
ಬಡ ರೈತರ ಮತ್ತು ಮಹಿಳೆಯರ ಜೀವನವನ್ನು ಸುಸ್ಥಿರ ಕೃಷಿ ಮತ್ತು ಆರ್ಥಿಕಸೇರ್ಪಡೆಯ ಮೂಲಕ ಉತ್ತಮಪಡಿಸುವ ದಿಶೆಯಲ್ಲಿ ಐ.ಡಿ.ಎಫ್. ಸಂಸ್ಥೆ ೨೦೦೯ರಲ್ಲಿ ‘ಸುಜೀವನ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿ ತನ್ನ ಚಟುವಟಿಕೆಯನ್ನು ಪ್ರಾರಂಭಿಸಿತು. ಪ್ರಾರಂಭದಲ್ಲಿ ೧೩ ಹಳ್ಳಿಗಳಲ್ಲಿ ಪ್ರಾರಂಭವಾದ ಚಟುವಟಿಕೆ, ಅನಂತರ ತಾಲ್ಲೂಕಿನ ಎಲ್ಲ ೬ ಹೋಬಳಿಗೂ ವಿಸ್ತರಿಸಿತು. ಇದೀಗ ೨೦೧೦ರಿಂದ ಐ.ಡಿ.ಎಫ್. ಸಂಸ್ಥೆಯ ಪ್ರೇರಣೆಯಿಂದ ಜನ್ಮತಾಳಿದ ಕುಣಿಗಲ್ ‘ಐ.ಡಿ.ಎಫ್. ಸುಜೀವನ ಒಕ್ಕೂಟ’ ಕಾರ್ಯಕ್ರಮದ ಜವಾಬ್ದಾರಿಯನ್ನು, ಹಂತಹಂತವಾಗಿ ಹೊತ್ತುಕೊಂಡು, ತಾನೇ ನಿರ್ವಹಿಸುತ್ತಿದೆ. ಸುಜೀವನ ಒಕ್ಕೂಟ […]