ನಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ, ನಿರ್ಲಿಪ್ತತೆಯಿಂದ, ಸ್ಥಿತಪ್ರಜ್ಞೆಯಿಂದ ಮಾಡಿದಾಗಲೇ ನಮಗೆ ಶಾಂತಿ ದೊರಕುತ್ತದೆ. ಬಾಹ್ಯದಲ್ಲಾಗಲಿ, ಆಂತರ್ಯದಲ್ಲಾಗಲಿ ಸಂಘರ್ಷ ನಡೆಯುತ್ತಿರುವಾಗ ಮನಸ್ಸನ್ನು ಸಮಸ್ಥಿತಿಯಲ್ಲಿಡಬೇಕು… ಜಗತ್ತಿನಲ್ಲಿ ಪ್ರತಿಯೊಬ್ಬರೂ ಶಾಂತಿಯನ್ನು ಬಯಸುತ್ತಾರೆ. ನಮ್ಮ ಬಯಕೆಯೇನೋ ಶಾಂತಿಯನ್ನು ಪಡೆಯುವುದು; ಆದರೆ ಜೀವಮಾನವೆಲ್ಲ ನಡೆಸುವುದು ಮಾತ್ರ ಅಶಾಂತಿಯನ್ನುಂಟುಮಾಡುವ ಕಾರ್ಯಗಳನ್ನೇ! ಯುದ್ಧದ ನಂತರ ಶಾಂತಿ ಎಂದರೆ ಅದೊಂದು ಸ್ಮಶಾನ ಶಾಂತಿ. ಇದು ಹೇಗೆಂದರೆ ಸತ್ತ ಮೇಲೆ ಶಾಂತಿ ಸಿಗುತ್ತದೆ ಎಂದು ಆತ್ಮಹತ್ಯೆ ಮಾಡಿಕೊಂಡಂತೆ. ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ವುಡ್ರೋ ವಿಲ್ಸನ್ ಜನವರಿ […]
ಅಶಾಂತಿಯಿಂದ ಶಾಂತಿಯೆಡೆಗೆ
Month : June-2017 Episode : Author : ಡಾ|| ಕೆ. ಜಗದೀಶ ಪೈ