’ದಾನಶಕ್ತಿವರ್ಣನೆ’ ಎಂಬ ಮೊದಲನೆಯ ಕಥೆ
ಅದನ್ನು ಕೇಳಿದ ಭೋಜರಾಜನು “ಎಲೈ ಗೊಂಬೆಯೆ! ನೀನು ಹೇಳಿದ ಎಲ್ಲ ಗುಣಗಳೂ ನನ್ನಲ್ಲಿ ಇವೆ. ಯಾವುದು ತಾನೇ ಕಡಮೆ ಇದೆ? ನಾನೂ ಕೂಡ ಬೇಡಿದವರಿಗೆಲ್ಲ ಕಾಲಕಾಲಕ್ಕೆ ತಕ್ಕಂತೆ ದಾನ ಕೊಟ್ಟಿದ್ದೇನೆ” ಎಂದನು.
ಅದನ್ನು ಕೇಳಿ ಗೊಂಬೆ ನಸುನಕ್ಕು – “ಎಲೈ ರಾಜನೇ, ಇದೇ ಉಚಿತವಾದದ್ದಲ್ಲ. ಏನೆಂದರೆ ನೀನು ತಾನಾಗಿಯೇ ಆತ್ಮಸ್ತುತಿ ಮಾಡಿಕೊಳ್ಳುತ್ತಿದ್ದೀಯೆ. ಯಾರು ತನ್ನ ಗುಣಗಳನ್ನು ತಾನೇ ಹೊಗಳಿಕೊಳ್ಳುತ್ತಾನೋ ಅವನು ಎಂದೂ ಮಹಾತ್ಮನಾಗಲಾರ” ಎಂದು ಹೇಳಿತು.
ಗೊಂಬೆಯ ಮಾತನ್ನು ಕೇಳಿ ಆಶ್ಚರ್ಯಚಕಿತನಾದ ಭೋಜರಾಜನು ಆ ಗೊಂಬೆಗೆ – “ನೀನು ಸತ್ಯವನ್ನೇ ಹೇಳಿದೆ. ಯಾರು ತನ್ನ ಗುಣವನ್ನು ತಾನೇ ಹೊಗಳಿಕೊಳ್ಳುತ್ತಾನೋ ಅವನು ಮೂರ್ಖನೇ ಸರಿ. ನಾನು ಆತ್ಮಸ್ತುತಿ ಮಾಡಿಕೊಂಡೆ. ಅದು ಅನುಚಿತವೇ. ಅದಿರಲಿ, ಈ ಸಿಂಹಾಸನವು ಯಾರದ್ದೋ ಅವನ ಔದಾರ್ಯವನ್ನು ತಿಳಿಸು” ಎಂದನು.
ಗೊಂಬೆಯು ಹೇಳಿತು – ”ರಾಜನ್, ಇದು ವಿಕ್ರಮಾರ್ಕನ ಸಿಂಹಾಸನ. ಅವನು ಸಂತೋ?ಗೊಂಡರೆ ಯಾಚಕರಿಗೆ ಎ? ದಾನ ಕೊಡಬಲ್ಲವನಾಗಿದ್ದನು, ಗೊತ್ತಿದೆಯೆ? ಅಂಥವರಿಗೆ ಅವನು ಒಂದು ಕೋಟಿ ಬಂಗಾರದ ನಾಣ್ಯಗಳನ್ನು ಕೊಡುತ್ತಿದ್ದನು. ನಿನ್ನಲ್ಲಿ ಈ ರೀತಿಯ ಔದಾರ್ಯಗುಣವು ಇದೆಯೆ? ಇದೆ ಎಂದಾದರೆ ಈ ಸಿಂಹಾಸನದಲ್ಲಿ ಕುಳಿತುಕೋ” ಎಂದಿತು.
