ಭಾರತೀಯ ಪಾರಂಪರಿಕ ಕಲೆಯ ಅನನ್ಯತೆಯೆಂದರೆ ಧಾರ್ಮಿಕತೆ ಮತ್ತು ಕಲೆಗಳ ಪರಸ್ಪರ ಅನ್ಯೋನ್ಯಾಶ್ರಯವನ್ನು ಚಿತ್ರಕಲೆ ಮತ್ತು ಶಿಲ್ಪಕಲೆಗಳು ಬಿಂಬಿಸಿರುವುದು. ಪಾರಲೌಕಿಕ ಜಿಜ್ಞಾಸೆ, ಧಾರ್ಮಿಕತೆ, ಕಲೆ – ಇವು ಮೂರೂ ಸಮ್ಮಿಳಿತವಾಗಿರುವುದು ಇಲ್ಲಿಯ ವಿಶೇಷತೆ. ಮಂತ್ರದರ್ಶನ, ತತ್ತ್ವಜಿಜ್ಞಾಸೆ, ಸೌಂದರ್ಯಾನುಭೂತಿ – ಇವು ಒಂದರ ಮೇಲೆ ಇನ್ನೊಂದು ಹೇಗೆ ಪ್ರಭಾವ ಬೀರುತ್ತ ಬಂದವೆಂಬುದರ ಭವ್ಯ ಅಭಿವ್ಯಕ್ತಿಯನ್ನು ಐದಾರು ಸಾವಿರ ವರ್ಷಗಳ ಕಲಾನುಸಂಧಾನದಲ್ಲಿ ಕಾಣುತ್ತೇವೆ. ಅನ್ಯ ದೇಶಗಳಿಗಿಂತ ಬಹುಪಾಲು ಹೆಚ್ಚು ಸಮೃದ್ಧವಾಗಿರುವ ಭಾರತೀಯ ವಾಸ್ತುಕಲೆಯಲ್ಲಿ ಎದ್ದುಕಾಣುವ ಸಂಗತಿಯೆಂದರೆ ದೇವದೇವತೆಗಳ ಮತ್ತು ಪೌರಾಣಿಕ ಆಖ್ಯಾನಗಳ ಸಾಂಕೇತಿಕತೆಯ ಅರಿವು […]
ವೇದಾರ್ಥಾನುಸಂಧಾನ ಮತ್ತು ವರ್ಣಚಿತ್ರ ಮಾಧ್ಯಮ
Month : September-2018 Episode : Author : ಎಸ್.ಆರ್. ರಾಮಸ್ವಾಮಿ