https://issuu.com/utthanamagazine/docs/9_utthana_september_2019_final
ಉತ್ಥಾನ ಸೆಪ್ಟೆಂಬರ್ 2019
Month : October-2019 Episode : Author :
Month : October-2019 Episode : Author :
Month : October-2019 Episode : Author : ರಾಧಾಕೃಷ್ಣ ಕಲ್ಚಾರ್
ಆಶ್ರಮದ ಆವಾರದ ಹೊರಗೆ ಎರಡು ರಥಗಳು ಒಂದರ ಹಿಂದೆ ಒಂದೊಂದು ನಿಂತಿದ್ದವು. ರಭಸವಾಗಿ ಬಂದ ಕಾರಣ ರಥಚಕ್ರಗಳು ಎಬ್ಬಿಸಿದ ಧೂಳಿನ ಪರದೆ ನಿಧಾನವಾಗಿ ನೆಲಕ್ಕಿಳಿಯುತ್ತಿತ್ತು. ಅದರ ಹಿಂದೆ ಅಸ್ಪಷ್ಟವಾದ ಮೂರು ಮತ್ತೊಂದು ಆಕೃತಿಗಳು ಗೋಚರಿಸುತ್ತಿದ್ದವು. ಧೂಳು ಸರಿದು ನಿಚ್ಚಳವಾದಾಗ ಭೀಮಾರ್ಜುನ ಕೃಷ್ಣರು ನಾವಿದ್ದ ಕಡೆಗೆ ನಡೆದು ಬರುತ್ತಿದ್ದರು. ಅವರ ಹಿಂದೆ ಯುಧಿಷ್ಠಿರನೂ ಕಾಣಿಸಿದ. ಕೃಷ್ಣನ ಮುಖದಲ್ಲಿ ಎಂದಿನ ತಿಳಿಯಾದ ನಗು. ಆದರೆ ಸಾಯುಧರಾಗಿದ್ದ ಭೀಮಾರ್ಜುನರಿಬ್ಬರ ಮುಖಗಳು ನಿಗಿನಿಗಿ ಕೆಂಡಗಳಂತೆ ಉರಿಯುತ್ತಿದ್ದವು. ಬಹುಶಃ ನಾನು ಮಾಡಿದ ಅನಾಹುತ ತಿಳಿದು […]
Month : September-2019 Episode : Author : ಸತ್ಯನಾರಾಯಣ ಶಾನುಭಾಗ್
ಆರ್ಟಿಕಲ್ 370ರ ಅಡಿಯಲ್ಲಿ ಪ್ರತ್ಯೇಕ ಸ್ಥಾನಮಾನ ರದ್ದು – ಹಳೆಯ ಪ್ರಮಾದದ ಉತ್ಪಾಟನ ಕಳೆದ ಏಳು ದಶಕಗಳಿಂದ ಭಾರತದ ಮುಕುಟಮಣಿ ಜಮ್ಮು-ಕಾಶ್ಮೀರಕ್ಕೆ ಹಿಡಿದಿದ್ದ ಗ್ರಹಣ ಬಿಡುವ ಐತಿಹಾಸಿಕ ಕ್ಷಣ ಕೊನೆಗೂ ನಿರ್ಮಾಣವಾಯಿತು. ಆರ್ಟಿಕಲ್ 370 ಮತ್ತು ಅದರ ದುರುಪಯೋಗದಿಂದ ಭಾರತದ ಸಂವಿಧಾನ ಸೇರಿದ್ದ ಆರ್ಟಿಕಲ್ 35ಎ – ಇವು ಜಮ್ಮು-ಕಾಶ್ಮೀರಕ್ಕೆ ಹಿಡಿದಿದ್ದ ರಾಹು-ಕೇತುಗಳು. ಹೊರನೋಟದಿಂದ ಸಂವಿಧಾನದ ಈ ಎರಡು ಆರ್ಟಿಕಲ್ಗಳು ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುತ್ತವೆ, ಸ್ವಾಯತ್ತ ಆಡಳಿತ ಹಾಗೂ ಅಭಿವೃದ್ಧಿಗೆ ಪೂರಕ, ಕಾಶ್ಮೀರಿಯತ್ತಿನ ಉಳಿವಿಗೆ ಸಹಕಾರಿ, […]