ರಾಜನು ಯಾವ ಉತ್ತರವನ್ನೂ ಹೇಳದೆ ಸುಮ್ಮನಾದನು
’ವಿಪ್ರಮನೋರಥಪೂರಣ’ ಎಂಬ ಎರಡನೆಯ ಕಥೆ
ಬಳಿಕ ಭೋಜರಾಜನು ಎರಡನೆಯ ಮೆಟ್ಟಿಲಿನ ಮೇಲೆ ಹೆಜ್ಜೆಯನ್ನಿಡಲು ತೊಡಗಿದಾಗ ಅಲ್ಲಿದ್ದ ಗೊಂಬೆಯು ಮನು?ವಾಣಿಯಿಂದ – ”ಎಲೈ ಮಹಾರಾಜ, ವಿಕ್ರಮನ ಶೌರ್ಯ, ಔದಾರ್ಯ, ಸತ್ತ್ವಾದಿ ಗುಣಗಳು ನಿನ್ನಲ್ಲಿ ಇವೆಯಾದರೆ ಮಾತ್ರ ನೀನು ಈ ಸಿಂಹಾಸನದಲ್ಲಿ ಕುಳಿತುಕೋ” ಎಂದಿತು.
ರಾಜನು ”ಎಲೈ ಗೊಂಬೆಯೇ, ಹಾಗಿದ್ದರೆ ವಿಕ್ರಮನ ಶೌರ್ಯ-ಔದಾರ್ಯಗಳು ಹೇಗಿದ್ದವು ಎಂದು ಹೇಳು” ಎಂದನು.
ಗೊಂಬೆ ಅದನ್ನು ಹೇಳಲು ಆರಂಭ ಮಾಡಿತು. ”ಎಲೈ ರಾಜನೇ, ಕೇಳು. ವಿಕ್ರಮಾದಿತ್ಯನು ರಾಜ್ಯವನ್ನು ಪಾಲಿಸುತ್ತ ಇರುವಾಗ ಒಮ್ಮೆ ಗೂಢಚಾರರನ್ನು ಕರೆದು – ”ಎಲೈ ದೂತರೆ, ನೀವೆಲ್ಲರೂ ಭೂಮಿಯಲ್ಲಿ ಎಲ್ಲ ಕಡೆ ಸಂಚಾರ ಮಾಡಿ. ನಿಮ್ಮ ಸಂಚಾರದ ಕಾಲದಲ್ಲಿ ಏನಾದರೂ ಕುತೂಹಲಕರವಾದ ಸಂಗತಿಯನ್ನು ಕಂಡರೆ ಅದನ್ನು ನನಗೆ ಹೇಳಿ. ನಾನು ಅಲ್ಲಿಗೆ ಹೋಗಿ ಅದನ್ನು ಪ್ರತ್ಯಕ್ಷ ನೋಡಲು ಬಯಸುತ್ತೇನೆ” ಎಂದು ಹೇಳಿದನು.
ಗೂಢಚಾರರು ರಾಜನ ಅಪ್ಪಣೆಯಂತೆ ತಿರುಗಾಟ ಮಾಡಲು ಅರಂಭಿಸಿದರು. ಹೀಗಿರಲು ಒಂದು ದೇಶವನ್ನೆಲ್ಲ ಸಂಚರಿಸಿ ಬಂದ ಒಬ್ಬ ಗೂಢಚಾರನು ಹೀಗೆ ನಿವೇದಿಸಿಕೊಂಡ – ”ಮಹಾರಾಜ, ಚಿತ್ರಕೂಟ ಪರ್ವತದ ಹತ್ತಿರ ತಪೋವನದ ಮಧ್ಯದಲ್ಲಿ ಅತ್ಯಂತ ಸುಂದರವಾದ ಒಂದು ದೇವಾಲಯ ಇದೆ. ಅಲ್ಲಿ ಪರ್ವತದ ಎತ್ತರದ ಸ್ಥಾನದಿಂದ ನಿರ್ಮಲವಾದ ಜಲಧಾರೆ ಬೀಳುತ್ತದೆ. ಆ ಜಲದಲ್ಲಿ ಸ್ನಾನ ಮಾಡಿದರೆ ಎಲ್ಲ ಮಹಾಪಾಪಗಳ ನಿವಾರಣೆ ಆಗುತ್ತದೆ. ಮಹಾಪಾಪ ಮಾಡಿದವರು ಆ ನೀರಿನಲ್ಲಿ ಸ್ನಾನ ಮಾಡಿದಾಗ ಅವರ ಶರೀರದಿಂದ ಕಪ್ಪಾದ ನೀರು ಹೊರಬರುತ್ತದೆ. ಅದರಿಂದ ಅವರು ಪಾಪವನ್ನು ಕಳೆದುಕೊಂಡು ಪುಣ್ಯಪುರು?ರಾಗುತ್ತಾರೆ. ನಾನು ಅಲ್ಲಿ ಒಬ್ಬ ಬ್ರಾಹ್ಮಣನನ್ನು ಕಂಡೆ. ಅವನು ಪ್ರತಿದಿನ ಅಲ್ಲಿರುವ ಹೋಮಕುಂಡದಲ್ಲಿ ಹವನ ಮಾಡುತ್ತಾನೆ. ಅವನಿಗೆ ಎ? ವ?ಗಳು ಕಳೆದವು ಎಂಬುದು ಯಾರಿಗೂ ಗೊತ್ತಿಲ್ಲ. ಅವನು ಆ ಕುಂಡದಿಂದ ಹೊರಹಾಕಿದ ಭಸ್ಮದ ರಾಶಿ ಪರ್ವತಾಕಾರವಾಗಿದೆ. ಆ ಬ್ರಾಹ್ಮಣನು ಯಾರ ಜೊತೆಗೂ ಮಾತನಾಡುವುದಿಲ್ಲ. ಇಂತಹ ಒಂದು ವಿಚಿತ್ರವನ್ನು ನಾನು ಕಂಡೆ.”
ಗೂಢಚಾರನ ಮಾತನ್ನು ಕೇಳಿ ಮಹಾರಾಜನಿಗೆ ಅತ್ಯಂತ ಕುತೂಹಲವಾಯಿತು. ಅದನ್ನು ನೋಡಲೇಬೇಕೆಂದು ಅವನು ತೀರ್ಮಾನಿಸಿದನು. ಕೂಡಲೇ ಅವನು ಅದೇ ಗೂಢಚಾರನೊಂದಿಗೆ ಹೊರಟು ಆ ಸ್ಥಾನಕ್ಕೆ ತಲಪಿದನು.
ಅಲ್ಲಿನ ಸೌಂದರ್ಯವನ್ನು ಕಂಡು ಅವನು ಪರಮಾನಂದಭರಿತನಾಗಿ ಹೀಗೆ ಹೇಳಿದನು – ”ಅಹೋ! ಈ ಸ್ಥಳ ಅತ್ಯಂತ ಪವಿತ್ರವಾಗಿದೆ. ಇಲ್ಲಿ ಸಾಕ್ಷಾತ್ ಜಗದಂಬಿಕೆ ನಿವಾಸವಾಗಿದ್ದಾಳೆ. ಈ ಸ್ಥಳವನ್ನು ನೋಡಿ ನಾನು ಧನ್ಯನಾದೆ.” ಹೀಗೆಂದು ಹೇಳಿ ಅವನು ಆ ಜಲಧಾರೆಯಲ್ಲಿ ಸ್ನಾನ ಮಾಡಿ, ದೇವತೆಯನ್ನು ನಮಸ್ಕರಿಸಿ, ಬ್ರಾಹ್ಮಣನು ಹೋಮ ಮಾಡುತ್ತಿದ್ದಲ್ಲಿಗೆ ಹೋಗಿ ಅವನನ್ನು ಕುರಿತು ”ಎಲೈ ಬ್ರಾಹ್ಮಣಶ್ರೇ?, ಎ? ವ?ಗಳಿಂದ ನೀನು ಹೀಗೆ ಹವನ ಮಾಡುತ್ತಿರುವೆ?” ಎಂದು ಕೇಳಿದನು.
