
ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಸಂಪಾದಕರುಗಳೆಲ್ಲರೂ ಒಂದೆಡೆ ಸೇರಿ ಸಮಾಜಕ್ಕೆ ಎಂತಹ ಸುದ್ದಿಗಳನ್ನು ನೀಡಬೇಕು ಎಂಬ ಕುರಿತು ಗಂಭೀರ ಚರ್ಚೆ ನಡೆಸಬೇಕಾದ ಅಗತ್ಯವಿದೆ ಎಂದು ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ನ ಪ್ರಧಾನ ಸಂಪಾದಕರಾದ ರವಿ ಹೆಗಡೆ ಅವರು ಅಭಿಪ್ರಾಯಪಟ್ಟಿದ್ದಾರೆ. ಅವರು ಬೆಂಗಳೂರಿನ ಉತ್ಥಾನ ಮಾಸಪತ್ರಿಕೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿಮಾತನಾಡಿದರು. ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿರಲು ಹಲವು ಕಾರಣಗಳಲ್ಲಿ ಮಾಧ್ಯಮದ ಪಾತ್ರ ಕೂಡ ಒಂದು ಎಂಬುದು ಸತ್ಯ. ಇದನ್ನು ಬದಲಿಸಬೇಕಾದ ಅಗತ್ಯವಿದೆ. ಅದಕ್ಕಾಗಿ ಮಾಧ್ಯಮಗಳ ಪ್ರಮುಖರು ಬಂದುಗೂಡಿ ಎಂತಹ ಸುದ್ದಿಗಳನ್ನು ಸಮಾಜಕ್ಕೆ ನೀಡಬೇಕು ಎಂಬ ಕುರಿತು ಸುದೀರ್ಘ ಚರ್ಚೆ ನಡೆಸಬೇಕಾದ ಅಗತ್ಯವಿದೆ ಎಂದರು. ವೈಚಾರಿಕತೆ, ಸಂಶೋಧನೆಯಿಂದ ಪ್ರಾರಂಭಿಸಿ ಆರೋಗ್ಯದ ತನಕ ನಾವು ಎಲ್ಲ ವಿಷಯಗಳನ್ನು ವಿದೇಶೀ ಮಾನದಂಡಗಳ ಆಧಾರದಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ಆದರೆ ಇದು ದೇಶ- ಕಾಲಕ್ಕೆ ಭಿನ್ನವಾಗಿರುತ್ತದೆ. ಈ ವಾಸ್ತವವನ್ನು ಮನಸ್ಸಿನಲ್ಲಿಟ್ಟುಕೊಂಡು ನಮ್ಮ ಸಂಶೋಧನೆಗಳು […]