Month : September-2019 Episode : Author : ಸತ್ಯನಾರಾಯಣ ಶಾನುಭಾಗ್
ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್-ನಿರ್ಮಿತ ಕಗ್ಗಂಟಾಗಿದ್ದ, ಆ ಪ್ರಾಂತಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ಮತ್ತು 35-ಎ ವಿಧಿಗಳ ರದ್ದತಿಗೂ ಜಮ್ಮು-ಕಾಶ್ಮೀರ ಮತ್ತು ಲಢಾಖ್ ಭಾಗಗಳನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಘೋಷಿಸುವುದಕ್ಕೂ ಕೇಂದ್ರಸರ್ಕಾರಕ್ಕೆ ಅಧಿಕಾರ ನೀಡಿದ 2019 ಆಗಸ್ಟ್ 5-6ರ ಸಂಸತ್ತಿನ ನಿರ್ಣಯ ಐತಿಹಾಸಿಕವಾಗಿದೆ. ಈ ನಿರ್ಣಯ ಎಂದೋ ಆಗಬೇಕಿತ್ತು ಎಂಬುದು ಇಡೀ ದೇಶದ ಏಕಸ್ವರದ ಪ್ರತಿಕ್ರಿಯೆಯಾಗಿದೆ. ಲೋಕಸಭೆಯಲ್ಲಿ ದಿನಾಂಕ 6ರಂದು ಚರ್ಚೆಯ ಅನಂತರ ನಡೆದ ಮತದಾನದಲ್ಲಿ ಗೊತ್ತುವಳಿಯ ಪರವಾಗಿ 351 ಮತಗಳೂ ವಿರುದ್ಧವಾಗಿ 72 ಮತಗಳೂ ಚಲಾವಣೆಯಾದವು. ಹೀಗೆ […]
Month : September-2019 Episode : ಭಾಗ - 9 Author : ರಾಧಾಕೃಷ್ಣ ಕಲ್ಚಾರ್
ನಾನೀಗ ಒಂಟಿಯಾಗಿದ್ದೆ. ಮನಸ್ಸು ಕೊತಕೊತ ಕುದಿಯುತ್ತಿತ್ತು. ಕೃಪ ಕೃತವರ್ಮರಿಬ್ಬರೂ ನನ್ನನ್ನು ಬಿಟ್ಟು ಹೊರಟು ಹೋದರು. ನಾನು ಎಲ್ಲಿ ಹೋಗಲಿ? ಇಷ್ಟು ಹೊತ್ತಿಗಾಗಲೇ ನಾನು ಮಾಡಿದ ದಾರುಣ ಕೊಲೆ ಎಲ್ಲರಿಗೂ ತಿಳಿದಿರುತ್ತದೆ. ಆಚಾರ್ಯಪುತ್ರ ಅಶ್ವತ್ಥಾಮ ರಾತ್ರಿಹೊತ್ತು ಶಿಬಿರಕ್ಕೆ ನುಗ್ಗಿ ಮಲಗಿದ್ದ ಯೋಧರನ್ನು ಕಡಿದು ಕೊಂದ ಎಂಬ ವಾರ್ತೆ ಪಾಂಡವರ ಕಿವಿಗೂ ಬಿದ್ದಿರುತ್ತದೆ. ತಮ್ಮ ಸೇನಾನಿಯನ್ನು, ತಮಗಾಗಿ ಹೋರಾಡಿ ಗೆಲುವು ತಂದುಕೊಟ್ಟ ಸೈನಿಕರನ್ನು, ಅದಕ್ಕಿಂತ ಹೆಚ್ಚಾಗಿ ಎಳೆಯ ಉಪಪಾಂಡವರನ್ನು ಕತ್ತರಿಸಿ ಕೊಲೆ ಮಾಡಿದ ನನ್ನ ಕುರಿತು ಆಕ್ರೋಶ ಮುಗಿಲು ಮುಟ್ಟಿರುತ್ತದೆ. […]
