“ಅನಂತ್, ನಿನ್ನನ್ನು ಒಂದು ಪ್ರಯೋಗಕ್ಕೆ ಒಳಪಡಿಸುತ್ತಿದ್ದೇವೆ. ಇದರಲ್ಲಿ ನಿನ್ನ ಮೊದಲ ಜೀವನದ ಮಾಸಿಹೋದ ನೆನಪಿನ ಬದಲಿಗೆ ಮೃತ ವ್ಯಕ್ತಿಯೊಬ್ಬನ ನೆನಪುಗಳನ್ನು ಪೂರ್ತಿಯಾಗಿ ವರ್ಗಾಯಿಸಿ ನಿನ್ನಲ್ಲಿ ಆ ಸ್ಮöÈತಿ ಗೋಚರವಾಗುವಂತೆ ಮಾಡಲಿದ್ದೇವೆ. ಅದು ಯಶಸ್ವಿಯಾದರೆ, ನೀನು ರಾ ಏಜೆಂಟ್ ಅಮರ್ ಆಗಿ ಬದಲಾಗುತ್ತೀಯೆ – ಬುದ್ಧಿಯಲ್ಲಿ, ವರ್ತನೆಯಲ್ಲಿ. ಆತ ಈಗ ಜೀವಶ್ಚವವಾಗಿದ್ದಾನೆ. ಅವನ ಮೆಮೊರೀಸ್ ನಿನಗೆ ಕೊಟ್ಟಾಗ ಅವನು ತನ್ನ ರಹಸ್ಯ ಮಿಷನ್ ಒಂದರಲ್ಲಿ ಮಾಡಿದ ಕೆಲಸಗಳ ನೆನಪು ಬಂದು ನೀನು ಅದರಂತೆ ಮಾಡಿದರೆ ನಮ್ಮ ದೇಶದ ಸುರಕ್ಷತೆ […]
ಪ್ರಾಜೆಕ್ಟ್ ಪ್ರತಿಸ್ಮೃತಿ
Month : July-2024 Episode : Author : ನಾಗೇಶ್ಕುಮಾರ್ ಸಿ.ಎಸ್.