ಪ್ರಿಯ ಯಾತ್ರಿಕನೆ, ನೋಡಿದೆಯಾ ಆ ದಿವ್ಯ ಭವ್ಯ ಮೂರ್ತಿಯನ್ನು? ತೃಪ್ತಿಯಾಯ್ತೆ? ಆಗಲಿಲ್ಲವೆ? ಹೇಗೆ ತೃಪ್ತಿ ಆದೀತು! ನೀನು ಇನ್ನೂ ಆ ಮೂರ್ತಿಯನ್ನು ಸರಿಯಾಗಿ ನೋಡಿಯೇ ಇಲ್ಲವಲ್ಲ! ಆ ದಿವ್ಯಮೂರ್ತಿಯ ರೂಪ ಕ್ಷಣಕ್ಷಣವೂ ಬದಲಾಗುವುದನ್ನು ನಾನು ಕಂಡಿದ್ದೇನೆ; ಪ್ರತಿಕ್ಷಣವೂ ಆ ಭವ್ಯಮೂರುತಿಯಲ್ಲಿ ಹೊಸ ಚೈತನ್ಯ ಉಕ್ಕಿಹರಿಯುವುದನ್ನು ಕಂಡು ಪುಳಕಿತನಾಗಿದ್ದೇನೆ. ಇಂತಹ ಭವ್ಯ ತೇಜಸ್ಸಿನ ಮೂರ್ತಿಯನ್ನು ಕಂಡು ತೃಪ್ತಿಯಾಗಿದೆ ಎಂದು ಹೇಳಲಾದೀತೆ? ಅಷ್ಟಕ್ಕೂ ನೀನೊಬ್ಬ ಯಾತ್ರಾರ್ಥಿ. ಹೀಗೆ ಬಂದು ಹಾಗೆ ಹೋಗುವ ನೀನು ಇಲ್ಲಿ ಬಂದು ಎಷ್ಟು ಸಮಯವಾಯ್ತು ಹೇಳು? […]
ಚಂದ್ರಗಿರಿ ಮಾತನಾಡಿದಾಗ….
Month : February-2018 Episode : Author : ಸರೋಜಾ ಪ್ರಭಾಕರ್