ಮನುಷ್ಯನ ಹುಟ್ಟು ಮತ್ತು ಸಾವು ಹೇಗೆ ನಿಗೂಢವೋ ಹಾಗೆಯೇ ಅವನ ಶರೀರರಚನೆ, ಮನಸ್ಸು, ಚಿಂತನೆಗಳು ಕೂಡಾ. ದೇಹ, ಮನಸ್ಸು, ಬುದ್ಧಿ ಇತ್ಯಾದಿ ಶಕ್ತಿಗಳು ದೇವರ ವರಪ್ರಸಾದದಿಂದಲೇ ಲಭ್ಯವಾಗುವಂತಹದ್ದು. ಇವುಗಳನ್ನು ಸರಿಯಾದ ಮಾರ್ಗದಲ್ಲಿ ಉದ್ದೀಪನಗೊಳಿಸಿ ನಮ್ಮ ಚೇತನವನ್ನು ಬಲಗೊಳಿಸಿದಾಗ ಮಾತ್ರ ಸಚ್ಚಿದಾನಂದ ತೃಪ್ತಿ ಸಾಧ್ಯ. ಅದನ್ನೇ ಮೋಕ್ಷವೆನ್ನುವರು. ಆದರೆ ನಾವೇನು ಮಾಡುತ್ತಿದ್ದೇವೆ? ಬೇಡದಿರುವ ವಿಚಾರಗಳಲ್ಲಿ ನಮ್ಮ ದೇಹ, ಮನಸ್ಸು, ಬುದ್ಧಿಗಳನ್ನು ತೊಡಗಿಸುತ್ತಾ ನಮ್ಮ ಶಕ್ತಿಯನ್ನು ನಾಶಮಾಡಿಕೊಳ್ಳುತ್ತಿದ್ದೇವೆ. ತೀವ್ರವಾಗಿ ಆಲೋಚಿಸಿದಾಗ, ನಮ್ಮಲ್ಲಿ ದೈವೀಕ ಅಂಶ ಕಡಮೆಯಾಗುತ್ತಿದೆಯೆಂದು ನಮಗೇ ಅನಿಸುವುದಲ್ಲವೇ? ಕಾರಣವೇನು? […]
`ವಿಶ್ವ ಯೋಗದಿನ’ ಒಂದು ಹಾರೈಕೆ
Month : June-2015 Episode : Author : ಶ್ರೀಧರಮೂರ್ತಿ ಬೆಂಗಳೂರು