ಭಾರತದ ವಿರುದ್ಧ ಚೀನಾದ ಚಕ್ರವ್ಯೂಹ
Month : November-2016 Episode : Author :
Month : November-2016 Episode : Author :
Month : October-2016 Episode : Author : ಅನಿಲ್ಕುಮಾರ್ ಮೊಳಹಳ್ಳಿ
“ಈ ದಿನ ನಾನು ಕೆಲವು ಮಂದಿಗೆ ಅಭಿನಂದನೆ ಮತ್ತು ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ. ಕೆಲವು ದಿನಗಳ ಹಿಂದೆ ಬಲೂಚಿಸ್ತಾನ, ಗಿಲ್ಗಿಟ್-ಬಾಲ್ಟಿಸ್ತಾನ ಹಾಗೂ ಪಾಕ್-ಆಕ್ರಮಿತ ಕಾಶ್ಮೀರದ ಜನರು ನನಗೆ ತಮ್ಮ ಕೃತಜ್ಞತೆಗಳನ್ನು, ಶುಭಹಾರೈಕೆಗಳನ್ನು ತಿಳಿಸಿದ್ದಾರೆ. ನನ್ನಿಂದ ಬಹುದೂರವಿರುವ, ನಾನೆಂದಿಗೂ ನೋಡದೆ, ಭೇಟಿಯಾಗದೆ ಇರುವ ಜನರು ಭಾರತದ ಪ್ರಧಾನಿಯನ್ನು, ಭಾರತದ 125 ಕೋಟಿ ಪ್ರಜೆಗಳನ್ನು ಪ್ರಶಂಸಿಸಿದ್ದಾರೆ. ಇದೊಂದು ಇಡೀ ದೇಶದ ಜನರಿಗೆ ಸಲ್ಲುವ ಗೌರವವಾಗಿದೆ.” ಇದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯದಿನಾಚರಣೆಯಂದು ಕೆಂಪುಕೋಟೆಯ ಮೇಲಿನಿಂದ ದೇಶವನ್ನು ಉದ್ದೇಶಿಸಿ ಹೇಳಿದ […]
Month : September-2016 Episode : Author : ಎಸ್.ಆರ್. ರಾಮಸ್ವಾಮಿ
ಅಮೆರಿಕದ ಜನತೆ ಪ್ರಚೋದಕ ಘೋಷಣೆಗಳಲ್ಲಿ ರಮಿಸುವ ಟ್ರಂಪ್ರನ್ನು ಬೆಂಬಲಿಸುತ್ತಾರೆಯೆ ಅಥವಾ ಮುತ್ಸದ್ದಿತನವನ್ನುಳಿಸಿಕೊಂಡಿರುವ ಹಿಲರಿ ಕ್ಲಿಂಟನ್ರ ಬಗೆಗೆ ಒಲುಮೆ ತೋರುತ್ತಾರೆಯೆ? ಈಚಿನ ಯುಗದಲ್ಲಿ ಜಗತ್ತಿನ ಸನ್ನಿವೇಶ ಎಷ್ಟು ಸಂಕೀರ್ಣವಾಗಿದೆಯೆಂದರೆ ಯಾವ ದೇಶವೂ ಅನ್ಯದೇಶ ವಿದ್ಯಮಾನಗಳ ಪ್ರಭಾವವನ್ನು ನಿವಾರಿಸಿಕೊಳ್ಳುವುದು ದುಷ್ಕರ. ಕೆಲವು ವಾರಗಳ ಹಿಂದೆ ಯೂರೋಪ್ ಒಕ್ಕೂಟದಿಂದ ಇಂಗ್ಲೆಂಡ್ ವಿಚ್ಛೇದಗೊಂಡಿತು. ಪ್ರಮುಖ ಯೂರೋಪ್ ದೇಶಗಳೊಡನೆ ಭಾರತದ ವಾಣಿಜ್ಯ ನಂಟಸ್ತಿಕೆ ಇದೆ. ಹೀಗೆ ಯೂರೋಪಿನ ಒಳಗಿನ ವಿದ್ಯಮಾನಗಳು ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಂಭವ ತಪ್ಪಿದ್ದಲ್ಲ. ಅದರಂತೆ ಬರುವ ನವೆಂಬರ್ […]
