ಪಂಚಮಹಾಭೂತಗಳು ಒಂದಾಗಿ, ಇದಕ್ಕೆ ರೂಪವನ್ನುಂಟುಮಾಡುವವು. ಪಂಚ ಮಹಾಭೂತಗಳನ್ನು ಆಶ್ರಯಿಸಿಕೊಂಡು ಇರುವುದು ಮತ್ತು ಪಂಚೀಕರಣದಿಂದಲೇನೇ ತೋರುವುದು. ಮತ್ತು ಪಂಚಮಹಾಭೂತಗಳೆಲ್ಲ ಬೇರೆ ಬೇರೆಯಾಗಲು, ಇದರ (ಶರೀರದ) ನಾಮರೂಪಗಳು ಇಲ್ಲದಾಗುವವು. ಅದಕ್ಕೆ (ಶರೀರಕ್ಕೆ) ಅಧಿಭೂತವೆನ್ನುವರು. ಬಳಿಕ ಪುರುಷ(ಜೀವ)ನೆಂದರೆ ಅಧಿದೈವತವೆಂದು ತಿಳಿಯಬೇಕು. ಅದು ಪ್ರಕೃತಿಯಿಂದ ದೊರಕಿಸಲ್ಪಟ್ಟ ಭೋಗಗಳನ್ನು ಭೋಗಿಸುವುದು. ಅದು ಬುದ್ಧಿಯ ಪ್ರಕಾಶಕವು, ಇಂದ್ರಿಯ ರೂಪ ದೇಶದ ಅಧಿಪತಿಯು. ಮತ್ತು ಶರೀರಪತನದ ಸಮಯಕ್ಕೆ ಸಂಕಲ್ಪರೂಪ ಪಕ್ಷಿಗೆ ಅದು ಆಶ್ರಯವಿತ್ತ ವೃಕ್ಷವು. ನಿಜಕ್ಕೂ ಇವನು ಪ್ರತಿಪರಮಾತ್ಮನಾಗಿರುವನು. ಆದರೆ ಅಹಂಕಾರವೆಂಬ ನಿದ್ರೆಯ ವಶನಾಗಿ, ಸ್ವಪ್ನವ್ಯವಹಾರದಿಂದ ಸುಖಿಯೂ […]
‘ಅಧಿಯಜ್ಞ’ ಎಂದರೆ ಏನು?
Month : March-2020 Episode : Author : ಸಂತ ಜ್ಞಾನೇಶ್ವರ ಮಹಾರಾಜರು