ಗೋವ ಕಾವ ಹುಡುಗ, ನೀ ಹೋಗಬೇಡ ಈಗ ಕಾಯಿಸಿದ ಹಾಲು ಕೊಡುವೆ, ಕಲ್ಲುಸಕ್ಕರೆ ಕೊಡುವೆ ಕೈತುಂಬ ಬೆಣ್ಣೆ ಕೊಡುವೆ, ಹೊರಗೆಲ್ಲು ಹೋಗಬೇಡ || ಕಾಯಿಸಿದ ಹಾಲು ಬೇಡ, ಕಲ್ಲುಸಕ್ಕರೆ ಬೇಡ ಉಲ್ಲಾಸದಿ ಗೋವ ಕಾಯ್ದು ಒಂದು ಕ್ಷಣದಿ ಮರಳಿ ಬರುವೆ ಹೋಗಬೇಕು ಅಮ್ಮ, ನೀನು ತಡೆವುದೇತಕಮ್ಮ || ಯಮುನಾ ನದಿ ದಡದಿ ಕಳ್ಳರೆಲ್ಲ ಬಹಳಿಹರು ಕಳ್ಳರು ಬಂದು ನಿನ್ನ ಹೊಡೆಯೆ ಭಯಪಡುವೆ ಕಣ್ಮಣಿಯೆ ಗೋವ ಕಾವ ಹುಡುಗ, ನೀ ಹೋಗಬೇಡ ಈಗ || ಕಳ್ಳರನ್ನು ಕಂಡವರು ಇದ್ದಾರೊ […]