Month : September-2016 Episode : Author : ಎಚ್ ಮಂಜುನಾಥ ಭಟ್
ಶಾಸ್ತ್ರೀಯ ಸಂಗೀತದಲ್ಲಿ ಯಾರು ಯಾರ ಗುರು, ಹಾಗೇ ಯಾರು ಯಾರ ಶಿಷ್ಯ ಎಂಬುದಕ್ಕೆ ತುಂಬ ಮಹತ್ತ್ವವಿದೆ. ಪ್ರಸಿದ್ಧರಾದ ದೊಡ್ಡ ಗುರುಗಳಲ್ಲಿ ಕಲಿತ ಶಿಷ್ಯರಿಗೆ ಅದರಿಂದಲೇ ಒಂದು ಗೌರವ ಬರುತ್ತದೆ; ಇನ್ನೊಂದೆಡೆ ಶಿಷ್ಯರು ಸಮರ್ಥರು ಮತ್ತು ಪ್ರಸಿದ್ಧರಾದಾಗ ಗುರುಗಳ ಘನತೆ ಮತ್ತು ಗೌರವ ಕೂಡ ಇಮ್ಮಡಿಯಾಗುತ್ತದೆ. ಇದರಲ್ಲಿ ಎರಡನೇ ಕ್ರಮದಲ್ಲಿ ಎದ್ದು ಕಾಣುವ ಓರ್ವ ಗುರು ಆಂಧ್ರ ಪ್ರದೇಶದ ಕರ್ನೂಲಿನವರಾದ ಡಾ| ಶ್ರೀಪಾದ ಪಿನಾಕಪಾಣಿ ಅವರು. ನೇದುನೂರಿ ಕೃಷ್ಣಮೂರ್ತಿ, ನೂಕುಲ ಚಿನ್ನ ಸತ್ಯನಾರಾಯಣ, ವೋಲೇಟಿ ವೆಂಕಟೇಶ್ವರುಲು, ಶ್ರೀರಂಗಂ ಗೋಪಾಲರತ್ನಂ, […]
Month : September-2016 Episode : Author : ಪ್ರವೀಣ್ ಪಟವರ್ಧನ್
ಚೀನಾ ಬ್ರಹ್ಮಪುತ್ರಾ ನದೀನೀರನ್ನು ಅಣೆಕಟ್ಟುಗಳ ಮೂಲಕ ಹಿಡಿದಿಟ್ಟುಕೊಂಡರೆ ಈಶಾನ್ಯಭಾರತದಲ್ಲಿ ಕ್ಷಾಮ ತಲೆದೋರುವುದು ಅಥವಾ ಹಿಡಿದಿಟ್ಟ ನೀರನ್ನು ಯುದ್ಧೋಪಾದಿ ಹಠದಿಂದ ಹರಿಯಬಿಟ್ಟರೆ ಅಥವಾ ಭೂಕಂಪವೇನಾದರೂ ಸಂಭವಿಸಿದರೆ ಇಡಿಯ ಈಶಾನ್ಯಭಾರತ ಕೊಚ್ಚಿಕೊಂಡೇ ಹೋಗಬಹುದು…. ಎಚ್ಚರ! ಎಚ್ಚರ!! ಒಂದು ದೇಶದಿಂದ ಮತ್ತೊಂದು ದೇಶದೊಳಕ್ಕೆ ಅನಧಿಕೃತವಾಗಿ ಪ್ರವೇಶಿಸುವ ನುಸುಳುಕೋರರ ಸಮಸ್ಯೆ, ಒಂದು ದೇಶ ತನ್ನ ನೆರೆಯ ದೇಶಕ್ಕೆ ಮಾರಕವಾಗುವಂತಹ ಯೋಜನೆಗಳನ್ನು ಕಾರ್ಯಗತಮಾಡುವುದು, ಒಂದು ದೇಶ ಮತ್ತೊಂದರ ಪ್ರಜೆಗಳ ಹಿತಾಸಕ್ತಿಯ ವಿರುದ್ಧವಾಗಿ ನಡೆದುಕೊಳ್ಳುವುದು – ಹೀಗೆ ಹತ್ತುಹಲವು ಕಾರಣಗಳಿಂದ ಎರಡು ದೇಶಗಳ ನಡುವಿನ ಸಂಬಂಧ […]
Month : September-2016 Episode : Author : ಎಚ್ ಮಂಜುನಾಥ ಭಟ್
