
ಕರ್ನಾಟಕದ ಪ್ರಾಚೀನ ಶಿಲ್ಪಕಲೆಗೆ ಹೊಯ್ಸಳ ಅರಸರ ಕೊಡುಗೆ ಅದ್ವಿತೀಯವಾದುದು. ಹೊಯ್ಸಳ ದೊರೆ ಬಿಟ್ಟಿದೇವನು ಜೈನಮತ ತೊರೆದು ವೈಷ್ಣವಧರ್ಮವನ್ನು ಸ್ವೀಕರಿಸಿ ವಿಷ್ಣುವರ್ಧನನಾದುದು ಶಿಲ್ಪಕಲೆಯ ಪರ್ವಕಾಲಕ್ಕೆ ನಾಂದಿಯಾಯಿತು. ಬೇಲೂರು, ಹಳೇಬೀಡು – ಮುಂತಾದ ಕಡೆ ಹೊಯ್ಸಳಶೈಲಿಯ ದೇವಾಲಯಗಳ ನಿರ್ಮಾಣವನ್ನು ದೊರೆಗಳು ಕೈಗೊಂಡರು. ಇಂತಹ ದೇವಾಲಯಗಳ ಪೈಕಿ ಕೆಲವು ಪ್ರಸಿದ್ಧಿಗೆ ಬಂದರೆ ಹಲವಾರು ದೇವಾಲಯಗಳು ಇನ್ನೂ ಅಜ್ಞಾತವಾಗೇ ಉಳಿದಿವೆ. ಬೆಳಕಿಗೆ ಬಾರದ ಹಲವಾರು ದೇವಾಲಯಗಳ ನಡುವೆ ಬೆಳವಾಡಿಯ ವೀರನಾರಾಯಣ ದೇವಾಲಯ ತನ್ನ ಅಪೂರ್ವ ಕಲಾವೈಭವದಿಂದ ಗಮನ ಸೆಳೆಯುತ್ತದೆ. ಬೆಳವಾಡಿ ಗ್ರಾಮ ಚಿಕ್ಕಮಗಳೂರು […]