Month : September-2019 Episode : Author : ಬಿ.ಪಿ. ಪ್ರೇಮ್ ಕುಮಾರ್
ಮುಕ್ತಿ ಸೋಪಾನ – ಜಲಾಲಾಬಾದ್ ಪ್ರತಿಯೊಬ್ಬರ ಹೆಗಲ ಮೇಲೆ ಪೆÇಲೀಸ್ ಬಂದೂಕು, ಬೆನ್ನ ಮೇಲೆ ಕಾಡತೂಸುಗಳ ಚೀಲ, ಬಂದೂಕನ್ನು ಸ್ವಚ್ಛಗೊಳಿಸಲು ಬೇಕಾಗುವ ಕಬ್ಬಿಣದ ಕಂಬಿ ಮತ್ತು ಎಣ್ಣೆ ಡಬ್ಬಿ, ಕುಡಿಯುವ ನೀರಿನ ಪಾತ್ರೆ – ಇಷ್ಟನ್ನೂ ಹೊತ್ತ ಐವತ್ತಾರು ಸೈನಿಕರ ಕ್ರಾಂತಿಸೇನೆ ರಾತ್ರಿಯ ಕತ್ತಲಿನಲ್ಲಿ ಗುಡ್ಡದ ಕಡೆಗೆ ನಡೆಯಲಾರಂಭಿಸಿತು. ಹಸಿದ ಹೊಟ್ಟೆ, ಬಾಯಾರಿದ ದೇಹ! ಹೆಜ್ಜೆಗಳನ್ನು ಕಿತ್ತು ಕಿತ್ತು ಮುಂದೆ ಹಾಕುತ್ತ ಸಾಗುತ್ತಲಿದೆ ಯುವಕರ ತಂಡ. ಆದರೂ ಮನಸ್ಸಿನಲ್ಲಿ ಸಾಮ್ರಾಜ್ಯವಾದಿ ಸರಕಾರವನ್ನು ಸದೆಬಡಿದ ಅಮಲು. ಕತ್ತಲಿನಲ್ಲಿ ಬಹಳಷ್ಟು […]
Month : September-2019 Episode : Author : ಡಾ. ಅನಸೂಯಾದೇವಿ
ಆಧ್ಯಾತ್ಮಿಕ ಲೇಖನಮಾಲೆ – 1 ನ ಗುರೋರಧಿಕಂ ತತ್ತ್ವಂ ನ ಗುರೋರಧಿಕಂ ತಪಃ | ತತ್ತ್ವಜ್ಞಾನಾತ್ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ || ಪ್ರಾಚೀನ ಭಾರತವು ಜಗತ್ತಿಗೆ ನೀಡಿರುವ ಅದ್ಭುತವಾದ ಗುರುಸ್ತುತಿ ಇದು, ಅನನ್ಯವಾದ ಸಂದೇಶ ಕೂಡ ಹೌದು. “ಗುರುವಿಗಿಂತಲೂ ಅಧಿಕವಾದ ತಪಸ್ಸಿಲ್ಲ, ಗುರುವಿಗಿಂತಲೂ ಅಧಿಕವಾದ ತತ್ತ್ವವಿಲ್ಲ, ತತ್ತ್ವಜ್ಞಾನಕ್ಕಿಂತಲೂ ಶ್ರೇಷ್ಠವಾದದ್ದು ಯಾವುದೂ ಇಲ್ಲ. ಆದ್ದರಿಂದ ಶ್ರೀಗುರುವನ್ನು ನಮಿಸುತ್ತೇನೆ.” ತತ್ತ್ವದ ಮೂರ್ತರೂಪವಾದ ಗುರುವು ನಮ್ಮ ಬದುಕಿನ ಪಯಣದಲ್ಲಿ ಚುಕ್ಕಾಣಿಗನಾಗಿ ನಮ್ಮೊಂದಿಗೆ ಸಂಚರಿಸುತ್ತಾನೆ ಎಂಬ ಮಾತಿದೆ. ಗುರುಶಕ್ತಿಯನ್ನು ಮೀರಿದ್ದು ಈ […]
