
ಗಾಂಧೀಯ ಅರ್ಥಶಾಸ್ತ್ರ ಭಾರತದಲ್ಲಿ ಆಹಾರಸಮಸ್ಯೆ ಇದೆ ಎನ್ನುವುದನ್ನು ಗಾಂಧಿಯವರು ಮನಗಂಡಿದ್ದರು. ದೇಶದ ಅನೇಕ ಭಾಗಗಳಲ್ಲಿರುವ ಅದರಲ್ಲೂ ಬಡತನ ಮತ್ತು ನಿರುದ್ಯೋಗದಿಂದ ನರಳುತ್ತಿರುವ ಬಹಳಷ್ಟು ಭಾರತೀಯರಿಗೆ ಅಗತ್ಯ ಪ್ರಮಾಣದಲ್ಲಿ ಆಹಾರ ಸಿಗುತ್ತಿಲ್ಲ ಎನ್ನುವುದರ ಅರಿವು ಅವರಿಗಿತ್ತು. ಹಸಿವಿನಿಂದ ನರಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದುದನ್ನು ಅವರು ಗಮನಿಸಿದ್ದರು. ಆದಕಾರಣ ಭಾರತವು ಆಹಾರ ಉತ್ಪಾದನೆಯಲ್ಲಿ ‘ಸ್ವಾವಲಂಬಿ’ ಆಗಬೇಕು, ಹಸಿವಿನಿಂದ ಯಾರೂ ನರಳಬಾರದು ಎಂಬುದು ಅವರ ಆಶಯವಾಗಿತ್ತು. ಆದರೆ ಆಹಾರಸಮಸ್ಯೆಗೆ ಅವರ ವಿಶ್ಲೇಷಣೆ ಇತರರಿಗಿಂತ ವಿಭಿನ್ನವಾಗಿತ್ತು. ಭಾರತದಲ್ಲಿ ಆಹಾರಸಮಸ್ಯೆ ಜನಸಂಖ್ಯಾ ಹೆಚ್ಚಳದಿಂದ ಉಂಟಾದುದಲ್ಲ ಎಂಬ […]