ಚೀನಾದ ಶಕ್ತಿ ಬಹಳ ಹೆಚ್ಚಿನದು. ನಮ್ಮ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಬೆಳೆಸಿ ನಮ್ಮನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಅದು ಈಗಾಗಲೆ ಸಾಕಷ್ಟು ಮುಂದುವರಿದಿದೆ. ಅದಕ್ಕೆ ಪ್ರತಿಯಾಗಿ ಭಾರತಕ್ಕೀಗ ಎಚ್ಚರದ ಸುದೀರ್ಘ ನಡೆಯೇ ಬೇಕು. ‘ಬಲವೇ ನ್ಯಾಯ’ (ಮೈಟ್ ಈಸ್ ರೈಟ್) ಎಂಬುದೊಂದು ನ್ಯಾಯ. ಅದನ್ನು `ಕಾಡಿನ ನ್ಯಾಯ’ (ಜಂಗಲ್ ಲಾ) ಎಂದೂ ಹೇಳುತ್ತಾರೆ. ಯಾರಿಗೆ ಬಲ ಅಥವಾ ಶಕ್ತಿ ಇದೆಯೋ ಅವನು ಮಾಡಿದ್ದೆಲ್ಲ ಸರಿ ಎಂಬಂತಹ ವಾತಾವರಣಕ್ಕೆ ಅಥವಾ ಬಲವುಳ್ಳವರು ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳುವುದಕ್ಕೆ ಹಾಗೆ […]
Month : August-2016 Episode : Author : ಡಾ. ಕೆ. ನಾರಾಯಣ ಶೆಣೈ
ಸರಸ್ವತಿ ನದಿಯನ್ನು ’ಅಂಬಿತಮೆ’ (ನದಿಗಳ ತಾಯಿ), ನದಿತಮೆ (ಅತ್ಯುತ್ತಮ ನದಿ) ದೇವಿತಮೆ (ಶ್ರೇಷ್ಟ ದೇವತೆ)’ ಎಂದು ವೇದಕಾಲೀನ ಋಷಿ-ಮುನಿಗಳು ಕರೆದರು. ಇದಕ್ಕೆ ಕಾರಣ ಇಲ್ಲದಿಲ್ಲ. ಹಿತಕರವಾದ ಹವಾಮಾನ, ವರ್ಷ ಪೂರ್ತಿ ತುಂಬಿ ಹರಿಯುವ ನೀರು, ಫಲವತ್ತಾದ ಕೃಷಿಯೋಗ್ಯ ಮಣ್ಣು, ಸಮೃದ್ಧವಾದ ಆಹಾರ, ಆಕಳುಗಳ ಹಿಂಡು. ಹೊಲೊಸಿನ್ ಯುಗದ ಮೊದಲ ಪಾದದಲ್ಲಿ (ಕ್ರಿ.ಪೂ. ೮,೦೦೦-೬,೦೦೦) ವೇದ ಸಂಸ್ಕೃತಿ ಉತ್ತುಂಗ ಶಿಖರವನ್ನು ತಲಪಿದ ಸಮಯ. ಸರಸ್ವತಿ ನದಿಯ ದಡ ಜಗತ್ತಿನ ಮೊದಲ ನಾಗರಿಕತೆಯ ತೊಟ್ಟಿಲಾಗಿತ್ತು. ಸರಸ್ವತಿ ನದಿಯು ವೇದಕಾಲೀನ ಜನರ […]
Month : August-2016 Episode : Author : ಎಸ್.ಆರ್. ರಾಮಸ್ವಾಮಿ
–೧- ಸಾಮ್ರಾಜ್ಯಾಧಿಕಾರಕ್ಕೆ ಪ್ರತಿರೋಧ ಇಪ್ಪತ್ತನೇ ಶತಮಾನದ ಮೊದಲೆರಡು ದಶಕಗಳ ರಾಜಕೀಯ ನೆಲೆಯ ಸ್ವದೇಶೀ ಅಭಿಯಾನವು ಭಾರತದ ಈಚಿನ ಇತಿಹಾಸಕ್ಕೆ ನಿರ್ಣಾಯಕ ತಿರುವನ್ನು ಕೊಟ್ಟಿತೆಂಬುದು ನಿರ್ವಿವಾದ. ಆದರೆ ಅದೇ ಸಮಯದಲ್ಲಿ ಶುದ್ಧವಿಜ್ಞಾನ, ವಿವಿಧ ಕಲೆಗಳು ಮೊದಲಾದ ಕ್ಷೇತ್ರಗಳಲ್ಲಿಯೂ ಭಾರತ ದಾಪುಗಾಲಿಡಲು ಸ್ವದೇಶೀ ಅಭಿಯಾನವು ಪ್ರೇರಕವಾಯಿತೆಂಬುದನ್ನೂ ಗ್ರಹಿಸಬೇಕಾದುದರ ಆವಶ್ಯಕತೆ ಇದೆ. ಇದನ್ನು ಸ್ವದೇಶೀ ಆಂದೋಲನದ ವೈಚಾರಿಕ ಮುಖವೆಂದೇ ಪರಿಗಣಿಸಬಹುದು. ಬ್ರಿಟಿಷ್ ಜನಾಂಗದ ಸ್ವಯಮಾರೋಪಿತ ಬೌದ್ಧಿಕ ಮೇಲ್ಮೆಗೆ ಪ್ರಬಲವಾದ ಪ್ರಹಾರ ನೀಡಿದವು ಶುದ್ಧವಿಜ್ಞಾನಾದಿ ಕ್ಷೇತ್ರಗಳಲ್ಲಿನ ಭಾರತೀಯ ಸಾಧನೆಗಳು. ಹತ್ತೊಂಬತ್ತನೇ ಶತಮಾನದಲ್ಲಿ ಅತ್ಯಧಿಕ […]