ಬ್ರಾಹ್ಮಣನು ಹೇಳಿದನು – ”ಮಹಾಶಯ, ನಾನು ಹವನವನ್ನು ಆರಂಭಿಸಿದಾಗ ಸಪ್ತರ್ಷಿಮಂಡಲವು ರೇವತೀ ನಕ್ಷತ್ರದ ಪ್ರಥಮಪಾದದಲ್ಲಿತ್ತು. ಅದು ಈಗ ಅಶ್ವಿನೀ ನಕ್ಷತ್ರದಲ್ಲಿ ಇದೆ. ಅಂದರೆ ನಾನು ಹವನವನ್ನು ಆರಂಭಿಸಿ ನೂರು ವ?ಗಳೇ ಕಳೆದು ಹೋದವು. ಆದರೂ ದೇವತೆ ಪ್ರಸನ್ನಳಾಗಿಲ್ಲ” ಎಂದು.
ಅದನ್ನು ಕೇಳಿದ ಮಹಾರಾಜನಿಗೆ ಆಶ್ಚರ್ಯವಾಯಿತು. ದೇವತೆ ಏಕೆ ಪ್ರಸನ್ನಳಾಗಲಿಲ್ಲ ಎಂದು ಸಂಶಯವೂ ಆಯಿತು. ಕೊನೆಗೆ ಅವನು ತಾನೂ ಆ ದೇವತೆಯನ್ನು ಸ್ಮರಿಸಿ ಹೋಮಕುಂಡಕ್ಕೆ ಆಹುತಿಯನ್ನು ಅರ್ಪಿಸಿದನು. ಆಗಲೂ ದೇವತೆ ಪ್ರಸನ್ನಳಾಗಲಿಲ್ಲ. ಆಗ ಅವನು ’ನನ್ನ ತಲೆಯನ್ನೇ ಕತ್ತರಿಸಿ ದೇವತೆಗೆ ನೈವೇದ್ಯದ ರೂಪದಲ್ಲಿ ಅರ್ಪಿಸುತ್ತೇನೆ’ ಎಂದು ಮನಸ್ಸಿನಲ್ಲಿ ನಿಶ್ಚಯ ಮಾಡಿ ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಕುತ್ತಿಗೆಯತ್ತ ಬೀಸಲು ಸಿದ್ಧನಾದನು. ಆ ಕ್ಷಣದಲ್ಲೇ ದೇವತೆಯು ಪ್ರತ್ಯಕ್ಷಳಾಗಿ ಖಡ್ಗವನ್ನು ತಡೆದು, ”ರಾಜನೇ, ನಿನಗೆ ಪ್ರಸನ್ನಳಾಗಿದ್ದೇನೆ. ವರವನ್ನು ಬೇಡಿಕೋ” ಎಂದಳು.
ಮಹಾರಾಜನು, ”ದೇವಿ, ನನ್ನಂಥವನ ಎದುರು ನೀನು ಪ್ರತ್ಯಕ್ಷಳಾಗಿ ಬಂದು ಸ್ನೇಹಮಯಿಯಾಗಿ ಮಾತನಾಡಿದೆಯಲ್ಲ, ಇದಕ್ಕಿಂತ ಪರಮಾನಂದ ಮತ್ತೇನಿದೆ? ಆದರೂ ಕುತೂಹಲದಿಂದ ಒಂದು ಪ್ರಶ್ನೆಯನ್ನು ಕೇಳುತ್ತೇನೆ. ಈ ಬ್ರಾಹ್ಮಣನು ನೂರು ವ?ಗಳಿಂದಲೂ ಹವನ ಮಾಡುತ್ತಲೇ ಇದ್ದಾನೆ. ಇವನು ಯಾವುದೂ ಅಪರಾಧ ಮಾಡಿಲ್ಲ. ವಿಧಿನಿಯಮಗಳಲ್ಲಿ ಸ್ವಲ್ಪವೂ ಲೋಪ ಮಾಡಿಲ್ಲ. ಆದರೂ ಅವನಿಗೆ ಯಾಕೆ ನೀನು ಈವರೆಗೆ ಪ್ರಸನ್ನಳಾಗಿಲ್ಲ? ನನ್ನ ಯಾವ ಆ ರೀತಿಯ ಪೂಜೆಯ ಕಾರಣದಿಂದಾಗಿ ಇ? ಬೇಗ ನನಗೆ ಪ್ರಸನ್ನಳಾಗಿರುವೆ?” ಎಂದು ಕೇಳಿದನು.
