ವ್ಯಾಧಿಗ್ರಸ್ತನಾದ ರೋಗಿಗೆ ಆರೋಗ್ಯವನ್ನು ದೊರಕಿಸಿಕೊಡುವಲ್ಲಿ ಸದ್ವೈದ್ಯನಾದವನು ಆಪ-ಪರ ಭಾವವನ್ನು ವಹಿಸಲಾರನು. ಹುದಲಲ್ಲಿ ಸಿಕ್ಕುಬಿದ್ದ ಆಕಳನ್ನು ಕಂಡು ನೊಂದುಕೊಂಡ ಅಂತಃಕರಣವುಳ್ಳವನು ಅದನ್ನು ಮೇಲಕ್ಕೆ ತೆಗೆಯಲು ಪ್ರಯತ್ನಿಸುವನೇ ಹೊರತು, ಅದು ಹಿಂಡುವದೋ ಬರಡಾದುದೊ ಎಂಬುದನ್ನು ವಿಚಾರಿಸುತ್ತ ಕೂಡ್ರಲಾರನು. ಮಡುವಿನಲ್ಲಿ ಮುಳುಗುವವನನ್ನು ಕಂಡು ದಯಾರ್ದ್ರನಾದ ಸಮರ್ಥನು ಅವನು ಅಂತ್ಯಜನೋ ಬ್ರಾಹ್ಮಣನೊ ಎಂದು ವಿಚಾರಿಸುತ್ತ ಕೂಡ್ರದೆ, ಅವನನ್ನು ದಂಡೆಗೆ ಮುಟ್ಟಿ ಪ್ರಾಣವನ್ನು ರಕ್ಷಿಸುವದೇ ತನ್ನ ಕರ್ತವ್ಯವೆಂದು ತಿಳಿಯುವನು. ಅರಣ್ಯದಿಂದ ಕಳ್ಳರಿಂದ ವಸ್ತ್ರವನ್ನು ಸೆಳೆದುಕೊಂಡು ನಗ್ನಳಾದ ಸ್ತ್ರೀಯನ್ನು ಕಂಡ ಶಿಷ್ಟನು, ಅವಳಿಗೆ ವಸ್ತçವನ್ನು ಹೊದಿಸದೆ […]
ಕಾಲದ ಕ್ರೀಡೆ
Month : February-2026 Episode : Author : ಸಂತ ಜ್ಞಾನೇಶ್ವರ ಮಹಾರಾಜರು