Month : August-2016 Episode : Author : ಬೇಳೂರು ಸುದರ್ಶನ
ಮೂರು ಪದರಗಳಲ್ಲಿ ಅಡಗಿರುವ ಭವ್ಯ ಇತಿಹಾಸ. ಹರಪ್ಪಾ, ಮೊಹೆಂಜೋದಾರೋಗಿಂತ ಪುರಾತನ, ವಿಶಾಲ, ವ್ಯಾಪಕ. ಇದುವರೆಗಿನ ಇತಿಹಾಸದ ಲೆಕ್ಕಾಚಾರ ಬುಡಮೇಲು ಮಾಡುವಂಥ ದಾಖಲೆಗಳು. ರಾಖಿಗಢಿಗೆ ಸುಸ್ವಾಗತ! ಮೊಹೆಂಜೋದಾರೋ ಸಿನೆಮಾ ಇನ್ನೇನು ಬಿಡುಗಡೆಯಾಗಲಿದೆ. ಹೃತಿಕ್ ರೋಶನ್, ಪೂಜಾ ಹೆಗ್ಡೆಯವರು ಮುಖ್ಯಭೂಮಿಕೆಯಲ್ಲಿರುವ ಈ ಸಿನೆಮಾದಲ್ಲಿ ಇರುವುದು ಹರಪ್ಪಾ ನಾಗರಿಕತೆಯ ದೃಶ್ಯಗಳ, ಆ ಕಾಲದ ಕಲ್ಪಿತ ಬದುಕಿನ ನಡುವೆ ಹೆಣೆದ ಪ್ರೇಮಕಥೆ. ಮೊಹೆಂಜೋದಾರೋ ನಗರಕ್ಕಿಂತ ಪ್ರಾಚೀನವಾದ ನಗರವೇನಾದರೂ ಇದ್ದಿದ್ದರೆ? ಇದೆ: ರಾಖಿಗಢಿ. ಹರ್ಯಾಣ ರಾಜ್ಯದ ಹಿಸಾರ್ ಜಿಲ್ಲೆಯಲ್ಲಿರುವ ರಾಖಿಗಢಿಯ ಅವಶೇಷಗಳಲ್ಲಿ ಸಮಾಧಿಯಲ್ಲಿ ಇಬ್ಬರು […]
Month : July-2016 Episode : Author : ಎಸ್.ಆರ್. ರಾಮಸ್ವಾಮಿ
ಜನ್ಮ ಶತಾಬ್ದ ಸ್ಮರಣೆ ಈ ವರ್ಷ ಬೆಳಗೆರೆ ಕೃಷ್ಣಶಾಸ್ತ್ರಿಗಳ (೨೨.೫.೧೯೧೬- ೨೩.೩.೨೦೧೩) ಜನ್ಮಶತಾಬ್ದವನ್ನು ವಿವಿಧೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜೀವಮಾನದುದ್ದಕ್ಕೂ ಯಾವುದೇ ಪ್ರಚಾರವನ್ನಾಗಲಿ ಸಂಮಾನಗಳನ್ನಾಗಲಿ ಬಯಸದೆ ಅವಧೂತರಂತೆ ನಿರ್ಲಿಪ್ತರಾಗಿದ್ದ ಕೃಷ್ಣಶಾಸ್ತ್ರಿಗಳು ಈಗ ಉತ್ಸವಾಚರಣೆಗಳಿಗೆ ವಸ್ತುವಾಗಿರುವುದು ಸ್ವಾರಸ್ಯಕರ. ಇಂತಹ ಹಲವು ವಿಶೇಷತೆಗಳು ಗಮನ ಸೆಳೆಯುತ್ತವೆ. ಜೋಳಿಗೆಯ ಹೊರತು ಬೇರಾವ ಅವಲಂಬವೂ ಇಲ್ಲದ ಅವರು ಚಿತ್ರದುರ್ಗ ಜಿಲ್ಲೆಯ ಬೆಳಗೆರೆಯಂತಹ ಗ್ರಾಮೀಣ ಪ್ರದೇಶದಲ್ಲಿ ಶ್ರೀ ಶಾರದಾಮಂದಿರ ವಿದ್ಯಾಸಂಸ್ಥೆ, ಶ್ರೀ ವೇದಾವತಿ ಉಚಿತ ವಿದ್ಯಾರ್ಥಿನಿಲಯಗಳಂತಹ ಸಂಸ್ಥಾಸಮೂಹವನ್ನು ಸ್ಥಾಪಿಸಿ ಬೆಳೆಸಿದರು (ಈಗ ಈ ಸಂಸ್ಥೆಗಳು ಅರ್ಧಶತಾಬ್ದದ […]