
ಮೇ 12, 2020ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಿದ್ದು ಎಲ್ಲರಿಗೂ ತಿಳಿದಿದೆ. ಪ್ರಧಾನಿಯವರು ಲಾಕ್ಡೌನ್ ವಿಚಾರವಾಗಿ ಮಾತನಾಡುತ್ತಾರೆ ಎಂದೇ ದೇಶದ ಜನತೆಯ ನಿರೀಕ್ಷೆಯಾಗಿತ್ತು. ಆದರೆ ನಮ್ಮ ಪ್ರಧಾನಿಯವರ ಕಾರ್ಯವೈಖರಿಯೇ ವಿಭಿನ್ನ. ನಮ್ಮಲ್ಲಿ ಬಹುತೇಕ ಎಲ್ಲ ರಾಜಕೀಯ ಪಕ್ಷಗಳಲ್ಲೂ ಒಂದು ರೀತಿಯ ಗೊಂದಲವಿದೆ. ಅವರಿಗೆ ತಮ್ಮ ಕರ್ತವ್ಯವೇನು, ಅಧಿಕಾರಿಗಳ ಕರ್ತವ್ಯವೇನು ಎಂಬುದರ ಅರಿವಿನ ಕೊರತೆ ಇರುವುದನ್ನು ಕಾಣುತ್ತೇವೆ; ಈವತ್ತಿನ ಹೆಚ್ಚಿನ ಸಿನೆಮಾಗಳಲ್ಲಿ ಕಂಡುಬರುವ ಹಾಗೆ ಒಬ್ಬನೇ ನಟ ಸಿನೆಮಾದ ಮೊದಲ ತಾಸಿನಲ್ಲಿ ಹೀರೋ ಆಗುತ್ತಾನೆ; ಎರಡನೇ ತಾಸಿನಲ್ಲಿ […]