Month : August-2019 Episode : Author :
Month : August-2019 Episode : Author :
‘ಸಿನೆಮಾ ಸಂಗೀತಕ್ಕೇ ಹೋಗಬೇಡಿ, ನಿಸರ್ಗದಲ್ಲೇ ಸಂಗೀತವಿದೆ; ಆಸ್ವಾದಿಸಿ’ ಎಂದ ಹಂಸಲೇಖ ಇನ್ನೂ ತಂತ್ರಜ್ಞಾನ ಮುನ್ನೆಲೆಗೆ ಬಂದಿರದ ಕಾಲ; ಸಿನೆಮಾಗಳು ಇನ್ನೇನು ತನ್ನ ಹೆಜ್ಜೆಗಳನ್ನಿಡುತ್ತ ದೃಢವಾಗಿ ನಿಲ್ಲುವ ಹಂತದಲ್ಲಿದ್ದ ಕಾಲ. ಅಂತಹ ಸಮಯದಲ್ಲಿ ಕನ್ನಡ ಸಿನೆಮಾಕ್ಕೆ ಉತ್ತಮ ಗುಣಮಟ್ಟದ ಸಂಗೀತ, ಸಾಹಿತ್ಯವನ್ನು ನೀಡಿದ ಕೀರ್ತಿ ಹಂಸಲೇಖ ಅವರಿಗೆ ಸಲ್ಲುತ್ತದೆ. ಸುಮಾರು 30 ವರ್ಷಗಳಿಂದ ಕನ್ನಡ ಸಿನೆಮಾ ಸಂಗೀತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತ ಬಂದಿರುವ ಹಂಸಲೇಖ ಅವರದ್ದು ರಂಗಭೂಮಿ, ಸಿನೆಮಾ, ಜಾನಪದ – ಹೀಗೆ ಸಂಗೀತ-ಸಾಹಿತ್ಯಗಳಲ್ಲಿ ಬಹುಮುಖವಾದ ಮೇರುವ್ಯಕ್ತಿತ್ವ. ಅವರು ಸಂಗೀತಕ್ಷೇತ್ರದ […]
Month : August-2019 Episode : Author : ವಿ. ಮನೋಹರ್
ಸಂಗೀತದ ಆರಂಭ ಎಲ್ಲಿಂದ ಎನ್ನುವ ಪ್ರಶ್ನೆಯನ್ನು ನಾವು ನಮ್ಮ ಮುಂದೆ ಇರಿಸಿಕೊಂಡರೆ: ನಮ್ಮ ಪುರಾಣಗಳ ಪ್ರಕಾರ ಶ್ರೀಕೃಷ್ಣ ದ್ವಾಪರಯುಗದಲ್ಲಿದ್ದ ಎಂಬುದೊಂದು ಕಲ್ಪನೆ. ಸುಮಾರು 5,050 ವರ್ಷಗಳ ಹಿಂದೆ ಕೃಷ್ಣ ಜನಿಸಿದ ಎಂದು ಹೇಳುತ್ತಾರೆ. ಹೀಗೆ 5,000 ವರ್ಷಗಳ ಹಿಂದೆ ಇದ್ದ ಕೃಷ್ಣ ಕೊಳಲು ಊದುತ್ತಿದ್ದ. ಕೊಳಲು ಊದುತ್ತಿದ್ದ ಎಂದರೆ ಹೇಗೆ? ಸುಮ್ಮನೆ ಊದುತ್ತಿದ್ದನಾ ಅಥವಾ ರಾಗಸಹಿತವಾಗಿ ಊದುತ್ತಿದ್ದನಾ? ಕೊಳಲಿನ ನಾದ, ಅಂದರೆ ಸಂಗೀತದ ರಾಗದೊಂದಿಗೆ ಊದುತ್ತಿದ್ದ ಅಂದುಕೊಳ್ಳಬಹುದು. ಅಂದರೆ ಆ ಕಾಲದಿಂದ ಸಂಗೀತ, ನಾಟ್ಯ, ನೃತ್ಯ, ಗಂಧರ್ವರು, […]