ಅವಳು, ”ಎಲೈ ರಾಜನೆ, ಇವನು ತಾನು ಅನುಸರಿಸಬೇಕಾದ ಸಾಧನಾಪದ್ಧತಿಯನ್ನು ಬಿಟ್ಟು ಹವನ ಮಾಡುತ್ತಿದ್ದಾನೆ. ಅದೂ ಅಲ್ಲದೆ ಅವನ ಮನಸ್ಸಿನಲ್ಲಿ ಭಾವನೆಯೆ ಇಲ್ಲ.
ಮಂತ್ರೇ ತೀರ್ಥೇ ದ್ವಿಜೇ ದೇವೇ ದೈವಜ್ಞೇ
ಭೇ?ಜೇ ಗುರೌ |
ಯಾದೃಶೀ ಭಾವನಾ ಯತ್ರ ಸಿದ್ಧಿರ್ಭವತಿ
ತಾದೃಶೀ ||
(ಮಂತ್ರ, ತೀರ್ಥ, ಬ್ರಾಹ್ಮಣ, ದೇವರು, ಜ್ಯೌತಿಷಿಕ, ಔ?ಧಿ ಮತ್ತು ಗುರು – ಈ ವಿ?ಯಗಳಲ್ಲಿ ನಮಗೆ ಯಾವ ರೀತಿಯ ಭಾವನೆ ಇರುತ್ತದೆಯೋ ಅದೇ ರೀತಿಯ ಫಲವು ಸಿದ್ಧಿಸುತ್ತದೆ) ಎಂಬ ಮಾತೇ ಇದೆ. ಈ ಬ್ರಾಹ್ಮಣನ ಭಾವನೆ ಶುದ್ಧವಾಗಿಲ್ಲದ ಕಾರಣ ನಾನು ಪ್ರಸನ್ನಳಾಗಿಲ್ಲ” ಎಂದು ಹೇಳಿದಳು.
ಮಹಾರಾಜನಿಗೆ ಸಮಾಧಾನವಾಯಿತು. ಅವನು ”ದೇವಿ, ನನಗಾಗಿ ಏನನ್ನೂ ನಾನು ಬೇಡುವುದಿಲ್ಲ. ಆದರೂ ನೀನು ನನ್ನಲ್ಲಿ ಪ್ರಸನ್ನಳಾಗಿರುವುದು ನಿಜವಾಗಿದ್ದರೆ ಈ ಬ್ರಾಹ್ಮಣನ ಕೋರಿಕೆಯನ್ನು ಪೂರೈಸು” ಎಂದು ಕೇಳಿಕೊಂಡನು.
ಅವಳು, ”ರಾಜನ್, ತಥಾಸ್ತು, ಹಾಗೇ ಆಗಲಿ” ಎಂದು ಹೇಳಿ ಆ ಬ್ರಾಹ್ಮಣನ ಮನೋರಥವನ್ನೂ ಪೂರ್ಣಗೊಳಿಸಿದಳು. ರಾಜನೂ ಸಂತೋ?ಗೊಂಡು ತನ್ನ ರಾಜಧಾನಿಗೆ ಹಿಂದಿರುಗಿದನು.”
ಈ ಕಥೆಯನ್ನು ಹೇಳಿ ಗೊಂಬೆಯು ಭೋಜರಾಜನಿಗೆ ”ಎಲೈ ರಾಜನೇ, ಈ ರೀತಿಯ ಧೈರ್ಯ-ಔದಾರ್ಯಗಳು ನಿನ್ನಲ್ಲಿ ಇರುವುದಾದರೆ ಈ ಸಿಂಹಾಸನದಲ್ಲಿ ಕುಳಿತುಕೋ” ಎಂದು ಹೇಳಿತು.
ಆಗ ಭೋಜರಾಜನು ಸುಮ್ಮನಾದನು.
(ಮುಂದುವರಿಯುವುದು)
’ದ್ವಾತ್ರಿಂಶತ್ ಪುತ್ಥಲಿಕಾ ಸಿಂಹಾಸನಮ್’ ಕಥೆಗಳು
Month : March-2020 Episode : Author : ಶಾಂತಲಾ ವಿಶ್ವಾಸ