ಈಶ್ವರನ ವಾಕ್ಯವು ನಮ್ಮ ಕಿವಿಗೆ ಬೀಳಬೇಕಾದರೆ ನಾವು ವ್ಯವಹಾರದ ಗದ್ದಲವನ್ನು ಕಡಮೆ ಮಾಡಿಕೊಳ್ಳಬೇಕು. ನಮಗೆ ದಿನದಿನವೂ ಒದಗುತ್ತಿರುವ ಸುಖದುಃಖಗಳ ಯೋಚನೆಯನ್ನು ಒಂದಿ? ಬದಿಗಿಟ್ಟು ಚಿತ್ತವಿಟ್ಟು ನಮ್ಮೊಳಗೇ ಕೇಳುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಈಶ್ವರನ ವಾಕ್ಯವೆಂದರೆ ಒಂದು ಬಗೆಂii ಧ್ವನಿಯಲ್ಲ. ಯಾವುದೋ ತಪಸ್ಸನ್ನು ಮಾಡಿದರೆ ಆ ಬಗೆಯ ಆಕಾಶವಾಣಿಯು ಕೇಳಬರುತ್ತದೆಯೆಂದೇನೂ ಅಭಿಪ್ರಾಯವಲ್ಲ. ಬಹುದೂರದಲ್ಲಿ ಮಾತನಾಡಿದವರ ಧ್ವನಿಯನ್ನು ಭೌತಿಕಶಾಸ್ತ್ರಜ್ಞರು ತಂತಿಯಿಲ್ಲದ ಯಂತ್ರವಿಶೇ?ದಿಂದ ಗ್ರಹಿಸುವ ಹಾಗೆ, ನಮ್ಮಲ್ಲಿರುವ “ಮನಸ್ಸಾಕ್ಷಿ” ಎಂಬ ಯಂತ್ರವನ್ನು ಉಪಯೋಗಿಸಿಕೊಂಡು ಕೇಳಿದರೆ ನಮಗೆ ಆಗುವ ಪ್ರೇರಣೆಯೇ ಈಶ್ವರವಾಕ್ಯ. ಸಾಮಾನ್ಯವಾಗಿ ನಮಗೆ […]
ನಿಮ್ಮೊಳಗೇ ಕಿವಿಗೊಟ್ಟು ಆಲೈಸಿರಿ
Month : January-2018 Episode : Author : ಶ್ರೀ ಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳು