
ಮೊನ್ನೆ ಬೆಳಗ್ಗೆ ನಮ್ಮ ಮನೆಯ ಹತ್ತಿರದ ಹಳ್ಳಿಯ ಕೆರೆ ಕಡೆಗೆ ಹೋಗಿದ್ದೆ. ಅಪಾರ್ಥ ಮಾಡ್ಕೋಬೇಡಿ. ಈ ಹಿಂದೆ ಹಳ್ಳಿಗಳ ಕಡೆ ಹೇಳ್ತಿದ್ರಲ್ಲ ‘ಒಸಿ ಕೆರೆ ಕಡೀಕ್ ಹೋಗ್ ಬತ್ತೀನಿ’ ಅಂತ. ನಾನು ಹೋಗಿದ್ದು ಅದಕ್ಕಲ್ಲ. ಈಗೀಗ ಹಳ್ಳಿಯವರೂ ಕೆರೆ ಕಡೆಗೆ ಅದಕ್ಕೆ ಹೋಗುವುದಿಲ್ಲ ಅನ್ನಿ – ‘ಸ್ವಚ್ಛ ಭಾರತ್ ಅಭಿಯಾನ್’ ಎಫೆಕ್ಟು! ಇರಲಿ, ವಿಷಯಕ್ಕೆ ಬರೋಣ. ನಾನು ಕೆರೆ ಕಡೆಗೆ ಹೋಗಿದ್ದು ಅಲ್ಲಿ ಕಾಣಸಿಗುವ ಹಕ್ಕಿಗಳ ಫೋಟೋ ತೆಗೆಯುವುದಕ್ಕೆ. ಹಾಗೆ ಹೊರಟಾಗ ನನಗೆ ಸಾಥ್ ನೀಡಿದ್ದು, ರಜಕ್ಕೆಂದು […]