನ್ನು ರಸ್ತೆಯ ಮೇಲೆ ಬಿಟ್ಟು ಚಿಕ್ಕ ದೋಣಿಯೊಂದರಲ್ಲಿ ಯಾರಿಗೂ ಕಾಣದಂತೆ ಮಲಗಿ ತೀರವನ್ನು ಸೇರಿದ್ದರು. ಮುಂಜಾನೆ ಗಣೇಶ್ ಘೋಷ್ ಸೀತಾಳಸಿಡುಬಿಗೆ ಬಲಿಯಾಗಿರುವುದನ್ನು ಗಮನಿಸುತ್ತಾರೆ. ಅವರ ಅಂದಾಜಿನಂತೆ ಬ್ರಿಟಿಷ್ ಸೇನೆಯ ಪಡೆಗಳು ಏಪ್ರಿಲ್ 20ರವರೆಗೆ ನಗರವನ್ನು ಪ್ರವೇಶಿಸುವ ಸಾಧ್ಯತೆ ಇರಲಿಲ್ಲ. ಹಾಗಾಗಿ ಹಿಂದಿನ ರಾತ್ರಿ ಆನಂದಗುಪ್ತನನ್ನು ಆತನ ಮನೆಯಲ್ಲಿ ಬಿಟ್ಟು ಬಂದಿದ್ದರಿಂದ ಸಂಜೆಯಾಗುತ್ತಿದ್ದಂತೆ ಆತನ ಮನೆಗೆ ಹೋದರೆ […]