ರಾಜಕೀಯದಲ್ಲಿ ಶಾಶ್ವತ ಮಿತ್ರರೂ ಇಲ್ಲ, ಶಾಶ್ವತ ಶತ್ರುಗಳೂ ಇಲ್ಲ ಎನ್ನುವ ಮಾತನ್ನು ಒಪ್ಪಿಕೊಂಡು ಮುಂದುವರಿಯೋಣ. ಇನ್ನು ಮೋದಿಯವರ ಬಗೆಗೆ ಹೇಳುವುದಾದರೆ ಅವರು ಅಂದಿನಿಂದ ಇಂದಿನವರೆಗೂ ಒಂದೇ ರೀತಿ ಇದ್ದಾರೆ. ಮಿತಿಯಿಲ್ಲದ ಒಬ್ಬ ರಾಷ್ಟ್ರಭಕ್ತನಾಗಿ, ರಾಷ್ಟ್ರಸೇವಕನಾಗಿ ರಾಷ್ಟ್ರಕ್ಕೆ ತನ್ನ ಸೇವೆಯನ್ನು ನಿರಂತರವಾಗಿ ಸಲ್ಲಿಸುತ್ತ ಬಂದಿದ್ದಾರೆ. ಭಾರತೀಯ ಜನತಾಪಕ್ಷಕ್ಕೆ ಸಂಬಂಧಪಟ್ಟು ಹೇಳುವುದಾದರೆ ಅವರೊಬ್ಬ ಅಪ್ರತಿಮ ಸಂಘಟಕನಾಗಿ ಕಾಣುತ್ತಾರೆ; ಕ್ರಮೇಣ, ಮುಖ್ಯವಾಗಿ ಅವರು ಪ್ರಧಾನಿಯಾದ ಅನಂತರ ಪಕ್ಷವನ್ನು ತಮಗೆ ವಿಶಿಷ್ಟವಾದ ರೀತಿಯಲ್ಲಿ ಬೆಳೆಸಿದ್ದಾರೆ; ಆ ರೀತಿಯಲ್ಲಿ ಹೊಸದಾಗಿ ರೂಪಗೊಂಡ ಬಿಜೆಪಿಗೆ ಅವರೇ […]











